• 18 ಅಕ್ಟೋಬರ್ 2024

ಭಾರತದ ಪ್ರಾಂತ್ಯಗಳನ್ನು ಬೇರೆ ದೇಶದವರು ಆಕ್ರಮಿಸಿಕೊಂಡಿದ್ದಾರೆ, ಆದರೆ ಅದರ ಬಗ್ಗೆ ಜಗತ್ತು ಮೌನ ವಹಿಸಿವೆ: ಎಸ್ ಜೈಶಂಕರ್

 ಭಾರತದ ಪ್ರಾಂತ್ಯಗಳನ್ನು ಬೇರೆ ದೇಶದವರು ಆಕ್ರಮಿಸಿಕೊಂಡಿದ್ದಾರೆ, ಆದರೆ ಅದರ ಬಗ್ಗೆ ಜಗತ್ತು ಮೌನ ವಹಿಸಿವೆ: ಎಸ್ ಜೈಶಂಕರ್
Digiqole Ad

ಭಾರತದ ಪ್ರಾಂತ್ಯಗಳನ್ನು ಬೇರೆ ದೇಶದವರು ಆಕ್ರಮಿಸಿಕೊಂಡಿದ್ದಾರೆ, ಆದರೆ ಅದರ ಬಗ್ಗೆ ಜಗತ್ತು ಮೌನ ವಹಿಸಿವೆ: ಎಸ್ ಜೈಶಂಕರ್

ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕ‌ರ್  ಉಕ್ರೇನ್- ರಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಜಪಾನ್ ಪ್ರವಾಸದಲ್ಲಿರುವ ಜೈಶಂಕರ್, ಭಾರತ-ಜಪಾನ್ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, ಯುಕ್ರೇನ್- ರಷ್ಯಾ ಸಂಘರ್ಷದಲ್ಲಿ ರಷ್ಯಾವನ್ನು ಟೀಕಿಸದೇ ಇರುವ ಭಾರತದ ನೀತಿಯನ್ನು ದ್ವಿಮುಖ ನೀತಿ ಎಂದುಕೊಳ್ಳಬಹುದೇ? ಎಂಬ ಪ್ರಶ್ನೆಗೆ, ಭಾರತದ ಪ್ರಾಂತ್ಯಗಳನ್ನು ಬೇರೆ ದೇಶದವರು ಆಕ್ರಮಿಸಿಕೊಂಡಿದ್ದಾರೆ, ಆದರೆ ಅದರ ಬಗ್ಗೆ ಜಗತ್ತು ಮೌನ ವಹಿಸಿವೆ ಎಂದು ವಿದೇಶಾಂಗ ಸಚಿವರು ಹೇಳಿದರು.ಜಗತ್ತು ಒಂದು ಸಂಕೀರ್ಣವಾದ ಸ್ಥಳವಾಗಿದೆ ಮತ್ತು ಜಗತ್ತಿನಲ್ಲಿ ಅನೇಕ ಪ್ರಮುಖ ತತ್ವಗಳು ಮತ್ತು ನಂಬಿಕೆಗಳಿವೆ ಎಂಬುದು ನನ್ನ ನಿಲುವು. ಕೆಲವು ಸಂದರ್ಭಗಳಲ್ಲಿ ದೇಶಗಳು ಒಂದು ಸಮಸ್ಯೆಯನ್ನು, ಒಂದು ಸನ್ನಿವೇಶವನ್ನು, ಒಂದು ತತ್ವವನ್ನು ಆರಿಸಿಕೊಳ್ಳುತ್ತವೆ. ಏಕೆಂದರೆ ಅದು ಅವರಿಗೆ ಸರಿ ಹೊಂದುತ್ತದೆ ಎಂಬ ಕಾರಣಕ್ಕೆ ಅವರು ಅದನ್ನು ಹೈಲೈಟ್ ಮಾಡುತ್ತಾರೆ ಎಂದು ಹೇಳಿದರು. ನಮಗೆ ಬೇಕಾದ್ದನ್ನು ಆಯ್ಕೆ ಮಾಡಿ ಉಳಿದದ್ದನ್ನು ಬಿಟ್ಟುಬಿಡುವ ತತ್ವವನ್ನು ಭಾರತ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದೆ ಎಂದು ಹೇಳಿದರು.

ನಮಗೆ ಸ್ವಾತಂತ್ರ್ಯ ಬಂದ ಬೆನ್ನಲ್ಲೇ ಆಕ್ರಮಣಶೀಲತೆಯನ್ನು ಅನುಭವಿಸಿದ್ದೇವೆ, ಇದು ಯುದ್ಧದ ಯುಗ ಎಂದು ನಾವು ನಂಬುವುದಿಲ್ಲ ಮತ್ತು ಸಂಘರ್ಷವನ್ನು ಮಾತುಕತೆ ಮೂಲಕ ಪರಿಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಹೇಳಿದ್ದನ್ನು ಜೈಶಂಕರ್ ಪುನರುಚ್ಚರಿಸಿದರು.


ಈ ಸುದ್ದಿಯನ್ನು ಓದಿದ್ದೀರಾ.?

Digiqole Ad

ಈ ಸುದ್ದಿಗಳನ್ನೂ ಓದಿ