• 18 ಅಕ್ಟೋಬರ್ 2024

ಎಲೆಕ್ಟ್ರಿಕ್ ಸವಾರರಿಗೆ ಬಿಗ್ ಶಾಕ್ ; ಆ್ಯಪ್ ಆಧಾರಿತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆ ರದ್ದು

 ಎಲೆಕ್ಟ್ರಿಕ್ ಸವಾರರಿಗೆ ಬಿಗ್ ಶಾಕ್ ; ಆ್ಯಪ್ ಆಧಾರಿತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆ ರದ್ದು
Digiqole Ad

ಎಲೆಕ್ಟ್ರಿಕ್ ಸವಾರರಿಗೆ ಬಿಗ್ ಶಾಕ್ ; ಆ್ಯಪ್ ಆಧಾರಿತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆ ರದ್ದು

ರಾಜ್ಯದಲ್ಲಿ ಆ್ಯಪ್ ಆಧಾರಿತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಯನ್ನು ರದ್ದು ಪಡಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ -2021ನ್ನು ರದ್ದುಗೊಳಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ಇದರಿಂದಾಗಿ ಇನ್ನು ಮುಂದೆ ಯಾರೂ ಎಲೆಕ್ಟ್ರಿಕ್‌ ಬೈಕ್‌ಗಳನ್ನು ಹಣ ಪಡೆದು ಸೇವೆ ನೀಡಲು ಬಳಸುವಂತಿಲ್ಲ.

ಇದರಿಂದ ಆಯಪ್‌ ಆಧಾರಿತ (App based Services) ರ‍್ಯಾಪಿಡೊ, ಓಲಾ (Rapido Ola service) ಮೊದಲಾದ ಸಂಸ್ಥೆಗಳು ನಡೆಸುತ್ತಿದ್ದ ಸೇವೆಗೆ ಕಡಿವಾಣ ಬಿದ್ದಂತಾಗಿದೆ.

ಅಂದಿನ ಬಿಜೆಪಿ ಸರ್ಕಾರವು 2021ರ ಜುಲೈ 14ರಂದು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿತ್ತು. ಕಾಂಗ್ರೆಸ್ ಸರ್ಕಾರಕ್ಕೆ ಸಾರ್ವಜನಿಕರಿಂದ ಕೇಳಿಬಂದ ಕೆಲವು ದೂರುಗಳು ಮತ್ತು ಸಮೀಕ್ಷೆಯ ಬಳಿಕ ಅನುಮತಿಯನ್ನು ವಾಪಸ್ಸು ಪಡೆದುಕೊಂಡಿದೆ.

ಕಾಂಗ್ರೆಸ್ ಸರ್ಕಾರ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ರದ್ದುಗೊಳಿಸಿ ಆದೇಶ ಹೊರಡಿಸಿದೆ.

Digiqole Ad

ಪ್ರವೀಣ ಕಾಸರಗೋಡು

https://goldfactorynews.com

ಈ ಸುದ್ದಿಗಳನ್ನೂ ಓದಿ