• 27 ಜುಲೈ 2024

ಐದು ದಿನಗಳ ಭೇಟಿಗೆ ಭಾರತಕ್ಕೆ ಬಂದ ಭೂತಾನ್ ಪ್ರಧಾನಿ ಟೊಬಗೆ.

 ಐದು ದಿನಗಳ ಭೇಟಿಗೆ ಭಾರತಕ್ಕೆ ಬಂದ ಭೂತಾನ್ ಪ್ರಧಾನಿ ಟೊಬಗೆ.
Digiqole Ad

ಐದು ದಿನಗಳ ಭೇಟಿಗೆ ಭಾರತಕ್ಕೆ ಬಂದ ಭೂತಾನ್ ಪ್ರಧಾನಿ ಟೊಬಗೆ.

ನವದೆಹಲಿ: ಭೂತಾನ್‌ ಪ್ರಧಾನಿ ಶೆರಿಂಗ್‌ ಟೊಬಗೆ ಅವರು 5 ದಿನಗಳ ಭಾರತ ಪ್ರವಾಸಕ್ಕಾಗಿ ಗುರವಾರ ರಾಷ್ಟ್ರ ರಾಜಧಾನಿಗೆ ಬಂದಿಳಿದಿದ್ದಾರೆ. ಜನವರಿಯಲ್ಲಿ ಅಧಿಕಾರವಹಿಸಿಕೊಂಡ ಬಳಿಕ ಟೊಬಗೆ ಅವರ ಮೊದಲ ವಿದೇಶ ಪ್ರವಾಸ ಇದಾಗಿದೆ. ಭಾರತಕ್ಕೆ ಆಗಮಿಸಿದ ಟೊಬಗೆ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಅಶ್ವಿನಿ ಕುಮಾ‌ರ್ ಚೌಬೆ ಅವರು ಸ್ವಾಗತಿಸಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.? ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ!

ಇಂಧನ ದಕ್ಷತೆಯ ಕ್ಷೇತ್ರದಲ್ಲಿ ಸಹಕಾರವನ್ನು ವಿಸ್ತರಿಸುವ ಕುರಿತು ಭಾರತ ಮತ್ತು ಭೂತಾನ್ ನಡುವೆ ಒಡಂಬಡಿಕೆಗೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಟೊಬಗೆ ಅವರ ಭೇಟಿಯು ಭಾರತ ಮತ್ತು ಭೂತಾನ್ ನಡುವೆ ಇರುವ ಉತ್ತಮ ಸ್ನೇಹಕ್ಕೆ ಉದಾಹರಣೆಯಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಐದು ದಿನಗಳ ವಾಸ್ತವ್ಯದ ಅವಧಿಯಲ್ಲಿ ಟೊಬಗೆ ಅವರು ರಾಷ್ಟ್ರಪತಿ ದೌಪದಿ ಮುರ್ಮುರನ್ನು ಭೇಟಿಯಾಗಲಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ವ್ಯಾಪಕ ಮಾತುಕತೆಗಳನ್ನು ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಈ ಸುದ್ದಿಯನ್ನು ಓದಿದ್ದೀರಾ.?ಬಂಡೀಪುರಕ್ಕೆ ಸಫಾರಿಗೆ ತೆರಳುವ ಪ್ರವಾಸಿಗರಿಗೆ 1 ಕೋಟಿ ರೂ. ವಿಮೆ ಜಾರಿ

ಟೊಬಗೆ ಮುಂಬೈಗೂ ಭೇಟಿ ನೀಡಲಿದ್ದಾರೆ. ಟೊಬಗೆ ಅವರೊಂದಿಗೆ ಆಗಮಿಸಿರುವ ಉನ್ನತ ಮಟ್ಟದ ನಿಯೋಗವು ಹಲವಾರು ಸಂಪುಟ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೂ ಟೊಬಗೆ ಜೊತೆಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

GOLD FACTORY NEWS

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ