ಚಾಕೊಲೇಟ್ ಎಂದು ತಿಳಿದು ಇಲಿ ಪಾಷಾಣ ಸೇವಿಸಿ ವಿದ್ಯಾರ್ಥಿನಿ ಸಾವು
ಚಾಕೊಲೇಟ್ ಎಂದು ತಿಳಿದು ಇಲಿ ಪಾಷಾಣ ಸೇವಿಸಿ ವಿದ್ಯಾರ್ಥಿನಿ ಸಾವು
ಹಾವೇರಿ: ಇಲಿ ಪಾಷಾಣವನ್ನು ಚಾಕಲೇಟ್ ಎಂದು ತಿಳಿದು ಸೇವಿಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಹಾವೇರಿಯ ಇಜಾರಿ ಲಕಮಾಪುರದಲ್ಲಿ ನಡೆದಿದೆ.
ಈ ಸುದ್ದಿ ಓದಿದ್ದೀರಾ…. ಗೌರಿ ಮತ್ತು ಗಣೇಶ ಚತುರ್ಥಿ ಹಬ್ಬದ ಮಹತ್ವ
ಪವಿತ್ರಾ ಮಡಿವಾಳ(15) ಮೃತಪಟ್ಟ ವಿದ್ಯಾರ್ಥಿನಿ. ಮನೆಯಲ್ಲಿ ಇಲಿಗಳ ಹಾವಳಿ ಹೆಚ್ಚಾಗಿದ್ದರಿಂದ ತಂದೆ ಇಲಿ ಪಾಷಾಣವನ್ನು ತಂದಿಟ್ಟಿದ್ದಾರೆ.
ಆದರೆ ಪವಿತ್ರ ಅದರ ಪಕ್ಕದಲ್ಲಿ ಚಾಕೊಲೇಟ್ ಇಟ್ಟು ಶಾಲೆಗೆ ಹೋಗಿ ಹೋಗಿದ್ದಾಳೆ. ಮಧ್ಯಾಹ್ನ ಪರೀಕ್ಷೆ ಮುಗಿಸಿ ಮನೆಗೆ ಬಂದ ಪವಿತ್ರಾ ಚಾಕೊಲೇಟ್ ಎಂದು ತಿಳಿದು ಇಲಿ ಪಾಷಾಣವನ್ನು ತಿಂದಿದ್ದಾಳೆ.
ಈ ಸುದ್ದಿ ಓದಿದ್ದೀರಾ…ಬ್ರ್ಯಾಂಡೆಡ್ ಡಿಟರ್ಜೆಂಟ್ ಪೌಡರ್ ನಕಲು: 20 ಲಕ್ಷ ರೂ. ಮೌಲ್ಯದ ವಸ್ತುಗಳು ಸೀಜ್, ಓರ್ವ ವಶಕ್ಕೆ
ಇದರಿಂದಾಗಿ ಅಸ್ವಸ್ಥರಾಳಾದ ಪವಿತ್ರಾ ವಾಂತಿ ಮಾಡಿಕೊಂಡಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಗಿ ಎಂದು ತಂದೆ ದೂರು ನೀಡಿದ್ದಾರೆ.