• 27 ಜುಲೈ 2024

ವೆನ್ಲಾಕ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಇಲ್ಲ ಎಂದು ದೂರು ನೀಡಿದವರಿಗೆ ಉತ್ತರ ನೀಡಿದ ಅದೀಕ್ಷಕರು

 ವೆನ್ಲಾಕ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಇಲ್ಲ ಎಂದು ದೂರು ನೀಡಿದವರಿಗೆ ಉತ್ತರ ನೀಡಿದ ಅದೀಕ್ಷಕರು
Digiqole Ad

ವೆನ್ಲಾಕ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಇಲ್ಲ ಎಂದು ದೂರು ನೀಡಿದವರಿಗೆ ಉತ್ತರ ನೀಡಿದ ಅದೀಕ್ಷಕರು

ಮಂಗಳೂರಿನಲ್ಲಿರುವ ವೆನ್ಲಾಕ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ವೆನ್ಲಾಕ್‌ ಜಿಲ್ಲಾಸ್ಪತ್ರೆಯಲ್ಲಿ ಕಡಿಮೆ ಅವಧಿಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು ತಿಳಿಸಿದ್ದಾರೆ. ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಸಾರ್ವಜನಿಕರೋರ್ವರು ಪೊಲೀಸರಿಗೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಅಧೀಕ್ಷಕರು ಈ ಹೇಳಿಕೆ ನೀಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 175 ವರ್ಷಗಳಿಂದ ದಕ್ಷಿಣ ಕನ್ನಡ ಮಾತ್ರವಲ್ಲದೇ! ಸುತ್ತಲಿನ ಏಳೆಂಟು ಜಿಲ್ಲೆಗಳು ಮತ್ತು ನೆರೆಯ ಕೇರಳ ರಾಜ್ಯದ ರೋಗಿಗಳಿಗೂ ಸಮರ್ಪಕ ಸೇವೆ ಸಲ್ಲಿಸುತ್ತಿದೆ. ತುರ್ತು ಚಿಕಿತ್ಸೆಗೆ ಮೂಲ ಸೌಕರ್ಯಗಳು ಲಭ್ಯವಿದೆ.

ಈ ಸುದ್ದಿ ಓದಿದ್ದೀರಾ,?:ಅಪಾಯವನ್ನು ಕೈಬೀಸಿ ಕರೆಯುತ್ತಿರುವ ರಸ್ತೆ ಬದಿಯ ಸಾಲು ಸಾಲು ಮರಗಳು

ಮಾ.18ರಂದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯನಿರತ ವೈದ್ಯಾಧಿಕಾರಿ, ಕೆಎಂಸಿ ತಜ್ಞ ವೈದ್ಯರು, ಶುಶ್ರೂಷಾಧಿಕಾರಿಗಳು ಮತ್ತು ಸಿಬಂದಿ ಕರ್ತವ್ಯದಲ್ಲಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ತತ್‌ಕ್ಷಣವೇ ತುರ್ತುಚಿಕಿತ್ಸೆ ನೀಡಲಾಗಿದೆ. ರೋಗಿ ಚೇತರಿಸಿ ಕೊಂಡಿದ್ದಾರೆ. ವೆನ್ಲಾಕ್‌ ನಲ್ಲಿ ಕ್ಯಾಶು ವಲ್ಟಿ ಕ್ರಿಟಿಕಲ್‌ ಕೇರ್‌ ಏರಿಯಾದಲ್ಲಿ 6 ಬೆಡ್‌ಗಳು, ಎಕ್ಸ್‌ಟೆಂಡೆಡ್‌ ಕ್ಯಾಶುವಲ್ಟಿಯಲ್ಲಿ 8 ಬೆಡ್‌ಗಳು ಹಾಗೂ ಕ್ಯಾಶುವಲ್ಟಿ ಎಮರ್ಜೆನ್ಸಿ ಐಸಿ ಯು ನಲ್ಲಿ 12 ಬೆಡ್‌ಗಳಿದ್ದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಬೆಡ್‌ಗಳ ಕೊರತೆ ಇಲ್ಲ ಎಂದವರು ತಿಳಿಸಿದ್ದಾರೆ.

ಕೆಲವೊಮ್ಮೆ ಅಂತರ್ಜಾಲ, ಸರ್ವರ್‌ ತೊಂದರೆಯಿಂದಾಗಿ ಹೊರ ರೋಗಿಗಳಿಗೆ ಚೀಟಿ ನೀಡಲು ವಿಳಂಬವಾಗುತ್ತಿದ್ದು, ಮ್ಯಾನುವಲ್‌ ಎಂಟ್ರಿ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ವೆನ್ಲಾಕ್‌ ಜಿಲ್ಲಾಸ್ಪತ್ರೆಯು ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನೊಂದಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರಕಾರಿ ತಜ್ಞ ವೈದ್ಯರು, ಕೆಎಂಸಿ ತಜ್ಞ ವೈದ್ಯರು, ಸ್ನಾತಕೋತ್ತರ ವೈದ್ಯರು ಹಾಗೂ ಎಂಬಿಬಿಎಸ್‌ ಗೃಹ ವೈದ್ಯರ ಚಿಕಿತ್ಸೆ ಆ ಜಿಲ್ಲೆಯ ಬಡ ಜನರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?:ಪತ್ಯೇತರ ಚಟುವಟಿಕೆಗಳಲ್ಲೂ ವಿಧ್ಯಾರ್ಥಿಗಳು ಪ್ರತಿಭಾವಂತರಾಗಿ’: ಡಾ.ಮಂರ್ತ ಗೌಡ

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ