ಬೆಳ್ತಂಗಡಿ : ವಿದೇಶಕ್ಕೆ ಹೋಗಲು ವೀಸಾ ನೀಡುವುದಾಗಿ ಹೇಳಿ ವ್ಯಕ್ತಿಯಿಂದ ವಂಚನೆ ಆರೋಪ.
ಬೆಳ್ತಂಗಡಿ : ವಿದೇಶಕ್ಕೆ ಹೋಗಲು ವೀಸಾ ನೀಡುವುದಾಗಿ ಹೇಳಿ ವ್ಯಕ್ತಿಯಿಂದ ವಂಚನೆ ಆರೋಪ.
ಬೆಳ್ತಂಗಡಿ: ಪೋಲ್ಯಾಂಡ್ ದೇಶಕ್ಕೇ ಕೆಲಸಕ್ಕೆ ಹೋಗಲು
ವೀಸಾ ನೀಡುವುದಾಗಿ ವ್ಯಕ್ತಿಗೆ ಭರವಸೆ ನೀಡಿ ಲಕ್ಷಾಂತರ ರೂಪಾಯಿ ಹಣ ಪಡೆದು, ವೀಸಾ ನೀಡದೆ, ಪಡೆದ ಹಣವನ್ನು ಹಿಂತಿರುಗಿಸದೇ ವಂಚಿಸಿದ ಆರೋಪಿಯ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಈ ಸುದ್ದಿಯನ್ನು ಓದಿದ್ದೀರಾ.?ಆಧಾರ್ ಉಚಿತ ತಿದ್ದುಪಡಿ ಗಡುವು ವಿಸ್ತರಣೆ
ಬೆಳ್ತಂಗಡಿ ತಾಲೂಕು, ಅರಸಿನಮಕ್ಕಿ ನಿವಾಸಿ ರೆಜಿ ಕೆ ಎ ಎಂಬವರ ಮಗ ಆಲ್ವಿನ್ ಕೆ.ಆರ್ ಎಂಬವರೇ ಲಕ್ಷಾಂತರ ರೂಪಾಯಿ ಕಳೆದುಕೊಂಡು ವಂಚನೆಗೊಳಗಾದ ವ್ಯಕ್ತಿ. ಆರೋಪಿಯನ್ನು ಮನೋಜ್ ಎಂದು ಹೇಳಲಾಗಿದೆ. ಆಲ್ವಿನ್ ಕೆ.ಎ ಅವರಿಗೆ ಮನೋಜ್ ಅವರು ಪೋಲ್ಯಾಂಡ್ ದೇಶದಲ್ಲಿ ಕೆಲಸಕ್ಕೆ ತೆರಳಲು ವೀಸಾ ನೀಡುವುದಾಗಿ ನಂಬಿಸಿ 2023 ರ ಮೇ.22 ರಿಂದ ಮಂಗಳವಾರದವರೆಗೆ ಮಾರ್ಚ್ 19 2024ರ ನಡುವಿನ ಅವಧಿಯಲ್ಲಿ ವಿವಿಧ ಕಾರಣ ನೀಡಿ ಹಂತ ಹಂತವಾಗಿ ಒಟ್ಟು 2.50 ಲಕ್ಷ ರೂಪಾಯಿ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಈ ಸುದ್ದಿಯನ್ನು ಓದಿದ್ದೀರಾ.?ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರವೇ ನೀಡುತ್ತೆ 50,000 ಬಡ್ಡಿ ರಹಿತ ಸಾಲ! 🤩
ಇದುವರೆಗೂ ವೀಸಾವನ್ನೂ ನೀಡದೆ, ನೀಡಿದ ಹಣವನ್ನೂ ವಾಪಾಸು ನೀಡದೆ ವಂಚಿಸಿರುವುದಾಗಿ ಆಲ್ವಿನ್ ಅವರು ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/2024 ಕಲಂ 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನೂ ಕೈಗೆತ್ತಿಕೊಂಡಿದ್ದಾರೆ.
GOLDFACTORYNEWS.COM
the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.
Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.