ಕೇರಳದ ಪುರಕ್ಕಾಡ್ನಲ್ಲಿ ತೀರದಿಂದ 50 ಮೀಟರ್ ಹಿಂದೆ ಸರಿದ ಸಮುದ್ರ: ಸ್ಥಳೀಯರಲ್ಲಿ ಆತಂಕ.!
ಕೇರಳದ ಪುರಕ್ಕಾಡ್ನಲ್ಲಿ ತೀರದಿಂದ 50 ಮೀಟರ್ ಹಿಂದೆ ಸರಿದ ಸಮುದ್ರ; ಸ್ಥಳೀಯರಲ್ಲಿ ಆತಂಕ.!
ಪುರಕ್ಕಾಡ್: ಕೇರಳದ ಪುರಕ್ಕಾಡ್‌ನಲ್ಲಿ ಸಮುದ್ರವು ಏಕಾಏಕಿ ತೀರದಿಂದ ಸುಮಾರು 50 ಮೀಟರ್ ಹಿಂದೆ ಸರಿದಿದ್ದು ಕರಾವಳಿಯ ನಿವಾಸಿಗರಲ್ಲಿ ಆತಂಕವನ್ನು ಉಂಟು ಮಾಡಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಅಯ್ಯಂಕೋಯಿಕ್ಕಲ್‌ನಿಂದ ಪುರಕ್ಕಾಡ್ ಬೀಚ್‌ನ ದಕ್ಷಿಣಕ್ಕೆ ಎಸ್‌ಡಿವಿ ಶಾಲೆಯವರೆಗೆ 500 ಮೀಟರ್ ಉದ್ದದ ತೀರದುದ್ದಕ್ಕೂ ಸಮುದ್ರವು ಹಿಂದೆಸರಿದಿದೆ ಎನ್ನಲಾಗಿದೆ.
ಈ ಸುದ್ದಿಯನ್ನು ಓದಿದ್ದೀರಾ.?ದ್ವೀಪರಾಷ್ಟ್ರದ ಕೂಗಳತೆ ದೂರದಲ್ಲೇ ಭಾರತದ ನೌಕಾನೆಲೆ ಕಾರ್ಯಾರಂಭ.ಚೀನಾಗೇ ತಲೆನೋವು?
ಮಾ.19 ಮಂಗಳವಾರ ಬೆಳಿಗ್ಗೆ 6.30 ಕ್ಕೆ ಈ ವಿದ್ಯಮಾನ ಘಟಿಸಿದ್ದು ಜನರು ಭಯಗೊಂಡಿದ್ದಾರೆ. 2004 ರ ಸುನಾಮಿ ಸಂದರ್ಭದಲ್ಲೂ ಇಂತಹ ವಿದ್ಯಾಮಾನ ನಡೆದಿತ್ತು ಎಂದು ಸ್ಥಳೀಯರು ಮತ್ತೆ ನೆನಪಿಸಿಕೊಂಡಿದ್ದಾರೆ. ಸಮುದ್ರ ಹಿಂದಕ್ಕೆ ಸರಿದಿರುವ ಕಾರಣ ದಡದಲ್ಲಿ ಹೂಳು ತುಂಬಿರುವುದರಿಂದ ಪುರಕ್ಕಾಡ್ ಕರಾವಳಿಗೆ ಮೀನುಗಾರಿಕಾ ದೋಣಿಗಳು ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸ್ಥಳೀಯ ಮೀನುಗಾರರು ಮಾತನಾಡಿದ್ದು, ಇದೊಂದು ನಿಯಮಿತ ವಿದ್ಯಮಾನವಾಗಿದ್ದು ಪ್ರತಿವರ್ಷವೂ ಸಮುದ್ರ ಹಿಂದೆ ಸರಿಯುವ ಘಟನೆ ನಡೆಯುತ್ತದೆ.
ಈ ಸುದ್ದಿಯನ್ನು ಓದಿದ್ದೀರಾ.?ರಾಜ್ಯದಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಭರತ-ಇಳಿತ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ, ಎರಡು ಮೂರು ದಿನಗಳು ಇದೇ ರೀತಿ ಇದ್ದು ಮತ್ತೆ ಸ್ಥಿತಿ ಸಾಮಾನ್ಯವಾಗುತ್ತದೆ ಎಂದು ಹೇಳಿದ್ದಾರೆ. ಕೇರಳದ ವಿಪತ್ತು ನಿರ್ವಹಣಾ ಘಟಕವು ಇದು ಸುನಾಮಿ ಸಂಬಂಧಿತ ವಿದ್ಯಮಾನ ಅಲ್ಲ, ಆದಾಗ್ಯೂ ಈ ಘಟನೆಗೆ ಕಾರಣಗಳೇನು ಎನ್ನುವುದನ್ನು ಪತ್ತೆ ಹಚ್ಚುವುದಾಗಿ ಹೇಳಿದ್ದಾರೆ.
GOLDFACTORYNEWS.COM
the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.
Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.