• 30 ಮೇ 2024

17 ಕ್ಷೇತ್ರಗಳಿಗೆ ಇಂದು ಕಾಂಗ್ರೆಸ್ ಪಟ್ಟಿ ಬಿಡುಗಡೆ

 17 ಕ್ಷೇತ್ರಗಳಿಗೆ ಇಂದು ಕಾಂಗ್ರೆಸ್ ಪಟ್ಟಿ ಬಿಡುಗಡೆ
Digiqole Ad

17 ಕ್ಷೇತ್ರಗಳಿಗೆ ಇಂದು ಕಾಂಗ್ರೆಸ್ ಪಟ್ಟಿ ಬಿಡುಗಡೆ

ರಾಜ್ಯದಲ್ಲಿ ಬಾಕಿ ಇದ್ದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಯಶಸ್ವಿಪೂರ್ಣಗೊಳಿಸುವಲ್ಲಿ ರಾಷ್ಟ್ರೀಯ ನಾಯಕರು ಆಲ್ಮೋಸ್ಟ್ ಯಶಸ್ವಿಯಾಗಿದ್ದು, ಪಟ್ಟಿ ಬಿಡುಗಡೆ ಮಾತ್ರ ಬಾಕಿ ಇದೆ.
ಮೊದಲ ಪಟ್ಟಿ ಬಿಡುಗಡೆಗೊಂಡು 12 ದಿನಗಳ ಬಳಿಕ ಬಾಕಿ ಇರುವ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಷಯವಾಗಿ ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿತ್ತು.ಆದರೆ ಕಬ್ಬಿಣದ ಕಡಲೆಕಾಯಿ ಆಗಿದ್ದ ಮೂರ್‍ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ, ಅಂತಿಮಗೊಳಿಸಲಾಗಿದೆ. ಎರಡನೇ ಪಟ್ಟಿ ಸಿದ್ಧಗೊಂಡಿದ್ದು, ಗುರುವಾರ ಅಧಿಕೃತವಾಗಿ ಬಿಡುಗಡೆಗೊಳ್ಳಬಹುದು ಎಂದು ಅಧೀಕೃತ ಮೂಲಗಳು ಹೇಳಿವೆ.

ಈ ಸುದ್ದಿ ಓದಿದ್ದೀರಾ:ಐದು ಸಚಿವರ ಮಕ್ಕಳಿಗೆ ಕಾಂಗ್ರೆಸ್ ನಿಂದ MP ಟಿಕೆಟ್! ಯಾರ್ಯಾರು ಗೊತ್ತಾ?

ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಲ, ಚಂಡೀಗಢ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ತಡರಾತ್ರಿವರೆಗೂ ನಡೆದ ಸಭೆಯಲ್ಲಿ,ಕರ್ನಾಟಕ ರಾಜ್ಯದ 17 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಅಂತಿಮಗೊಳಿಸಲಾಗಿದೆ. ಈ ಬಾರಿ ಹೊಸಮುಖಗಳು, ಯುವಕರಿಗೆ ಹಾಗೂ ಮಹಿಳೆಯರಿಗೂ ಅವಕಾಶ ಕಲ್ಪಿಸ ಲಾಗಿದೆ. ಹಲವು ಸುತ್ತಿನ ಮಾತುಕತೆ, ಮನವೊಲಿಕೆ ಬಳಿಕವೂ ಮೂರ್‍ನಾಲ್ಕು ಕ್ಷೇತ್ರಗಳು ಕಗ್ಗಂಟಾಗಿಯೇ ಉಳಿದಿದ್ದು, ಅವುಗಳನ್ನು ಹೈಕಮಾಂಡ್‌ ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗಿದೆ.ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ ಆದರೆ ಯಾವುದೇ ಕ್ಷಣದಲ್ಲಾದರೂ ಬಿಡುಗಡೆ ಆಗಬಹುದು. ಈ ಬಾರಿ ಯುವಕರು, ವಿದ್ಯಾವಂತರು, ಹೊಸಮುಖ ಗಳಿಗೆ ಮಣೆ ಹಾಕಲಾಗಿದೆ. ಒಟ್ಟಾರೆ ಅಭ್ಯರ್ಥಿಗಳಲ್ಲಿ ಶೇ. 50ರಷ್ಟು 40-45 ವಯಸ್ಸಿನ ಒಳಗಿನವರೇ ಇರಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ಕ್ಲೂ ಕೊಟ್ಟಿದ್ದಾರೆ.ಇನ್ನೇನಾಗುತ್ತೆ ಎಂದು ಕಾದು ನೋಡಬೇಕಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!