• 27 ಜುಲೈ 2024

ಕಣ್ಣೂರು: ಬಾವಿ ಕೆಲಸಗಾರರ ಮೇಲೆ ಮೇಸ್ತ್ರಿಯ ಮೂರನೇ ಕಣ್ಣು ಪ್ರಯೋಗ.?

 ಕಣ್ಣೂರು: ಬಾವಿ ಕೆಲಸಗಾರರ ಮೇಲೆ ಮೇಸ್ತ್ರಿಯ ಮೂರನೇ ಕಣ್ಣು ಪ್ರಯೋಗ.?
Digiqole Ad

ಕಣ್ಣೂರು: ಬಾವಿ ಕೆಲಸಗಾರರ ಮೇಲೆ ಮೇಸ್ತ್ರಿಯ ಮೂರನೇ ಕಣ್ಣು ಪ್ರಯೋಗ.?

ಕಣ್ಣೂರು: ಬಾವಿ ಕೊರೆಯುವುದು, ಸ್ವಚ್ಛಗೊಳಿಸುವುದು ಈಗ ಹೈಟೆಕ್ ಆಗಿದ್ದು, ಸಮಯ ಕಡಿಮೆಯಾಗಿದೆ. ತಾವು ಮಾಡುವ ಕೆಲಸವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತೋರಿಸುವವರು ಇದ್ದಾರೆ. ಆದರೆ ಏಷ್ಟೋ ಮಂದಿ ಕೆಲಸ ಮಾಡದೆ ಸುಮ್ಮನೆ ಕುಳಿತು ಸಂಜೆಯಾಗುವಾಗ ಸಂಬಳ ತೆಗೆದುಕೊಳ್ಳುವವರು ಇದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಬೈಪೋಲಾರ್ ಡಿಸಾರ್ಡರ್ ಈ ಮಾನಸಿಕ ಕಾಯಿಲೆ ಬಗ್ಗೆ ಇಲ್ಲಿದೆ ಮಾಹಿತಿ

ಇಂತವರನ್ನು ಕೆಲಸ ಮಾಡಿಸಲು, ಪ್ರತಿ ದಿನದ ಕೆಲಸಗಳನ್ನು ನೋಡಿಕೊಳ್ಳಲು, ಕೆಲಸ ವಹಿಸಿಕೊಂಡ ಮೇಸ್ತ್ರಿ ಗಳು ಹೊಸ ವಿಧಾನವನ್ನು ಕಂಡು ಕೊಂಡಿದ್ದಾರೆ. ಹೌದು ಬಾವಿ ಕಾಮಗಾರಿಗಳು ಮತ್ತು ಕಾರ್ಮಿಕರನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮೇಸ್ತ್ರಿಗಳು ಸಿಸಿಟಿವಿ ಮೊರೆ ಹೋಗಿದ್ದಾರೆ. ಈಗ ಕಣ್ಣೂರಿನ ಸುತ್ತಮುತ್ತ ಬಾವಿ ತೋಡುವ ಕಾರ್ಮಿಕರು, ಒಂದು ಕೈಯಲ್ಲಿ ಕೆಲಸದ ಸಾಮನು ಜೊತೆಗೆ ಕ್ಯಾಮರಾವನ್ನು ಹಿಡಿದುಕೊಂಡು ಗುಂಪಾಗಿ ವಿವಿದ ಭಾಗಗಳಿಗೆ ತೆರಳುತ್ತಾರೆ. ಕೆಲಸದ ಸಂದರ್ಭ ಕಾರ್ಮಿಕರ ಮೇಲ್ವಿಚಾರಣೆ ಮಾಡುವ ಮೇಸ್ತ್ರಿಗಳಿಂದ ಕ್ಯಾಮೆರಾಗಳನ್ನು ಜೋಡಿಸಲಾಗಿದೆ. ಅವರು ಇದನ್ನು ತಮ್ಮ ಸ್ವಂತ ಮೊಬೈಲ್‌ಗೆ ಸಂಪರ್ಕಿಸುತ್ತಾರೆ. ಇದರೊಂದಿಗೆ, ಮೇಸ್ತ್ರಿಗಳು ಎಲ್ಲಾ ಕೆಲಸದ ಸ್ಥಳಗಳನ್ನು ತಲುಪಲು ಸಾಧ್ಯವಿಲ್ಲವಾದರು, ಅವರು ಕೆಲಸಗಾರರನ್ನು ಕ್ಯಾಮೆರಾ ಕಣ್ಣುಗಳ ಮೂಲಕ ನೋಡಬಹುದಾಗಿದೆ. ಪೈಪ್ ಮೌಂಟೆಡ್ ಸಿಸಿಟಿವಿ ಜೊತೆಗೆ ಕೆಲಸ ಮಾಡುವ ಉಪಕರಣಗಳ ಜೊತೆ ಕಾರ್ಮಿಕರು ಈಗ ಕ್ಯಾಮೆರಾದೊಂದಿಗೆ ಆಗಮಿಸುತ್ತಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಯಾರು ಈ ಭಗವಾನ್ ವಿಶ್ವಕರ್ಮ?

ಮಳೆ ಮತ್ತು ಬಿಸಿಲಿನಿಂದ ಕ್ಯಾಮರಾವನ್ನು ರಕ್ಷಿಸಲು ಹಾಳೆಯಿಂದ ಮಾಡಿದ ಸಣ್ಣ ಛಾವಣಿಯ ವ್ಯವಸ್ತೆಯನ್ನು ಮಾಡಿಕೊಂಡಿದ್ದಾರೆ. ಕೆಲಸವನ್ನು ಪ್ರಾರಂಭಿಸುವ ಮೊದಲು ಸಿಸಿಟಿವಿ. ಕ್ಯಾಮೆರಾ ಹೊತ್ತ ಪೈಪ್ ಅನ್ನು ಬಾವಿಯ ಒಂದು ಕಡೆ ಹಾಕಲಾಗುತ್ತದೆ. ಮೇಸ್ತ್ರಿಗಳ ಪ್ರಕಾರ, ಇದು ಬಾವಿ ಅಗೆಯುವ ಮತ್ತು ಸ್ವಚ್ಛಗೊಳಿಸುವ ಪ್ರಗತಿಯನ್ನು ನಿರ್ಣಯಿಸಲು ಮತ್ತು ಕೆಲಸದ ಸಮಯ, ಸಾಮಗ್ರಿಗಳ ವ್ಯರ್ಥವನ್ನು ತಡೆಯುವ ಗುರಿಯನ್ನು ಹೊಂದಿದೆ ಎನ್ನುತ್ತಾರೆ. ಈ ಹೊಸ ಅತಿಥಿಯಿಂದ ತಮಗೇನೂ ತೊಂದರೆ ಇಲ್ಲ ಎನ್ನುತ್ತಾರೆ ಕಾರ್ಮಿಕರು.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ