• 9 ಡಿಸೆಂಬರ್ 2024

ವೈದ್ಯಾಧಿಕಾರಿಯಾಗಿ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಡಾ.ಸುರೇಶ ನೆಗಳಗುಳಿ 

 ವೈದ್ಯಾಧಿಕಾರಿಯಾಗಿ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಡಾ.ಸುರೇಶ ನೆಗಳಗುಳಿ 
Digiqole Ad

ವೈದ್ಯಾಧಿಕಾರಿಯಾಗಿ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಡಾ.ಸುರೇಶ ನೆಗಳಗುಳಿ 

ಡಾ|| ಸುರೇಶ ನೆಗಳಗುಳಿಯವರು ಬಂಟ್ವಾಳ ತಾಲೂಕಿನ ಆಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ಜನಿಸಿದ್ದು, ಇವರ ತಂದೆ ಶ್ರೀ ತಿಮ್ಮಣ್ಣ ಭಟ್ಟ ಮತ್ತು ತಾಯಿ ಶ್ರೀಮತಿ ಸಾವಿತ್ರಿಯವರ ಕೊನೆಯ ಪುತ್ರರಾಗಿ ಜನಿಸಿದರು.

ಈ ಸುದ್ದಿ ಓದಿದ್ದೀರಾ?:ಮಂಜೇಶ್ವರದ ಗುಣಾಜೆ ರಾಮಚಂದ್ರ ಭಟ್ ಎಂಬ ಅತ್ಯುತ್ತಮ ಶಿಕ್ಷಕ!

1980- 1988 ತನಕ ವೈದ್ಯಕೀಯ ಸೇವೆ,1988-1997 ಕೊಪ್ಪ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಾಧಿಕಾರಿ, ಪ್ರಾಧ್ಯಾಪಕ, ಪ್ರಾಂಶುಪಾಲ ಗಿರಿ 1997-2012-ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ವೈದ್ಯಾಧಿಕಾರಿ,ಪ್ರಾಧ್ಯಾಪಕ, ಪ್ರಾಂಶುಪಾಲ ಗಿರಿ 2012-2017 ತನಕ ಕೇರಳ ಶೋರನೂರು ಪಿ.ಎನ್ ಎನ್ ಎಮ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಾಧಿಕಾರಿ, ಪ್ರಾಧ್ಯಾಪಕ,ಸ್ನಾತಕೋತ್ತರ ವಿಭಾಗ ಮುಖ್ಯಸ್ಥರಾಗಿ ಸೇವೆ 2017 ರಿಂದ ಈ ತನಕ ಮಣಿಪಾಲದ ಎಂ ಐ.ಎ.ಎಮ್ ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ವಿಭಾಗ ಮುಖ್ಯಸ್ಥರಾಗಿ ಸೇವೆ, 2012 ರಿಂದ ಈ ತನಕ ಮಂಗಳೂರು ಮಂಗಳಾ ಆಸ್ಪತ್ರೆಯಲ್ಲಿ ಮೂಲವ್ಯಾಧಿ ಶಸ್ತ್ರಚಿಕಿತ್ಸಕ ನಾಗಿ ಸಹ ಸೇವೆ ಹಾಗೂ ಕಣಚ್ಚೂರು ಆಯುರ್ವೇದ ಕಾಲೇಜಿನಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ನಿಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಪುಸ್ತಕಗಳು :-

*ತುಷಾರ ಬಿಂದು ಎಂಬ ತುಷಾರ ಮಾಸಪತ್ರಿಕೆಯ ಚಿತ್ರಕವನ ವಿಭಾಗದಲ್ಲಿ ವಿಜೇತವಾದ ತಮ್ಮ ಕವನಗಳ ಸಂಕಲನ

*ಪಡುಗಡಲ ತೆರೆಮಿಂಚು,ಎಂಬ ಕಾಸರಗೋಡು ಚುಟುಕು ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ವಿಜೇತ ಗಜ಼ಲ್ ಸಂಕಲನ

*ಗೋ ಗೀತೆ ಎಂಬ ಗೋವಿನ ಮಹತ್ವ ಸಾರುವ ನೂರು ಚುಟುಕಗಳು ಮತ್ತು

*ನೆಗಳಗುಳಿ ಗಜಲ್ಸ್ ಎಂಬ ಆರು ಭಾಷೆಯ ಗಜ಼ಲ್ ಸಂಕಲನ

*ಧೀರತಮ್ಮನ ಕಬ್ಬ ಎಂಬ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಕಯ್ಯಾರ ಕಿಂಞಣ್ಣ ರೈಯವರ ಆಶಯ ನುಡಿ ಸಹಿತದ ಕಗ್ಗ ಮಾದರಿಯ ಹನಿಗಳು,

*ಧೀರತಮ್ಮನ ಕಬ್ಬ ಸಂಪುಟ ೩ ಮುಕ್ತಕ ಸಂಕಲನ ಲೋಕಾರ್ಪಣೆಯಾಗಿದೆ.

*ಕಾವ್ಯ ಭೋಜನ , ಪ್ರಥಮ‌ಬಹುಮಾನ ಪಡೆದ ೩೭೦ ಆಶು ಚುಟುಕು ಸಂಕಲನ

*ಕಡಲ ಹೂವು ಗಜಲ್ ಸಂಕಲನ ಮತ್ತು ಕಡಲ ಹನಿ ಒಡಲ ಧ್ವನಿ ಗಜಲ್ ಸಂಕಲನಗಳು

*ಮುಕ್ತಕ ಸಂಕಲನ ನಾಲ್ಕನೇ ಸಂಪುಟ ಮುದ್ರಣಕ್ಕೆಸಿದ್ಧವಾಗಿದೆ.

*ಮೇಘವರ್ಷ ಭಾವಗೀತೆಗಳ ಸಂಕಲನ ಸಹ ಪ್ರಕಟಣೆಗೆ ಸಿದ್ಧವಾಗಿದೆ.

*೨೦೨೧ ಬಂಟ್ವಾಳ ತಾಲೂಕು ಕ.ಸಾ.ಪ ಸಮ್ಮೇಳನದ ಸರ್ವಾಧ್ಯಕ್ಷ ಭಾಷಣ ಪ್ರಕಟಿತ.

ಇವರಿಗೆ ಸಂದ ಪ್ರಶಸ್ತಿ ಗೌರವಗಳ ಪಟ್ಟಿ ಬಹಳ ದೊಡ್ಡದಿದೆ.:-

ವೈದ್ಯಕೀಯ ರಂಗದಲ್ಲಿ ಸೇವೆಗಾಗಿ – ಮೂಡಬಿದರೆ ವೈದ್ಯ ಸಂಘದ ವೈದ್ಯ ಪುರಸ್ಕಾರ , ಹುಟ್ಟುಊರಿನಲ್ಲಿ ಗಡಿನಾಡ ವೈದ್ಯ ಪ್ರಶಸ್ತಿ ,ರಾಜ್ಯಮಟ್ಟದ ಯುವ ಬರಹಗಾರ ಪ್ರಶಸ್ತಿ ,ಕಾವ್ಯ ವಿಭೂಷಣ, ರಾಜ್ಯಮಟ್ಟದ ಕೆಎಸ್‌ನ ಕಾವ್ಯ ಸನ್ಮಾನ,ಸ್ಪೂರ್ತಿ ರತ್ನ,ಕಥಾ ಸಂಗಮ ಚೈತನ್ಯ ಶ್ರೀ,ಭಕ್ತಿಗೀತೆ ರಚನೆಗೆ ಧರ್ಮಜ್ಯೋತಿ ಹೊಯ್ಸಳ ರಾಜ್ಯ ಪ್ರಶಸ್ತಿ,ಮೈಸೂರಿನಲ್ಲಿ ಪ್ರಜಾರತ್ನ,ಸೇವಾರತ್ನ ಪ್ರಶಸ್ತಿ, ಪ್ರಕೃತಿ ರತ್ನ ,ಕೊರೋನಾ ವಾರಿಯರ್ ಸನ್ಮಾನ ,ಕದ್ರಿಹಿಲ್ಸ್ ಲಯನ್ಸ್ ಕ್ಲಬ್ ವೈದ್ಯ ಸೇವಾ ಪುರಸ್ಕಾರ,ಸಾಹಿತ್ಯ ರತ್ನ ಚಿತ್ರದುರ್ಗ ,ಯುಗಪುರುಷ ಕಿನ್ನಿಗೋಳಿ AFI ಮತ್ತು ಕೆ ಎಂ ಸಿ ಜಂಟಿಯಾಗಿ ಕೊಡ ಮಾಡಿದ ವೈದ್ಯ- ಸಾಹಿತಿ ಪುರಸ್ಕಾರ ( may 22),ಕರುನಾಡ ಮಹನೀಯ – 22 ಮೈಸೂರು,ಕೆಂಪೇಗೌಡ ಪ್ರಶಸ್ತಿ – 22 ಬೆಂಗಳೂರು,ಕಥಾ ಚೇತನ ರಾಜ್ಯ ಪ್ರಶಸ್ತಿ 2013 ಅಕ್ಷರ ದೀಪ ,ಶಿವಮೊಗ್ಗ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯೋತ್ಸವ ಪ್ರಶಸ್ತಿ2023, ಶಿವ ಸೇವಾ ಸಂಘ ಪಾಂಡೇಶ್ವರ ಮಂಗಳೂರು – ಸಾಧಕ ಸನ್ಮಾನ – ದಶಂಬರ 2023 ಇತ್ಯಾದಿ .ದೂರದರ್ಶನ,ಆಕಾಶವಾಣಿ ಗಳಲ್ಲಿ ಸಂವಾದ,ಕವಿ ಸಮಯ ಉದಯವಾಣಿ ತುಷಾರ ಪರ್ಯಂತ ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ತರಹೇವಾರಿ ಬರಹ‌ ಪ್ರಕಟಗೊಂಡಿರುತ್ತದೆ .ಇದಲ್ಲದೆ ಪ್ರಸ್ತುತ ಬಹಳ ಮುಂಚೂಣಿಯಲ್ಲಿರುವ ಜಾಲತಾಣ ಸಾಹಿತ್ಯ ಬಳಗಗಳಲ್ಲಿ ಸುಮಾರು ಎರಡು ನೂರರಷ್ಟು ಪ್ರಶಸ್ತಿ ಹಾಗೂ ಸನ್ಮಾನಗಳನ್ನು ಪಡೆದಿರುತ್ತಾರೆ.

ತುಷಾರ ಚಿತ್ರಕವನಗಳಲ್ಲಿ ಎಂಭತ್ತಕ್ಕೂ ಹೆಚ್ಚು ಚಿತ್ರಕವನಗಳ ವಿಜೇತ ಹಾಗೂ ಅಷ್ಟೇ ಮೆಚ್ಚುಗೆಯ ಸ್ಥಾನ‌ ಪ್ರಾಪ್ತಿ 21-2-21 ರಂದು ನಡೆದ ಬಂಟ್ವಾಳ ತಾಲೂಕಿನ ಕನ್ನಡ ಭವನದ ಲೋಕಾರ್ಪಣೆ ಸಹಿತದ 21 ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಇವರಿಗೆ ಲಭಿಸಿದ್ದು ತನ್ನ ತಾಯ್ನಾಡಿನ ಗುರುತಿಸುವಿಕೆ ಪ್ರತಿಭೆ ಹಿಡಿದ ಕೈಗನ್ನಡಿ.ಮೂಡಬಿದ್ರಿ ವೈದ್ಯರ ಸಂಘ ಅಧ್ಯಕ್ಷ 2003-04 ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ 1918-19 ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದ.ಕ ಜಿಲ್ಲಾಧ್ಯಕ್ಷ. 2021ರಿಂದ ಈ ತನಕ,ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬಂಟ್ವಾಳ ಸಮಿತಿ ಅಧ್ಯಕ್ಷ 2022- 23 ಮತ್ತು 23-24.1981 ರ ತುರ್ತು ಪರಿಸ್ಥಿತಿಯ ಕಾಲದಲ್ಲಿ ಸಕ್ರಿಯವಾಗಿದ್ದು ಹೋರಾಟಗಾರನಗಿರುವುದಕ್ಕೂ ಸಹ ಸನ್ಮಾನ ಪಡೆದಿದ್ದರು. ಬದಲಾಗದವರು ಎಂಬ ಚಲನ ಚಿತ್ರದಲ್ಲೂ ಅತಿಥಿ ಕಲಾವಿದರಾಗಿ ನಟಿಸಿ ,ಚಿತ್ರ ನಟರೆಂಬ ಹೆಗ್ಗಳಿಕೆ ಇವರದು.

ಆಕಾಶವಾಣಿ ಮಂಗಳೂರು ಭದ್ರಾವತಿ ಹಾಗೂ ಸ್ಥಳೀಯ ದೂರದರ್ಶನಗಳಲ್ಲಿ ಹಲವಾರು ರಶ್ಮಿ, ಚಿಂತನ ಸಂದರ್ಶನ ,ಕವನ ವಾಚನ ,ವೈದ್ಯಕೀಯ ಸಲಹೆ ಇತ್ಯಾದಿ ಇವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಜೇಸಿ ಹೆಚ್ ಜಿ ಎಫ್ ,ಮಾಜಿ ಅಧ್ಯಕ್ಷ, ರೋಟರಿ ಸಕ್ರಿಯ ಸದಸ್ಯನಾಗಿದ್ದು ಈಗ ಕದ್ರಿಹಿಲ್ಸ್ ಲಯನ್ಸ್ ಕ್ಲಬ್ ಸದಸ್ಯರಾಗಿದ್ದಾರೆ.

ಪ್ರಸ್ತುತ ಮಂಗಳೂರು ಮಂಗಳಾ ಆಸ್ಪತ್ರೆಯಲ್ಲಿ ಮೂಲವ್ಯಾಧಿ , ಚರ್ಮರೋಗಗಳ ವಿಶೇಷ ಕ್ಷಾರ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸಕರಾಗಿರುವ ಇವರ ಪತ್ನಿ ವೈದ್ಯೆ ಡಾ|| ಸಾವಿತ್ರಿ,ಪುತ್ರ ಕರ್ನಾಟಕ ಬ್ಯಾಂಕಿನ ಉದ್ಯೋಗಿ ಸುಹಾಸ ನೆಗಳಗುಳಿ, ಮತ್ತು ಸೊಸೆ ಶುಭಲಕ್ಷ್ಮಿ ಯರೊಂದಿಗೆ ಮಂಗಳೂರಿನ ಎಕ್ಕೂರು ಸಮೀಪ ತಮ್ಮ ನಿವಾಸ “ಸುಹಾಸ” ದಲ್ಲಿ ವೈದ್ಯ ವೃತ್ತಿ ಯಲ್ಲಿ ಜನಸೇವೆ ಮಾಡಿಕೊಂಡು ಕುಟುಂಬಸ್ಥರೊಂದಿಗೆ ಸುಖಕರವಾದ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ

ಡಾ ಸುರೇಶ ನೆಗಳಗುಳಿ

ಸುಹಾಸ

ಬಜಾಲ್ ಪಕ್ಕಲಡ್ಕ ಎಕ್ಕೂರು ರಸ್ತೆ

ಮಂಗಳೂರು ೫೮೫೦೦೭

ಈ ಸುದ್ದಿ ಓದಿದ್ದೀರಾ?:ಸುಡು ಬೇಸಿಗೆಯ ಬಿಸಿಲಿನಿಂದ ಕಂಗಾಲು ಅದ ಶಿವಮೊಗ್ಗದ ಮೃಗಾಲಯದ ಪ್ರಾಣಿಗಳನ್ನು ತಂಪಾಗಿಸಲು ಅಧಿಕಾರಿಗಳಿಂದ ಹೊಸ ಪ್ರಯೋಗ

Digiqole Ad

ಈ ಸುದ್ದಿಗಳನ್ನೂ ಓದಿ