• 27 ಜುಲೈ 2024

ಮಸೀದಿ ನಿರ್ಮಾಣಕ್ಕೆ ಮೊಟ್ಟೆ ಹರಾಜು: ಒಂದು ಮೊಟ್ಟೆಗೆ ಹರಿದು ಬಂತು ಹಣದ ಹೊಳೆ.!

 ಮಸೀದಿ ನಿರ್ಮಾಣಕ್ಕೆ ಮೊಟ್ಟೆ ಹರಾಜು: ಒಂದು ಮೊಟ್ಟೆಗೆ ಹರಿದು ಬಂತು ಹಣದ ಹೊಳೆ.!
Digiqole Ad

ಮಸೀದಿ ನಿರ್ಮಾಣಕ್ಕೆ ಮೊಟ್ಟೆ ಹರಾಜು: ಒಂದು ಮೊಟ್ಟೆಗೆ ಹರಿದು ಬಂತು ಹಣದ ಹೊಳೆ.!

ಸಾಂದರ್ಭಿಕ ಚಿತ್ರ

ಜಮ್ಮು ಮತ್ತು ಕಾಶ್ಮೀರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಣದಲ್ಲಿ ಮಸೀದಿ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಆಡಳಿತ ಸಮಿತಿಯು ಹಮ್ಮಿಕೊಂಡಿದ್ದ ಹರಾಜಿನಲ್ಲಿ ಮೊಟ್ಟೆಯೊಂದು ₹2.26 ಲಕ್ಷ ಮೊತ್ತಕ್ಕೆ ಹರಾಜಾಗಿದೆ. ಶ್ರೀನಗರದಿಂದ 55 ಕಿಲೋಮೀಟರ್ ದೂರದಲ್ಲಿರುವ ಸೋಪೋರ್‌ನ ಮನ್ಸೂ‌ರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಸೀದಿ ನಿರ್ಮಾಣಕ್ಕೆ ಸಮಿತಿಯು ನಗದು ಮತ್ತು ವಸ್ತುವಿನ ರೂಪದಲ್ಲಿ ದೇಣಿಗೆ ಸಂಗ್ರಹಿಸಲು ಪ್ರಾರಂಭಿಸಿತ್ತು.

ಈ ಸುದ್ದಿಯನ್ನು ಓದಿದ್ದೀರಾ.?ಅರುಣಾಚಲ ಪ್ರದೇಶ, ಮಹಾರಾಷ್ಟ್ರದಲ್ಲಿ 2 ಬಾರಿ ಅಲುಗಾಡಿದ ಭೂಮಿ.!

ಈ ವೇಳೆ ಮಹಿಳೆಯೊಬ್ಬರು ಕೋಳಿಮೊಟ್ಟೆಯನ್ನು ದೇಣಿಗೆಯಾಗಿ ನೀಡಿದ್ದರು. ಈ ಮೊಟ್ಟೆ ಸೇರಿ ಸಂಗ್ರಹವಾದ ಎಲ್ಲ ವಸ್ತುಗಳನ್ನು ಹರಾಜಿಗಿಡಲಾಗಿತ್ತು. ಮೊಟ್ಟೆಯನ್ನು ಮೂರು ದಿನಗಳವರೆಗೆ ಹರಾಜಿಗೆ ಇಟ್ಟಿದ್ದರು. ಪ್ರತಿ ಸುತ್ತಿನ ಹರಾಜಿನ ಬಳಿಕ ಮೊಟ್ಟೆಯನ್ನು ಗೆದ್ದವರು ಹಣ ಪಾವತಿಸಿ ಮತ್ತೆ ಹೆಚ್ಚಿನ ಹಣ ಸಂಗ್ರಹಿಸಲು ಮೊಟ್ಟೆಯನ್ನು ಸಮಿತಿಗೆ ದೇಣಿಗೆಯಾಗಿ ಹಿಂತಿರುಗಿಸಿದ್ದರು. ಹರಾಜಿನ ಕೊನೆಯ ದಿನ ಡ್ಯಾನಿಶ್ ಅಹಮದ್‌ ಎಂಬ ಯುವ ಉದ್ಯಮಿ ₹70,000ಕ್ಕೆ ಮೊಟ್ಟೆಯನ್ನು ಖರೀದಿಸಿದ್ದಾರೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಭಾರತದ ರಾಯಭಾರಿಯಾಗಿ ರಷ್ಯಾಗೆ ವಿನಯ್ ಕುಮಾ‌ರ್ ನೇಮಕ.

‘ನಾನೇನು ಶ್ರೀಮಂತನಲ್ಲ, ಆದರೆ ಪವಿತ್ರ ಮಸೀದಿಯ ಕಟ್ಟಡ ನಿರ್ಮಾಣ ಕಾರ್ಯ ಆದಷ್ಟು ಬೇಗ ಮುಗಿಯಲು ನನ್ನದೊಂದು ಸಹಾಯ’ ಎಂದು ಅಹಮದ್‌ ಹೇಳಿದ್ದಾರೆ. ಮೂರು ದಿನಗಳಲ್ಲಿ ಹಲವು ಸುತ್ತಿನ ಹರಾಜಿನಲ್ಲಿ ಮೊಟ್ಟೆಯಿಂದ ₹2,26,350 ಹಣ ಸಂಗ್ರಹವಾಗಿದೆ ಎಂದು ಅಹಮದ್‌ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ