• 18 ಜೂನ್ 2024

ಏಕಿಷ್ಟು ಕಾಡುತ್ತಿರುವೆ. 

 ಏಕಿಷ್ಟು ಕಾಡುತ್ತಿರುವೆ. 
Digiqole Ad

ಏಕಿಷ್ಟು ಕಾಡುತ್ತಿರುವೆ. 

ಏಕಿಷ್ಟು ಕಾಡುತ್ತಿರುವೆ ನೀ..

ಯಾವಾಗಲೂ ನನ್ನ ಮನವನ್ನು ಬಿಡದೆ ಕಾಡುತ್ತಿರಲು ಕಾರಣವೇನು..?

ನನ್ನ ಮನವನ್ನು ಯಾವಾಗಲೂ ಕಾಡುತ್ತಿರುವೆಯಲ್ಲವೇ

ಉತ್ತರ ಸಿಗದ ಪ್ರಶ್ನೆಗಳೆಷ್ಟೋ ನನ್ನ ಮನದಲ್ಲಿದೆ

ಏಕೆ ಇದಕ್ಕೆ ಉತ್ತರ ಸಿಕ್ಕಿಲ್ಲ ಎಂದು ನಾ ಯೋಚಿಸುವುದುಂಟು

ಉತ್ತರ ಸಿಕ್ಕಿಲ್ಲ ಎಂದು ನಾ ಬೇಸರಿಸಲಾರೆ

ಏಕೆಂದರೆ ಎಲ್ಲವೂ ಬದುಕಿನ ಒಂದು ಭಾಗ

ನಾ ಅದಕ್ಕೆ ಉತ್ತರ ಹುಡುಕುವ ಕಾತುರದಲ್ಲಿದ್ದೆ

ಆದರೆ ಇದೀಗ ದಣಿದು ದಣಿದು ಸೋತು ಬಿಟ್ಟಿದ್ದೇನೆ

ಆದರೂ ನನ್ನ ಕೌತುಕವನ್ನು ನಾ ಬಿಟ್ಟಿಲ್ಲ

ಎಂದಿಗೂ ಬಿಡಲು ಸಾಧ್ಯವೂ ಇಲ್ಲ

ಇದು ನನ್ನ ಚಿಂತೆಯೋ ಅದೋ ಉತ್ತರವಿಲ್ಲದ ಪ್ರಶ್ನೆಯೋ?

ಯಾವಾಗ ಸಿಗಬಹುದು ನನ್ನ ಮನದೊಳಗಿರುವ ಪ್ರಶ್ನೆಗಳಿಗೆ ಉತ್ತರ

ಜೀವನವೆಂಬುವುದು ಅನಿಶ್ಚಿತತೆಯ ಪಯಣವಲ್ಲವೇ

ಆ ಪಯಣದಲಿ ಎಂದಾದರೂ ನನ್ನ ಮನದೊಳಗಿರುವ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂಬ ದೃಢ ವಿಶ್ವಾಸದಲಿ ಈ ಕವನಕ್ಕೆ ನಾ ಹಾಕುವೆ ಪೂರ್ಣ ವಿರಾಮ.

✍️ಕಾವ್ಯಶ್ರೀ. ಎಸ್, ಸಾಮೆತ್ತಡ್ಕ

 

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!