ನವ ಮಂಗಳೂರು ಬಂದರಿಗೆ ತಲುಪಿದ “ರಿವೀರಾ” ಪ್ರವಾಸಿ ಹಡಗು!
ನವ ಮಂಗಳೂರು ಬಂದರಿಗೆ ತಲುಪಿದ “ರಿವೀರಾ” ಪ್ರವಾಸಿ ಹಡಗು.
ಮಂಗಳೂರು ಮೇ.07: ಮಂಗಳೂರಿನ ಪಣಂಬೂರು ನವಮಂಗಳೂರು ಬಂದರಿಗೆ ಈ ವರ್ಷದ 8ನೇ ವಿದೇಶಿ ಪ್ರವಾಸಿ ಹಡಗು “ರಿವೀರಾ” (Riviera Cruise Ship) ಆಗಮಿಸಿದೆ. ಈ ಹಡಗು 752 ಸಿಬ್ಬಂದಿ ಮತ್ತು 1141 ಪ್ರವಾಸಿಗರೊಂದಿಗೆ ಮಂಗಳೂರು ತಲುಪಿದರು. ಐಷಾರಾಮಿ ಹಡಗಿನಲ್ಲಿ ಬಂದಿಲಿದ ವಿದೇಶಿ ಪ್ರವಾಸಿಗರಿಗೆ ಸಾಂಪ್ರದಾಯಕವಾಗಿ ಚೆಂಡೆಯ ಮೂಲಕ ಸ್ವಾಗತಿಸಿದರು.
ಈ ಸುದ್ದಿ ಓದಿದ್ದೀರಾ ?ರಾಜ್ಯದ 14 ಕ್ಷೇತ್ರಗಳಲ್ಲಿ 24.48% ಮತದಾನ
ವಿದೇಶಿ ಪ್ರವಾಸಿಗರಿಗೆ ಸಂಚಾರಕ್ಕಾಗಿ ವಿಶೇಷ ಟ್ಯಾಕ್ಸಿ ಮತ್ತು ಬಸ್ ವ್ಯವಸ್ಥೆ, ವೈದ್ಯಕೀಯ ತಪಾಸಣೆ ಮತ್ತು ತ್ವರಿತ ಸಂಚಾರಕ್ಕಾಗಿ ಕಸ್ಟಮ್ಸ್ ಕೌಂಟರ್ ಹಾಗೂ ವೈಫೈ ಸೇವೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಯುವತಿಯ ವಿಡಿಯೋ ಕ್ಲಿಕಿಸಿದ ಅನ್ಯಕೋಮಿನ ಯುವಕ: ಸುಳ್ಯ ಬಿಜೆಪಿ ಮಹಿಳಾ ಮೋರ್ಚಾ ದಿಂದ ಖಂಡನೆ
ಇನ್ನೂ ಕ್ರೂಸ್ ನಲ್ಲಿ ಆಗಮಿಸಿದ ಪ್ರವಾಸಿಗರು ಮೂಡಬಿದ್ರಿಯ ಸಾವಿರ ಕಂಬದ ಬಸದಿ, ಕಾರ್ಕಳದ ಗೋಮಟೇಶ್ವರ ಪ್ರತಿಮೆ, ಸೇಂಟ್ ಅಲೋಶಿಯಸ್,ಅಚಲ್ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ,ಚಾಪೆಲ್ ಸೋನ್ಸ್ ಫಾರ್ಮ್ ಮತ್ತು ವಿವಿಧ ಪ್ರವಾಸಿ ತಾಣಗಳಿಗೆ ಹಾಗೂ ಸ್ಥಳೀಯ ಮಾರುಕಟ್ಟೆಗಳಿಗೆ ಭೇಟಿ ನೀಡಿದರು. ನಂತರ ಸಂಜೆ ವೇಳೆಗೆ ಮರ್ಮಗೋವಾ ಕಡೆಗೆ ಈ ಪ್ರವಾಸಿ ಹಡಗು ತೆರಳಿತು.
GOLDFACTORYNEWS.COM
the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.
Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.