• 27 ಜುಲೈ 2024

ಆದಿ ಸುಬ್ರಮಣ್ಯದಲ್ಲಿ  ಗಾಂಜಾ ಗಿಡ ಪತ್ತೆ!

 ಆದಿ ಸುಬ್ರಮಣ್ಯದಲ್ಲಿ  ಗಾಂಜಾ ಗಿಡ ಪತ್ತೆ!
Digiqole Ad

ಆದಿ ಸುಬ್ರಮಣ್ಯದಲ್ಲಿ  ಗಾಂಜಾ ಗಿಡ ಪತ್ತೆ!

ಸುಬ್ರಹ್ಮಣ್ಯ:  ಶ್ರೀ ಕ್ಷೇತ್ರ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಕಲ್ಯಾಣ ಮಂಟಪದ ಮೇಲ್ಛಾವಣಿಯಲ್ಲಿ ಗಾಂಜಾ ಗಿಡ ಪತ್ತೆಯಾದ ಘಟನೆ ನಡೆದಿದೆ. ಆದಿ ಸುಬ್ರಹ್ಮಣ್ಯ ಕ್ಷೇತ್ರದ ಹತ್ತಿರದ ಕಲ್ಯಾಣ ಮಂಟಪದ ಟೆರೇಸ್ ನಲ್ಲಿ ಇದ್ದ ನೀರಿನ ಟ್ಯಾಂಕ್‌ ಬಳಿ ಗಾಂಜಾ ಗಿಡ ಇದ್ದ ಬಗ್ಗೆ ಅಲ್ಲಿನ ಸ್ಥಳೀಯರ ಗಮನಕ್ಕೆ ಬಂದಿತ್ತು.ಇದನ್ನು ಪರಿಶೀಲಿಸಿದ  ಸ್ಥಳೀಯರು ಫೋಟೋ ತೆಗೆದು ಸ್ಥಳೀಯ ಪೊಲೀಸ್‌ ಠಾಣೆಗೆ ಮತ್ತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದ ಬಳಿಕ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕಾರ್ಯ ಕಾರ್ಯನಿರ್ವಹಣಾಧಿಕಾರಿಗಳು ಸುಬ್ರಹ್ಮಣ್ಯ ದೇವಸ್ಥಾನದ ಕಲ್ಯಾಣ ಮಂಟಪದದ ಉಸ್ತುವಾರಿ ರಾಮಕೃಷ್ಣ ಭಟ್‌ ಎಂಬವರಿಗೆ ಮಾಹಿತಿ ತಿಳಿಸಿದ್ದಾರೆ. ಕಲ್ಯಾಣ ಮಂಟಪದ ಉಸ್ತುವಾರಿ ರಾಮಕೃಷ್ಣ ಭಟ್‌ ಆ ಗಿಡವನ್ನು ಅಲ್ಲಿಂದ ತೆಗೆಸಿದ್ದಾರೆ ,ಆದರೆ ಗಾಂಜಾ ಗಿಡದ ಬಗ್ಗೆ ರಾಮಕೃಷ್ಣ ಭಟ್ ಮತ್ತು ಆದಿ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಶಾಲೆಯ ಉಸ್ತುವಾರಿ ಗಣೇಶ್ ಭಟ್ ರವರ ಮೇಲೆ ಅನುಮಾನ ಮೂಡುತ್ತಿದೆ ಎಂದು ಸ್ಥಳೀಯರ ಆರೋಪವಾಗಿದ್ದು. ಮಾಹಿತಿ ಸಿಕ್ಕಿದ ಮೇಲೆ ಆಡಳತ ವರ್ಗ ಯಾಕೆ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದೆ ಎಂದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಿನ್ನೆ ದೂರು ನೀಡಿದ ಬಳಿಕ ಇಂದು ಸ್ಥಳೀಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಲು ಬಂದಾಗ ಆ ಗಿಡ ಅಲ್ಲಿಂದ ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಥಳಿಯರ ಅನುಮಾನ ಇನ್ನೂ ಹೆಚ್ಚಾಗಿದ್ದು. ಸುಮಾರು 4 ರಿಂದ 5ಫೀಟ್‌ ಎತ್ತರ ಬೆಳೆದಿದ್ದ ಗಾಂಜಾ ಗಿಡದ ಬಗ್ಗೆ ಇದ್ದ ಅನುಮಾನಗಳಿಗೆ  ಆದಿ ಸುಬ್ರಹ್ಮಣ್ಯ ದೇವಸ್ಥಾನದ ಕಲ್ಯಾಣ ಮಂಟಪದ ಉಸ್ತುವಾರಿ ರಾಮಕೃಷ್ಣ ಭಟ್ ಮತ್ತು ಆದಿ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಶಾಲೆಯ ಉಸ್ತುವಾರಿ ಗಣೇಶ್ ಭಟ್ ರವರು ಉತ್ತರ ನೀಡಬೇಕಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ