• 27 ಜುಲೈ 2024

ಮಾಸದ ಶಾಯಿ ಗುರುತು! 3 ವರ್ಷ ಮತದಾನ ಇಲ್ಲ!

 ಮಾಸದ ಶಾಯಿ ಗುರುತು! 3 ವರ್ಷ ಮತದಾನ ಇಲ್ಲ!
Digiqole Ad

ಮಾಸದ ಶಾಯಿ ಗುರುತು! 3 ವರ್ಷ ಮತದಾನ ಇಲ್ಲ!

ಇಂದು (ಮೇ 13) ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ.ಮತದಾನ ಮಾಡುವಾಗ ಚುನಾವಣಾಧಿಕಾರಿಗಳು ಮತದಾರನ ಬೆರಳಿಗೆ ಶಾಯಿ ಗುರುತು ಹಾಕುವುದು ಎಲ್ಲರಿಗೂ ತಿಳಿದಿದೆ. ಈ ಶಾಯಿ ಗುರುತು ಮೋಸದ ಮತಗಳನ್ನು ತಡೆಯುತ್ತದೆ. ಪ್ರತಿ ಚುನಾವಣೆಯಲ್ಲೂ ಪ್ರತಿಯೊಬ್ಬ ಮತದಾರನ ಬೆರಳಿಗೂ ಈ ಶಾಯಿ ಗುರುತನ್ನು ಹಾಕುತ್ತಾರೆ. ಈ ಶಾಯಿಯ ಕಲೆಯು ಕೆಲವು ತಿಂಗಳವರೆಗೆ ಇರುತ್ತದೆ. ಆದರೆ ಕೇರಳದ ಮಹಿಳೆಗೆ ಮತದಾನದ ಶಾಯಿಯ ಗುರುತು ಸುಮಾರು 9 ವರ್ಷಗಳಿಂದಲೂ ಇದೆ ಎಂದರೆ ನಂಬ್ತೀರಾ.

ಹೌದು,ಇದರಿಂದಾಗಿ ಮೂರು ಸಲ ಮತದಾನ ಮಾಡಲು ಕೂಡ ಸಾಧ್ಯವಾಗಿಲ್ಲ. 9 ವರ್ಷಗಳಿಂದ ಆಕೆಯ ಬೆರಳಿನ ಶಾಯಿಯ ಕಲೆ ಇನ್ನೂ ಮಾಸಿಲ್ಲ.

ಹಾಗಾದ್ರೆ ವಿಷಯಕ್ಕೆ ಬರೋಣ!

2016ರಲ್ಲಿ ಕೇರಳ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಕುಲಪುಳ್ಳಿಯ ಎಯುಪಿ ಶಾಲೆಯಲ್ಲಿ 62 ವರ್ಷದ ಉಷಾರವರು, ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದರು. ಆಗ ಚುನಾವಣಾಧಿಕಾರಿಗಳು ಹಾಕಿದ ಶಾಯಿಯ ಗುರುತು ಕೆಲವೇ ದಿನಗಳಲ್ಲಿ ಮಾಯವಾಗುತ್ತವೆ ಎಂದು ಭಾವಿಸಿದ್ದರು. ಆದರೆ ತಿಂಗಳುಗಳು ಕಳೆದರು ಶಾಯಿ ಗುರುತುಗಳು ಮಾತ್ರ ಮರೆಯಾಗಿಲ್ಲ ಎನ್ನುವುದೇ ವಿಚಿತ್ರ. ಶಾಯಿ ಕಲೆಯನ್ನು ಹೋಗಿಸಲು ಸಾಕಷ್ಟು ಪ್ರಯತ್ನಿಸಲಾಗಿದೆ. ಆದರೆ ಯಾವುದೇ ಫಲ ಸಿಗಲಿಲ್ಲ. ವಿಧಾನಸಭಾ ಚುನಾವಣೆ ಬಳಿಕ ಕೇರಳದಲ್ಲಿ ಸ್ಥಳೀಯ ಚುನಾವಣೆಗಳು ನಡೆದವು.ಆದರೂ ಈ ಚುನಾವಣೆಯಲ್ಲಿ ಉಷಾ ಅವರಿಗೆ ಮತದಾನ ಮಾಡಲು ಅಧಿಕಾರಿಗಳು ಅವಕಾಶ ನೀಡಲಿಲ್ಲ. ಕಾರಣ ಆಕೆಯ ಬೆರಳಿನಲ್ಲಿ ಅದಾಗಲೇ ಶಾಯಿಯ ಗುರುತು ಇತ್ತು.

2019ರ ಲೋಕಸಭೆ ಹಾಗೂ 2021ರ ವಿಧಾನಸಭೆ ಚುನಾವಣೆ ಸಮಯದಲ್ಲೂ ಶಾಯಿ ಗುರುತು ಮಾಸದ ಕಾರಣ ಮತಗಟ್ಟೆ ಕೇಂದ್ರಗಳಲ್ಲಿ ಹಲವು ವಾದ-ವಿವಾದಗಳು,ಚರ್ಚೆಗಳು ನಡೆಯಿತು. ಆದರೂ ಉಷಾ ಅವರು ಮತದಾನ ಮಾಡಲು ಸಾಧ್ಯ ಆಗಲಿಲ್ಲ. ಇದೀಗ ಪ್ರಸ್ತುತ ನಡೆಯುತ್ತಿರುವ 2024ರ ಲೋಕಸಭೆ ಚುನಾವಣೆ ವೇಳೆ ಪ್ರಚಾರಕ್ಕೆ ಬಂದಿದ್ದ ಡಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ವೈ.ಶಿಹಾಬುದ್ದೀನ್ ಅವರ ಬಳಿ ತೆರಳಿ, ಸುಮಾರು ಒಂಬತ್ತು ವರ್ಷಗಳ ನಂತರವೂ ತನ್ನ ಬೆರಳಿನ ಶಾಯಿಯ ಗುರುತು ಮಾಸಿಲ್ಲ ಎಂದು ಉಷಾ ಹೇಳಿಕೊಂಡಿದ್ದರು. ಈ ವಿಷಯವನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತಂದಾಗ ಅಧಿಕಾರಿಗಳು ಮತದಾನಕ್ಕೆ ಅವಕಾಶ ಮಾಡಿಕೋಟ್ಟಿದ್ದಾರೆ. ಬರೋಬ್ಬರಿ 9 ವರ್ಷಗಳ ಬಳಿಕ ಉಷಾ ಈಗ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಿಂದ ತಿಳಿದುಬಂದಿದೆ.

ಈ ಸುದ್ಧಿ ಓದಿದ್ದೀರಾ:-

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ