• 26 ಜುಲೈ 2024

ಶೇ 100ರಷ್ಟು ಮತದಾನ ದೇಶಕ್ಕೆ ಮಾದರಿಯಾದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಈ ಕುಗ್ರಾಮ

 ಶೇ 100ರಷ್ಟು ಮತದಾನ ದೇಶಕ್ಕೆ ಮಾದರಿಯಾದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಈ ಕುಗ್ರಾಮ
Digiqole Ad

ಶೇ 100ರಷ್ಟು ಮತದಾನ ದೇಶಕ್ಕೆ ಮಾದರಿಯಾದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಈ ಕುಗ್ರಾಮ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಗ್ರಾಮದಲ್ಲಿ ಶೇಕಡಾ 100ರಷ್ಟು ಮತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ಈ ಮೂಲಕ ಮತದಾನ ಮಾಡದವರಿಗೆ ಕುಗ್ರಾಮದ ಮತದಾರರು ಸೆಡ್ಡು ಹೊಡೆದಿದ್ದಾರೆ. ಬಾಂಜಾರುಮಲೆ ಗ್ರಾಮದ 111 ಮತದಾರರಿಂದಲೂ ಹಕ್ಕು ಚಲಾವಣೆ ಮಾಡಲಾಗಿದೆ. ನಕ್ಸಲ್ ಆತಂಕದ ನಡುವೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ?:ಕೆಲವೇ ದಿನಗಳಲ್ಲಿ 34 ಕೋಟಿ ಸಂಗ್ರಹಿಸಿ ಅಬ್ದುಲ್ ರಹೀಮ್ ರನ್ನು ಬದುಕಿಸಿದ ಕೇರಳದ ಜನ

ಲೋಕಸಭಾ ಚುನಾವಣೆ  ಹಿನ್ನಲೆ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಸಾಕಷ್ಟು ಜಾಗೃತಿಗಳನ್ನು ಮೂಡಿಸುವ ಪ್ರಯತ್ನ ಮಾಡಿತ್ತು. ಆದರೂ ಕೂಡ ಬೆಂಗಳೂರಿನಲ್ಲಿ ಕಳೆದ ಭಾರಿಗೆ ಹೋಲಿಸಿಕೊಂಡರೇ ಈ ಸಲ ಕೂಡ ಮತದಾನ  ಪ್ರಮಾಣ ಕಡಿಮೆ ಆಗಿದೆ. ಇನ್ನು ಚುನಾವಣೆ ರಜೆ ಎಂದು ಸಾಕಷ್ಟು ಜನರು ಟ್ರಿಪ್, ಪಿಕ್ನಿಕ್ ಎಂದು ಮತದಾನದಿಂದ ದೂರ ಉಳಿದುಬಿಡುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಗ್ರಾಮ ಮಾತ್ರ ಶೇಕಡಾ 100ರಷ್ಟು ಮತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ.

ನಕ್ಸಲ್ ಆತಂಕ ನಡುವೆ ಬಿಗಿ ಭದ್ರತೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಗ್ರಾಮೀಣ ಭಾಗದ ಜನರು ಭಾಗವಹಿಸಿದ್ದರು. ಸುಳ್ಯ ಭಾಗದಲ್ಲಿ ಇತ್ತೀಚೆಗೆ ನಕ್ಸಲರು ಪ್ರತ್ಯಕ್ಷಗೊಂಡಿದ್ದರು. ನಕ್ಸಲ್ ಪೀಡಿತ ಪ್ರದೇಶದ ಮತಗಟ್ಟೆಗಳಿಗೆ ಸಿ.ಎ.ಪಿ.ಎಫ್ ಫೋರ್ಸ್ ನಿಯೋಜಿಸಲಾಗಿತ್ತು. 18 ನಕ್ಸಲ್ ಪೀಡಿತ ಪ್ರದೇಶಗಳನ್ನು ಪೊಲೀಸ್ ಇಲಾಖೆ ಗುರುತಿಸಿತ್ತು. ಅರಣ್ಯ ಪ್ರದೇಶದಲ್ಲಿ ಸಿ.ಎ.ಪಿ.ಎಫ್ ಯೋಧರ ಕಣ್ಗಾವಲಿನಲ್ಲಿ ಬಿರುಸಿನ ಮತದಾನ ಮಾಡಲಾಗಿದೆ.

ದಕ್ಷಿಣ ಕನ್ನಡ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 18,18,127, ಪುರುಷರು 887122, ಮಹಿಳೆಯರು 930928, ಇತರೆ 77. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 524 ಸೇವಾ ಮತದಾರರು ಇದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಒಟ್ಟು 1,876 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು, ಸಾಮಾನ್ಯ ಮತಗಟ್ಟೆ 1705, 171 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?:ಇಸ್ರೇಲ್ ಗೆ ಗುರಿ ಇಟ್ಟಿದ್ದ ಇರಾನ್‌ನ ಕನಿಷ್ಠ 80 ಕ್ಷಿಪಣಿಗಳ ನಾಶ: ಅಮೆರಿಕ.

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ