• 27 ಜುಲೈ 2024

ಕರ್ನಾಟಕದಿಂದ ಮನೆಯಿಂದಲೇ ಮತದಾನ ಮಾಡಲು 12 ಲಕ್ಷ ಮತದಾರರಿಗೆ ಅವಕಾಶ

 ಕರ್ನಾಟಕದಿಂದ ಮನೆಯಿಂದಲೇ ಮತದಾನ ಮಾಡಲು 12 ಲಕ್ಷ ಮತದಾರರಿಗೆ ಅವಕಾಶ
Digiqole Ad

ಕರ್ನಾಟಕದಿಂದ ಮನೆಯಿಂದಲೇ ಮತದಾನ ಮಾಡಲು 12 ಲಕ್ಷ ಮತದಾರರಿಗೆ ಅವಕಾಶ

ಕರ್ನಾಟಕದಲ್ಲಿ 85ಕ್ಕಿಂತ ಹೆಚ್ಚಿನ ವಯಸ್ಸಿನ 5.7 ಲಕ್ಷ ಹಿರಿಯ ನಾಗರಿಕರು ಮತ್ತು 6.13 ಲಕ್ಷ ವಿಕಲಚೇತನರು ಲೋಕಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮನೆಯಿಂದಲೇ ಮತದಾನ ಮಾಡಲು ಬೇಕಾದ ಅರ್ಜಿ ನಮೂನೆ 12ಡಿ (12D) ವಿತರಿಸುವ ಪ್ರಕ್ರಿಯೆಯನ್ನು ಚುನಾವಾಣಾ ಆಯೋಗಡ ಸಂಬಂಧ ಪಟ್ಟ ಅಧಿಕಾರಿಗಳು ಈಗಾಗಲೇ ತಯಾರಿ ಆರಂಭಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?;ದೇವರ ದರ್ಶನಕ್ಕೆ ವಸ್ತ್ರ ಸಂಹಿತೆ? ಪ್ರಮುಖ ಮುಜರಾಯಿ ದೇವಾಲಯಗಳಲ್ಲಿ ಜಾರಿಗೆ ಚಿಂತನೆ

2020 ರಲ್ಲಿ ಬಿಹಾರ ವಿಧಾನಸಭೆ ಚುನಾವಣೆ ವೇಳೆ, ಕೋವಿಡ್ ಸಾಂಕ್ರಾಮಿಕದ ಕಾರಣ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲರಿಗೆ ಪ್ರಪ್ರಥಮ ಬಾರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವನ್ನು ಮಾಡಿ ಕೊಟ್ಟಿತ್ತು.

ಕರ್ನಾಟಕದಲ್ಲಿ 2023 ರ ವಿಧಾನಸಭಾ ಚುನಾವಣೆಯಲ ಸಮಯದಲ್ಲಿ ಸುಮಾರು ಒಂದು ಲಕ್ಷ ಜನರು ಮನೆಯಿಂದಲೇ ಮತ ಚಲಾಯಿಸಿದ್ದರು. ಮನೆಯಿಂದಲೇ ಮತದಾನಕ್ಕೆ ಮನವಿ ಸಲ್ಲಿಸಿದ್ದ ಸುಮಾರು 80,251 ಹಿರಿಯ ನಾಗರಿಕರ ಪೈಕಿ ಶೇ 95 ರಷ್ಟು ಅಂದರೆ 76,120 ಮಂದಿ ಮತದಾನ ಮಾಡಿದ್ದರು. ಮನೆಯಿಂದಲೇ ಮತದಾನಕ್ಕೆ ಮನವಿ ಮಾಡಿದ್ದ 19,280 ಅಂಗವಿಕಲರಲ್ಲಿ ಶೇ 97 ಅಂದರೆ 18,811 ಹೆಚ್ಚು ಮಂದಿ ಮತದಾನ ಮಾಡಿದ್ದರು.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಿಂದ ಅತಿ ಹೆಚ್ಚು ಹಿರಿಯ ನಾಗರಿಕರು (10,280) ಮನೆಯಿಂದಲೇ ಮತ ಚಲಾಯಿಸಿದ್ದರು. ನಂತರದ ಸ್ಥಾನದಲ್ಲಿ ಬೆಳಗಾವಿಜಿಲ್ಲೆ 6,975 ಮತ್ತು ತುಮಕೂರು ಜಿಲ್ಲೆ 6,333 ಮತದಾರರು ಇದ್ದರು.ಅಂಗವಿಕಲರ ವಿಭಾಗದಲ್ಲಿ ತುಮಕೂರು ಅತಿ ಹೆಚ್ಚು 2,788 ಮತ್ತು ದಕ್ಷಿಣ ಕನ್ನಡ 1,926ಮತ್ತು ಬೆಳಗಾವಿ 1,661 ಅನಂತರದ ನಂತರದ ಸ್ಥಾನಗಳಲ್ಲಿ ಇದ್ದವು.

ಈ ಸುದ್ದಿ ಓದಿದ್ದೀರಾ?:ಕ್ಯಾನ್ಸ‌ರ್ ರೋಗಿಗಳಿಗೆ ಝಡಸ್ ಕಂಪನಿ ಭರ್ಜರಿ ಗುಡ್ ನ್ಯೂಸ್

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ