• 27 ಜುಲೈ 2024

ಇನ್ಮೇಲೆ ಇರಲ್ಲ ಕೆಂಪು ಲಿಪ್ ಸ್ಟಿಕ್😳 – ಕಿಮ್ ಜಾಂಗ್ ಉನ್

 ಇನ್ಮೇಲೆ ಇರಲ್ಲ ಕೆಂಪು ಲಿಪ್ ಸ್ಟಿಕ್😳 – ಕಿಮ್ ಜಾಂಗ್ ಉನ್
Digiqole Ad

ಇನ್ಮೇಲೆ ಇರಲ್ಲ ಕೆಂಪು ಲಿಪ್ ಸ್ಟಿಕ್😳 – ಕಿಮ್ ಜಾಂಗ್ ಉನ್ 

ಉತ್ತರ ಕೊರಿಯಾ ದೇಶದ ಕುರಿತು ತಿಳಿದಿರಬಹುದು. ಅಲ್ಲಿ ಸಾವಿರಾರು ನಿಯಮಗಳು, ಹತ್ತಾರು ನಿರ್ಬಂಧಗಳು, ಈ ದೇಶ ಹೆಸರಾಗಿರುವುದೇ ನಿರ್ಬಂಧಗಳಿಂದ. ಅಲ್ಲಿನ ನಾಯಕ ಕಿಮ್ ಜಾಂಗ್ ಉನ್ ಕಟ್ಟುನಿಟ್ಟಿನ ನಿಯಮ ಜಾರಿ ಮಾಡುವುದರಿಂದಲೇ ಫೇಮಸ್.
ಹೇಗೆ ಬಟ್ಟೆ ಧರಿಸಬೇಕು? ಯಾವಾಗ ಏಳಬೇಕು? ಹೇಗಿರಬೇಕು ಎಂಬುದೆಲ್ಲ ಪೂರ್ವ ನಿರ್ಧರಿತ.
ಇನ್ನು ಉತ್ತರ ಕೊರಿಯಾದಲ್ಲಿ ಮಹಿಳೆಯರಿಗಂತು ಇನ್ನಿಲ್ಲದ ನಿಯಮಗಳಿವೆ. ಈಗ ಮಹಿಳೆಯರು ಕೆಂಪು ಬಣ್ಣದ ಲಿಪ್‌ಸ್ಟಿಕ್ ಬಳಸಬಾರದು ಎಂಬ ಕಟ್ಟಪ್ಪಣೆ ಹೊರಡಿಸಲಾಗಿದೆ.
ಮಹಿಳೆಯರ ಮೇಕಪ್ ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದು, ಇದಕ್ಕೆಲ್ಲ ಅವಕಾಶ ನೀಡಿದರೆ ಕ್ರಮೇಣ ಜನರು ಪಾಶ್ಚಾತ್ಯ ಸಿದ್ಧಾಂತದತ್ತ ಆಕರ್ಷಿತರಾಗುತ್ತಾರೆ ಎಂಬುದು ಕಿಮ್ ಜಾಂಗ್ ಆತಂಕ. ಆತನ ಸರ್ಕಾರವು ಜನರನ್ನು ಸಾಧಾರಣ ಮತ್ತು ಸಹಜ ಪ್ರೀತಿಯಲ್ಲಿ ಇರುವಂತೆ ತಿಳಿಸಿದ್ದಾರೆ. ಆಡಳಿತಗಾರರ ಪ್ರಕಾರ, ಲಿಪ್ಟಿಕ್ ಧರಿಸುವುದು ಅವರ ದೇಶದ ನಿಯಮಗಳಿಗೆ ವಿರುದ್ಧವಾಗಿದೆ.

ಅಲ್ಲದೆ, ಉತ್ತರ ಕೊರಿಯಾದಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ಅನೇಕ ಫ್ಯಾಷನ್‌ಗಳನ್ನು ನಿಷೇಧಿಸಲಾಗಿದೆ. ಬಿಗಿಯಾದ ಬಟ್ಟೆ, ನೀಲಿ ಜೀನ್ಸ್, ಆಭರಣಗಳು ಮತ್ತು ಕೆಲವು ರೀತಿಯ ಹೇರ್ಕಟ್ಗಳನ್ನು ನಿಷೇಧಿಸಲಾಗಿದೆ.ಸರ್ಕಾರದ ಮಾರ್ಗಸೂಚಿಯಂತೆ ಕೂದಲು ಟ್ರಿಮ್ ಮಾಡಬೇಕು. ಜೀನ್ಸ್ ಪ್ಯಾಂಟ್ ಹಾಕಿಕೊಂಡು ರಸ್ತೆಯಲ್ಲಿ ಕಂಡರೆ ಅಷ್ಟೆ. ಅವರು ಅಲ್ಲಿಯೇ ಜೀನ್ಸ್ ಪ್ಯಾಂಟ್ ಅನ್ನು ಕತ್ತರಿಸುತ್ತಾರೆ.

ಅಲ್ಲದೆ, ಕಿಮ್ ಅವರ ಲೈಂಗಿಕ ಬಯಕೆಗಳನ್ನು ಪೂರೈಸಲು ಸುಂದರ ಹುಡುಗಿಯರನ್ನು ಹೊಂದಿರುವ ‘ಪ್ಲೇಷರ್ ಸ್ಕ್ಯಾಡ್ ಎಂಬ ಗುಂಪು ಇರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಕಿಮ್ ಪ್ರತಿ ವರ್ಷ 25 ಸುಂದರ ಕನೈಯರನ್ನು ಆಯ್ಕೆ ಮಾಡುತ್ತಾರೆ ಎಂದು ದೇಶದಿಂದ ಓಡಿಹೋದ ಮಹಿಳೆ ಯೆನ್ನಿ ಪಾರ್ಕ್‌ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಮಹಿಳೆಯರ ನೋಟ ಮತ್ತು ರಾಜಕೀಯ ನಿಷ್ಠೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಆಕೆ ಹೇಳಿದ್ದಾಳೆ.ಎಂದು ಏಜೆನ್ಸಿ ವರದಿ ಮಾಡಿದೆ

ಈ ಸುದ್ದಿ ಓದಿದ್ದೀರಾ: ಎರಡು ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ – ನಾರ್ಥ್ ಕೊರಿಯಾ

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ