ಪಾಂಗೋಡು 18ನೇ ಪುನರ್ ಪ್ರತಿಷ್ಠಾ ಮಹೋತ್ಸವ.
ಪಾಂಗೋಡು 18ನೇ ಪುನರ್ ಪ್ರತಿಷ್ಠಾ ಮಹೋತ್ಸವ.
ಕಾಸರಗೋಡು: ಭಕ್ತರ ನಂಬಿಕೆಯ ಪಾಂಗೋಡು ಶ್ರೀ ದುರ್ಗಾಪಮೇಶ್ವರೀ ಅಮ್ಮ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವ. ನೆನ್ನೆ ವಿಜೃಂಭಣೆಯಿಂದ ನೆರವೇರಿತು. ವಿಶೇಷವಾಗಿ ಅಲಂಕಾರಗೊಂಡ ಶ್ರೀ ಮಹಾಗಣಪತಿ ಶ್ರೀ ಸುಬ್ರಮಣ್ಯ , ಶ್ರೀ ವ್ಯಾಘ್ರ ಚಾಮುಂಡಿ, ಶ್ರಿವೀರಭದ್ರ, ಮತ್ತು ಗುರುಫೀಠ ಮಹಾಕಾಲಬೈರವೇಶ್ವರ ದೇವರ ಪೂಜೆಯು ಭಕ್ತರ ಕಣ್ಮನ ಸೆಳೆಯಿತು. ನೆನ್ನೆ ಬೆಳಗ್ಗಿನಿಂದ ಗಣಹೋಮ , ಚಂಡಿಕಾ ಹೋಮ , ಬಿಂಬ ಶುದ್ಧಿ ,ಕಲಶಪೂಜೆ ,ಸಾನಿಧ್ಯ ಕಲಶ ಪೂಜೆ, ಕಲಶಾಭಿಷೇಕ , ಮಹಾಪೂಜೆ ಮತ್ತು ಶ್ರೀ ದೇವಿಯ ದರ್ಶನ ಸೇವೆಯು ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸೇರಿದ ಭಕ್ತರ ಕಣ್ಮನ ಸೆಳೆಯಿತು. ಲಲಿತಾ ಸಹಸ್ರನಾಮ ಪಟನೆ ಹಾಗು ಭಜನೆ ಕಾರ್ಯಕ್ರಮವು ಮಹಾಪೂಜೆಯೊಂದಿಗೆ, ಸುಂದರವಾಗಿ ಮೂಡಿತು ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ?ಕೊಡಗಿನಲ್ಲಿ ಇನ್ನೊಂದು ಗ್ಲಾಸ್ ಬ್ರಿಡ್ಜ್ ನಿರ್ಮಾಣ ಹಂತದಲ್ಲಿ!