ಇಲ್ಲಿದೆ 👇🏻 ಹತ್ತೂರ ಕಾಯುವ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಇತಿಹಾಸ :
ಇಲ್ಲಿದೆ 👇🏻 ಹತ್ತೂರ ಕಾಯುವ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಇತಿಹಾಸ :
ದಿನ ಬೆಳಗಾದರೆ ಭಕ್ತರು ಭಕ್ತಿಯಿಂದ ನೆನೆಯುವ ಪುತ್ತೂರು ಸೀಮೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸ ಹಾಗೂ ಪೌರಾಣಿಕ ಹಿನ್ನೆಲೆ ಇದೆ ದೇಗುಲದ ಕಲಾತ್ಮಕ ಕೆತ್ತನೆಗಳೂ ಅವರ್ಣನೀಯ ನಂಬಿಕೆಯ ಶಕ್ತಿ ಅಮೋಘಮಹಾಲಿಂಗೇಶ್ವರನ್ನು ಭಕ್ತಿಪೂರ್ವಕ ಪೂಜಿಸಿ ಬಂದಿರುವ ಭಕ್ತರೆಲ್ಲರೂ ಒಳಿತಿನ ಜತೆಗೆ ಅಭಿವೃದ್ಧಿ ಕಂಡಿದ್ದಾರೆ
ಪುತ್ತೂರು ಮಹಾಲಿಂಗೇಶ್ವರ ಕೇವಲ ಪುತ್ತೂರಿಗೆ ಮಾತ್ರವಲ್ಲ ಹತ್ತೂರಿಗೂ ಒಡೆಯ. ಕಾಶಿಯನ್ನು ಬಿಟ್ಟರೆ ದೇವಾಲಯದ ಎದುರು ಸ್ಮಶಾನ ಇರುವ ಮತ್ತೊಂದು ದೇವಾಲಯವೆಂದರೆ ಅದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಪುತ್ತೂರಿನ ಜನರ ದೈನಂದಿನ ದಿನಚರಿ ಮಹಾಲಿಂಗೇಶ್ವರನ ನಾಮ ಸ್ಮರಣೆಯಿಲ್ಲದೆ ಪ್ರಾರಂಭವಾಗುವುದಿಲ್ಲ. ಪುತ್ತೂರಿನ ಜನರು ಜಗತ್ತಿನಲ್ಲಿ ಎಲ್ಲೇ ಇರಲಿ, ಅವರ ಮನೆಯಲ್ಲಿ ಶ್ರೀಮಹಾಲಿಂಗೇಶ್ವರ ದೇವರ ಭಾವಚಿತ್ರಕ್ಕೆ ನಿತ್ಯ ಪೂಜೆ ಸಲ್ಲುತ್ತದೆ
ಮತ್ತೊಂದು ವಿಶೇಷತೆ ದೇವಾಲಯ ಹಿಂಭಾಗದಲ್ಲಿರುವ ಸದಾ ಹಸಿರಿನಿಂದ ಕಂಗೊಳಿಸುವ ಕೆರೆ ದೇವಾಲಯದ ಪಶ್ಚಿಮಕ್ಕೆ ಇರುವ ಕೆರೆಯಲ್ಲಿ ಅದರ ಆಳ ಎಷ್ಟೇ ಆದರೂ ನೀರು ಸಿಗದೇ ಇದ್ದ ಸಮಯದಲ್ಲಿ, ವರುಣ ದೇವರಿಗೆ ಪೂಜೆ ಸಲ್ಲಿಸಿ ಕೆರೆಯೊಳಗೆ ಬ್ರಾಹ್ಮಣರಿಗೆ ಅನ್ನಸಂತರ್ಪಣೆ ಮಾಡಬೇಕು ಎಂದು ತಿಳಿದುಬಂತು ಅದರಂತೆ ಸಾವಿರಾರು ಜನರಿಗೆ ಕೆರೆಯ ತಳದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಯಿತು ಬ್ರಾಹ್ಮಣರು ಊಟ ಮಾಡುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿತಂತೆ ಸೇರಿದ ಜನರು ಊಟದ ಎಲೆಯನ್ನು ಹಾಗೆಯೇ ಬಿಟ್ಟು ಎದ್ದು ಹೊರಗೆ ಓಡಿದರಂತೆ ಅವರ ಎಲೆಯಲ್ಲಿದ್ದ ಅನ್ನದ ಅಗುಳುಗಳು ಮುತ್ತುಗಳಾಗಿ ಬೆಳೆದವು ಎಂದೂ, ಮುತ್ತುಗಳು ಬೆಳೆದ ಊರು ಮುತ್ತೂರು ಎಂದಾಗಿ, ಕ್ರಮೇಣ ಜನರ ಬಾಯಲ್ಲಿ ಪುತ್ತೂರು ಎಂದಾಯಿತೆಂದು ಇಲ್ಲಿನ ಜನರು ಹೇಳುತ್ತಾರೆ ಈ ಕ್ಷೇತ್ರದ ಮತ್ತೊಂದು ವಿಶೇಷತೆ ಮಹಾಲಿಂಗೇಶ್ವರನ ಎದುರು ಇರುವ ಮೂರುವರೆ ಕಾಲಿನ ನಂದಿ ಇದರ ಉಳಿದ ಅರ್ಧ ಕಾಲು ಕಲ್ಲಿನ ರೂಪದಲ್ಲಿ ಗದ್ದೆಯಲ್ಲಿದೆ
ಹಿಂದೆ ಶಿವನ ವಾಹನವಾದ ನಂದಿ, ಕ್ಷೇತ್ರದ ಗದ್ದೆಯಲ್ಲಿ ಬೆಳೆಯುತ್ತಿದ್ದ ಭತ್ತ ಪೈರುಗಳನ್ನು ರಾತ್ರಿ ವೇಳೆ ತಿನ್ನುತ್ತಿತ್ತು ಇದರಿಂದಾಗಿ ಪೈರು ನಷ್ಟವಾಗಲು ಹೇಗಾದರೂ ಮಾಡಿ ನಂದಿಯನ್ನು ಹಿಡಿಯಬೇಕು ಎಂದು ಜನರು ನಿರ್ಧರಿಸಿದರಂತೆ ಒಂದು ರಾತ್ರಿ ನಂದಿ ಪೈರು ತಿನ್ನುತ್ತಿರಲು ಜನರು ಅದರ ಕಾಲನ್ನು ಕಡಿದು ಬಿಟ್ಟರಂತೆ ರಕ್ತದ ಮಡುವಲ್ಲಿ ನಂದಿ ಮಹಾಲಿಂಗೇಶ್ವರ ನ ಬಳಿ ಬಂದು ಮೊರೆ ಇಡಲು, ಮಹಾದೇವ ಆ ನಂದಿಗೆ ಕಲ್ಲಿನ ರೂಪ ಕೊಟ್ಟು ತನ್ನ ಬಳಿ ಇರಿಸಿಕೊಂಡ ಎಂಬ ಪ್ರತೀತಿ ಇಲ್ಲಿದೆ
ಪ್ರತಿ ವರ್ಷ ಏಪ್ರಿಲ್ 1 ರಂದು ಗೊನೆ ಕಡಿದು ಏಪ್ರಿಲ್ 10ರಂದು ಸಾಂಪ್ರದಾಯಿಕ ಧ್ವಜಾರೋಹಣ ನಡೆಯುವುದರೊಂದಿಗೆ ಪ್ರಾರಂಭವಾಗುವ ಪುತ್ತೂರು ಜಾತ್ರೆಯು 9 ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುತ್ತದೆ ಇಲ್ಲಿನ ಭಕ್ತವೃಂದ ಜಾತ್ರೆಯ ಹತ್ತು ದಿನಗಳ ಕಾಲ ವೃತವನ್ನು ಪಾಲಿಸುತ್ತಾ ಮಹಾಲಿಂಗೇಶ್ವರನ ನಾಮವನ್ನು ಸ್ತುತಿಸುತ್ತಾರೆ
ಪುತ್ತೂರು ಮಹಾಲಿಂಗೇಶ್ವರ ದೇಗುಲದ ಮತ್ತೊಂದು ವಿಶೇಷತೆಯೆಂದರೆ ಆನೆಗಳು ದೇವಾಲಯದ ಆವರಣಕ್ಕೆ ಎಂದಿಗೂ ಪ್ರವೇಶ ಪಡೆಯಲು ಅವಕಾಶವಿಲ್ಲ ಇದರ ಹಿಂದೆಯೂ ಸ್ವಾರಸ್ಯಕರ ಕಥೆಯೊಂದಿದೆ ಒಮ್ಮೆ ಕಳ್ಳನೊಬ್ಬ ದೇವಾಲಯ ಪ್ರವೇಶಿಸಿ ಪ್ರಮುಖ ವಿಗ್ರಹವನ್ನು ಕದ್ದು ಪಾರಾಗಲೂ ಸಾಧ್ಯವಾಗದೇ ಕೊಳದೊಳಗೆ ಈ ವಿಗ್ರಹವನ್ನು ಎಸೆದಿದ್ದ ಕೊಳದ ಆಳಕ್ಕೆ ಬಿದ್ದಿದ್ದ ಆ ವಿಗ್ರಹವನ್ನು ಮೇಲೆತ್ತಲು ಆನೆಯೊಂದನ್ನು ತರಲಾಯಿತು ಹಗ್ಗವೊಂದನ್ನು ವಿಗ್ರಹಕ್ಕೆ ಕಟ್ಟಿ ಎಳೆಯಲಾಯಿತು ಆದರೆ ಆನೆಯು ಮಹಾಲಿಂಗೇಶ್ವರ ವಿಗ್ರಹವನ್ನು ಗಟ್ಟಿಯಾಗಿ ಎಳೆದದ್ದು ಮಹಾಲಿಂಗೇಶ್ವರನಿಗೆ ಕೋಪ ತರಿಸಿತು ನಂತರ ಆನೆಯು ಈ ದೇವಾಲಯಕ್ಕೆ ಶಾಪಗ್ರಸ್ತವಾಗಿದ್ದು, ಯಾವುದೇ ಆನೆ ದೇಗುಲದ ಆವರಣಕ್ಕೆ ಪ್ರವೇಶಿಸಬಾರದು ಮತ್ತು ಪ್ರವೇಶಿಸಿದರೆ ಆನೆ ಸಾವನ್ನಪುತ್ತದೆ ಎನ್ನುವುದು ಇಲ್ಲಿನ ನಂಬಿಕೆ