ಕಡಬ: ತಾಲೂಕು ಜ್ಞಾನ ವಿಕಾಸ ಕೇಂದ್ರಗಳ ವಾರ್ಷಿಕೋತ್ಸವದ ಪೂರ್ವತಯಾರಿ ಸಭೆ
ಕಡಬ: ತಾಲೂಕು ಜ್ಞಾನ ವಿಕಾಸ ಕೇಂದ್ರಗಳ ವಾರ್ಷಿಕೋತ್ಸವದ ಪೂರ್ವತಯಾರಿ ಸಭೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಜ್ಞಾನ ವಿಕಾಸ ಕೇಂದ್ರಗಳ ವಾರ್ಷಿಕೊತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಸಭೆಯು ಬಿಳಿನೆಲೆ ಗೋಪಾಲಕೃಷ್ಣ ಸಭಾ ಭವನದಲ್ಲಿ ನಡೆಯಿತು.
ಕಡಬ ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಚೇತನರವರು ಮಾತನಾಡಿ 2024-25ನೇ ಸಾಲಿನ ಕ್ರೀಯಾ ಯೋಜನೆಯನ್ವಯ ಕಡಬ ತಾಲೂಕಿನ 25 ಜ್ಞಾನವಿಕಾಸ ಕೇಂದ್ರಗಳ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬಿಳಿನೆಲೆ ವಲಯದ ಬಿಳಿನೆಲೆ ಶ್ರೀ ಗೋಪಾಲಕಷ್ಣ ಪ್ರೌಡಶಾಲೆಯ ನೂತನ ಸಭಾ ಭವನದಲ್ಲಿ ನವಂಬರ್ 24 ರ ಭಾನುವಾರ ನಡೆಸಲು ತಿರ್ಮಾನಿಸಲಾಗಿದೆ.
ಕಾರ್ಯಕ್ರಮವು ಬೆಳಿಗ್ಗೆ 9-00ರಿಂದ ಪ್ರಾರಂಭವಾಗಿ ಸಂಜೆ 4-00ಗಂಟೆಯವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಯವರಿಂದ ಒತ್ತಡ ನಿರ್ವಹಣೆಯೊಂದಿಗೆ ಮಹಿಳೆಯ ದೈನಂದಿನ ಕಾರ್ಯವೈಖರಿ ಎಂಬ ವಿಷಯದ ಕುರಿತು ಮಹಿಳಾ ವಿಚಾರಗೊಷ್ಟಿ ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳಿಂದ ಜಾನಪದ ನೃತ್ಯ ವೈಭವ , ರಂಗೋಲಿ ಸ್ಪರ್ಧೆ ಹಾಗೂ ಪುಷ್ಪಗುಚ್ಚ ತಯಾರಿ ಸ್ಪರ್ಧೆಯು ನಡೆಯಲಿದೆ.
ತಾಲೂಕಿನ 25 ಜ್ಞಾನವಿಕಾಸ ಕೇಂದ್ರದ ಸುಮಾರು 750ಜನ ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ. ಕಡಬ ತಾಲೂಕು ಮಟ್ಟದ ಜ್ಞಾನವಿಕಾಸ ಕೇಂದ್ರಗಳ ವಾರ್ಷಿಕೋತ್ಸವ ಕಾರ್ಯಕ್ರಮವು ಈ ವರ್ಷದಲ್ಲಿ ಬಿಳಿನೆಲೆ ವಲಯದಲ್ಲಿ ನಡೆಸಲು ತೀರ್ಮಾನಿಸಿರುವುದು ಸ್ವಾಗತಾರ್ಹ ಹಾಗೂ ನಮ್ಮ ವಲಯಕ್ಕೆ ಹೆಮ್ಮೆ ತರುವಂತಹುದು ಒಂದು ದಿನದ ಈ ಸಂಭ್ರದಲ್ಲಿ ತಾಲೂಕಿನ ಆರು ವಲಯಗಳಿಂದ ತಲಾ ಒಂದರಂತೆ ಜ್ಞಾನವಿಕಾಸ ಮಹಿಳೆಯರೇ ತಯಾರಿಸಿದ ತಿಂಡಿ ತಿನಿಸುಗಳು ಗೃಹಲಂಕಾರದ ವಸ್ತುಗಳು ಹಾಗೂ ವಸ್ತ್ರ ವಿನ್ಯಾಸದ ಪರಿಕರಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತಿದ್ದು ಹೆಚ್ಚಿನ ಸದಸ್ಯರುಗಳು ಇದರ ಪ್ರಯೋಜನ ಪಡೆದುಕೊಳ್ಳುವುದು. ವಲಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ನಮ್ಮ ವಲಯದ 12 ಒಕ್ಕೂಟದ ಪಧಾದಿಕಾರಿಗಳು ಹೆಚ್ಚು ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡುವಂತೆ ತಿಳಿಸಿದರು.
ಬಿಳಿನೆಲೆ ಒಕ್ಕೂಟದ ಅಧ್ಯಕ್ಷರಾದ ರಾಜೇಶ್ ಒಗ್ಗು ,ಕೋಣಾಜೆ ಒಕ್ಕೂಟದ ಅಧ್ಯಕ್ಷರಾದ ಡೀಕಯ್ಶ ಗೌಡ,ˌ ಕೊಂಬಾರು ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ ಗೌಡˌ, ಕೈಕಂಬ ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ ಗೌಡ ,ˌಮರ್ದಾಳ ಶೌರ್ಯ ಘಟಕದ ಘಟಕ ಪ್ರತಿನಿಧಿ ಭವಾನಿಶಂಕರ ,ˌಬಿಳಿನೆಲೆ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಶ್ರೀಮತಿ ಉಷಾ ಸತೀಶ್, ವಲಯದ ಸೇವಾ ಪ್ರತಿನಿಧಿಗಳಾದ ಬೇಬಿ ಕೊಣಾಜೆ ˌವಿನೋಧ್ ಕೆ ಸಿ ಸಿರಿಬಾಗಿಲು ˌಭವ್ಶ ಕೈಕಂಬ ˌರೇಖಾ ಸುಳ್ಯˌ ಗಣೇಶ್ ಐತ್ತೂರುˌ ಜ್ಞಾನ ಸೇಲ್ವೀ ಕೋಡಿಂಬಾಳ ˌದಿನೇಶ್ ನೆಕ್ಕಿಲಾಡಿ ˌನೇತ್ರ ಬೊಳ್ಳೂರು ಹಾಗೂ ವಲಯದ ಒಕ್ಕೂಟದ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಬಿಳಿನೆಲೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸತೀಶ್ ಆಜಾನ ಸ್ವಾಗತಿಸಿ, ವಂದಿಸಿದರು.