ಆನೆಗುಂಡಿ: ಹೆದ್ದಾರಿ ಬಳಿ ಕಾಡಾನೆಗಳು ಸಂಚಾರ:
ಆನೆಗುಂಡಿ: ಹೆದ್ದಾರಿ ಬಳಿ ಕಾಡಾನೆಗಳು ಸಂಚಾರ:
ಆನೆಗುಂಡಿ: ಮಾಣಿ-ಮೈಸೂರು ಹೆದ್ದಾರಿಯ ಆನೆಗುಂಡಿ ಎಂಬಲ್ಲಿ ಎರಡು ಕಾಡಾನೆಗಳು ಕಾಣಸಿಕ್ಕಿದ್ದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ಈ ಭಾಗದಲ್ಲಿ ರಾತ್ರಿ ಹೊತ್ತು ಕಾಡಾನೆಗಳು ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿಗಳಿಗೆ ಹಾನಿ ಮಾಡುತ್ತಿರುವ ಘಟನೆ ನಡೆಯುತ್ತಿದೆ. ಈ ಮಧ್ಯೆ ಕನಕಮಜಲು ಗ್ರಾಮದ ಆನೆಗುಂಡಿಯಲ್ಲಿ ಎರಡು ಕಾಡಾನೆಗಳು ಹೆದ್ದಾರಿಯಲ್ಲಿ ನಡೆದುಕೊಂಡು ಹೋಗಿ ಅರಣ್ಯ ಪ್ರವೇಶಿಸಿದೆ. ಹಗಲು ಹೊತ್ತಿನಲ್ಲೇ ಕಾಡಾನೆಗಳು ಸಂಚಾರ ಮಾಡುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.