ಮೀನು ಕಚ್ಚಿ ಕೈಯನ್ನೇ ಕಳೆದುಕೊಂಡ ಕೃಷಿಕ!
ಮೀನು ಕಚ್ಚಿ ಕೈಯನ್ನೇ ಕಳೆದುಕೊಂಡ ಕೃಷಿಕ!
ಕಣ್ಣೂರು: ಕೇರಳದ ಕಣ್ಣೂರಿನಲ್ಲಿ ಕೃಷಿಕರೊಬ್ಬರ ಕೈಗೆ ಮೀನು ಕಚ್ಚಿದ ಪರಿಣಾಮ ಇದೀಗ ಕೈಯನ್ನೇ ಕತ್ತರಿಸಲಾಗಿದೆ. ಇಲ್ಲಿನ ತಲಶ್ಶೇರಿಯಾ ಮಡಪೀಡಿಕಾ ಎಂಬ ಊರಿನ ರಾಜೇಶ್ ಎಂಬ ಕೃಷಿಕ ಕೆರೆ ಸ್ವಚ್ಛಗೊಳಿಸುವಾಗ Asian stinging catfish ಎಂಬ ಹೆಸರಿನ ಮೀನು ಕಚ್ಚಿದ್ದು ಮಣ್ಣಿನಲ್ಲಿದ್ದ ಬ್ಯಾಕ್ಟೀರಿಯಾ ಸೇರಿಕೊಂಡ ಕಾರಣ ಅದು ಗಂಭೀರ ಸ್ಥಿತಿಗೆ ಹೋಗಿದೆ. ಮೊದಲು ಬೆರಳುಗಳಿಗೆ ಬ್ಯಾಕ್ಟೀರಿಯಾ ಹರಡಿದ್ದು, ಅದನ್ನು ಕತ್ತರಿಸಿದ ನಂತರ ಕೈಯನ್ನು ಕತ್ತರಿಸಲಾಗಿದೆ.
ಲಕ್ಷ ಮಂದಿಯಲ್ಲಿ ಒಬ್ಬರಿಗೆ ಬಾಧಿಸುವ ಈ ಬ್ಯಾಕ್ಟೀರಿಯಾ ದೇಹಕ್ಕೆ ಹರಡಿ ಬ್ರೈನ್ ಡೆಡ್ ಆಗಿ ಸಾವು ಸಂಭವಿಸುವ ಅಪಾಯವೂ ಇದೆ.