• 18 ಅಕ್ಟೋಬರ್ 2024

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ!

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ!
Digiqole Ad

ಮೇ13:- ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಇರುವುದರಿಂದ ಮೇ 13 ರಂದು ಬೆಳಗ್ಗೆ 5 ರಿಂದ ರಾತ್ರಿ 12ರ ವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ ,ಸದರಿ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ,ಹಾಗೆಯೇ,ಶವ ಸಂಸ್ಕಾರಕ್ಕೆ ಅಥವಾ ಮದುವೆ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಅಜ್ಞೆಯು ಅನ್ವಯಿಸುವುದಿಲ್ಲ , ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಯಾವತ್ತೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

144 ಸೆಕ್ಷನ್ ಅಂದರೇನು?

ಸಿಆರ್‌ಪಿಸಿ ಅಡಿಯಲ್ಲಿ ಬರುವಂತಾ ಸೆಕ್ಷನ್ 144ನ್ನು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಾರಿಗೊಳಿಸಲಾಗುತ್ತದೆ. ಸೆಕ್ಷನ್ 144 ಜಾರಿ ಮಾಡಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಜಿಲ್ಲಾಧಿಕಾರಿಗಳು ಒಂದು ನೋಟಿಫಿಕೇಷನ್ ಆದೇಶ ಹೊರಡಿಸುತ್ತಾರೆ. ಯಾವ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗುತ್ತೋ, ಆ ಪ್ರದೇಶದಲ್ಲಿ 4 ಜನ ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪಾಗಿ ನಿಲ್ಲುವಂತಿಲ್ಲ. ಯಾವ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಯಲ್ಲಿರುತ್ತೋ ಆ ಪ್ರದೇಶ ಹಾಗೂ ಅದರ ಸುತ್ತ ಮುತ್ತ ಯಾವುದೇ ಆಯುಧಗಳನ್ನ ತರುವುದು ಅಥವಾ ತೆಗೆದುಕೊಂಡು ಹೋಗುವುದು ಅಪರಾಧವಾಗುತ್ತದೆ. ಅಂಥವರನ್ನ ಕೂಡಲೇ ವಶಕ್ಕೆ ಪಡೆಯುವ ಅಧಿಕಾರ ಪೊಲೀಸರಿಗೆ ಇರುತ್ತದೆ.

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ