• 18 ಅಕ್ಟೋಬರ್ 2024

ಇಲ್ಲಿ ಮೀನೇ ಪ್ರಸಾದ ! ಕಂಡೇವುದ ಆಯನ

 ಇಲ್ಲಿ ಮೀನೇ ಪ್ರಸಾದ ! ಕಂಡೇವುದ ಆಯನ
Digiqole Ad

ಮೀನು ಇಲ್ಲಿ ಪ್ರಸಾದ! ಕಂಡೇವುದ ಆಯನದ ಕ್ಷಿಣ ಕನ್ನಡ ಜಿಲ್ಲೆಯ ಪಾವಂಜೆ. ನಂದಿನಿ ನದಿಯ ಒಂದು ಕವಲು. ಅಲ್ಲಿ ಒಂದು ತಿಂಗಳ ಕಾಲ ಕಟ್ಟ ಕಟ್ಟಿ ಮೀನು ಹಿಡಿಯುವುದನ್ನು ನಿಷೇಧಿಸಲಾಗುತ್ತದೆ. ಕೊಂಡೇವು ಆಯನಕ್ಕೆ, ಹಿರಿಯರ ನೆನಪಿಗೆ ಊರ ಜನರೆಲ್ಲ ನೀರಿಗಿಳಿದು, ಮೀನು ಹಿಡಿಯುತ್ತಾರೆ. ಅದೇ ಅವರಿಗೆ ಪ್ರಸಾದ. ಹಿರಿಯರಿಗೂ ಅದನ್ನು ಅರ್ಪಿಸಲಾಗುತ್ತದೆ.

Fish

ಮೀನು ಇಲ್ಲಿನ ಪ್ರಸಾದ ಇಲ್ಲಿದೆ ಸಂಪೂರ್ಣ ಮಾಹಿತಿ

 

ಕೊಡಿ ಮರ ಏರುವ ಜಾತ್ರೆ ಎರ್ಮಾಳಿಂದ ಶುರುವಾದರೆ ಕೊಂಡೇವು ಆಯನಕ್ಕೆ ಮುಗಿಯುತ್ತದೆಯಂತೆ. ಆಲಡೆ, ಸಿರಿ ಜಾತ್ರೆಯ ಜೊತೆಗೆ ಅವಿಭಜಿತ ದ.ಕ ಜಿಲ್ಲೆಗಳ ಕೊನೆಯ ಜಾತ್ರೆ ಎಂದೂ ಇದಕ್ಕೆ ಪ್ರಾಧಾನ್ಯತೆ.

 

ಈ ಕುರಿತು ಹಿಂದೆ ಕೇಳಿದ್ದೆ. ನೋಡಿರಲಿಲ್ಲ. ಅಂಡಾರು ಮಲೆಯ ಬಗ್ಗೆ‌ ಮಾಹಿತಿ ನೀಡಿ, ಕುತೂಹಲ ಹೆಚ್ಚಿಸಿದ್ದ ಅಂಡಾರಿನ ಸುನೀತಕ್ಕ ವಾರದ ಹಿಂದೆಯೇ ಈ ಕುರಿತು ತಿಳಿಸಿದ್ದರು. ನಾನು‌ ಮರೆಯಬಹುದೆಂದು ನಿನ್ನೆಯೂ ಎರಡು ಸಲ ಕರೆ‌ಮಾಡಿ ಎಚ್ಚರಿಸಿದ್ದರು. ಇಂದು ಬೆಳಿಗ್ಗೆ ಐದು ಗಂಟೆಗೆ ಎದ್ದು ಹೋಗಿದ್ದು‌.

 

ಹಿಂದೆಲ್ಲ, ಮೊದಲು, ದೈವಕ್ಕೆ ಅರ್ಪಿಸಲು ಮೀನು ಹಿಡಿದು, ಸಂಪ್ರದಾಯ ಮುಗಿದ ಬಳಿಕ ಬೆಡಿಯ ಸದ್ದು ಕೇಳಿದ ಮೇಲೆಯೇ ಜನ ನೀರಿಗಿಳಿಯುತ್ತಿದ್ದರಂತೆ. ಆದರೀಗ ನಡುರಾತ್ರಿಗೇ ಬಂದು ಜನ ಬಲೆ ಬೀಸಲು ಶುರು ಮಾಡುತ್ತಾರಂತೆ.

ಸಾರ್ವಜನಿಕರು ಯಾರು ಬೇಕಾದರೂ ಹಿಡಿಯಬಹುದು. ಬಗೆ ಬಗೆಯ ನದಿಯ ಮೀನು. ಕೆಲವರು ಮನೆಗಾಗಿ ಹಿಡಿದರೆ ಮತ್ತೆ ಕೆಲವರು ಅಲ್ಲಿ ಮಾರುವುದಕ್ಕೆಂದೇ ಹಿಡಿಯುತ್ತಾರೆ‌. ಬೇಡಿಕೆ ಜಾಸ್ತಿ ಇರುವುದರಿಂದ ಬೆಲೆಯೂ ಜಾಸ್ತಿ. ಅದೆಷ್ಟೇ ರೇಟ್ ಏರಿದರೂ ಆ ಊರಿನಲ್ಲಿ ಹಿರಿಯರಿಗೆ ಕಂಡೇವು ಮೀನುಗಳದ್ದೇ ಅಗೆಲು ಆಗಬೇಕೆಂಬ ಕಟ್ಟು.

 

ಸಾವಿರಾರು ಜನ ನೀರಿಗಿಳಿದು ಮೀನು ಹಿಡಿಯುವ ನೋಟವೇ ಹಬ್ಬ. ಸುನಿತಕ್ಕ ಮತ್ತು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದ ಕೇಶವಣ್ಣ, ಇಲ್ಲಿನ ಹೆಚ್ಚಿನ ಫೋಟೋಗಳನ್ನು ಕ್ಲಿಕ್ಕಿಸಿದ ನನ್ನ ಹೆಂಡತಿ ಸುಮಿತ್ರಾ ಕಾಮತ್ ಹಾಗೂ ಆತ್ಮೀಯತೆಯಿಂದ ಮಾತಾಡಿಸಿದ ಊರ ಜನರೆಲ್ಲರಿಗೂ ಧನ್ಯವಾದಗಳು.

ಮಾಹಿತಿ ಕೃಪೆ,

ಲೇಖಕ:- ಮಂಜುನಾಥ್ ಕಾಮತ್

(ಬರಹಗಾರ – ಲೇಖಕ – ವಿಮರ್ಶಕ )

 

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ