• 18 ಅಕ್ಟೋಬರ್ 2024

ಇತಿಹಾಸ ತಿಳಿಯೋಣ ಬನ್ನಿ:- ಭಾಗ-೨

 ಇತಿಹಾಸ ತಿಳಿಯೋಣ ಬನ್ನಿ:- ಭಾಗ-೨
Digiqole Ad

ಇತಿಹಾಸ : ವಿಂದ್ಯಗಿರಿ ಬೆಟ್ಟ(ದೊಡ್ಡ ಬೆಟ್ಟು ಸಮುದ್ರ ಮಟ್ಟದಿಂದ ಸುಮಾರು 1020 ಮೀಟರ್‌ಗಳಷ್ಟು ಮತ್ತು ಬೆಟ್ಟದ ಬುಡದಿಂದ ಸುಮಾರು 143 ಮೀಟರ್‌ಗಳಷ್ಟು ಎತ್ತರವಾಗಿದೆ. ಸ್ಥಳೀಯವಾಗಿ ದೊಡ್ಡಬೆಟ್ಟ ಎ೦ದು ಕರೆಯಲ್ಪಡುವ ವಿಂಧ್ಯಗಿರಿಯ ಮೇಲೆ ಗೊಮ್ಮಟೇಶ್ವರ ಅಥವಾ ಬಾಹುಬಲಿ ವಿಗ್ರಹವಿದೆ. ಅನತಿ ದೂರದಿಂದಲೇ ನೋಡುವುದಕ್ಕೆ ಕಾಣಬರುವ ಈ ಭವ್ಯ ಗೊಮ್ಮಟ

Shravana belagola

 

 

ವಿಗ್ರಹದ ಮೇಲ್ಬಾಗ, ನಿಮ್ಮನ್ನು ತಟ್ಟನೆ ಆಕರ್ಷಿಸುತ್ತದೆ. ದೊಡ್ಡ ಬೆಟ್ಟದ ಬುಡದಲ್ಲಿಯೇ ಆಕರ್ಷವಾಗಿರುವ ‘ದೊಡ್ಡ ಮಹಾದ್ವಾರ’ ನಿಮ್ಮನ್ನು ಸ್ವಾಗತಿಸುತ್ತದೆ. ಒಳಭಾಗದಲ್ಲಿ ಮತ್ತೊಂದು ಕಗ್ಗಲ್ಲ ಸ್ವಾಗತ ಕಮಾನು. ಬೆಟ್ಟವನ್ನು ಹತ್ತಲು, ಇಳಿಯಲು ಮೆಟ್ಟಿಲುಗಳು ಇವೆ, ಆಯಾಸವಾಗದಂತೆ ಹತ್ತಲು ಮತ್ತು ಜೋಪಾನವಾಗಿ ಇಳಿಯಲು ಎರಡು ಬದಿಯಲ್ಲಿಯೂ ರೈಲಿಂಗ್ ಅಳವಡಿಸಿದ್ದಾರೆ.

 

ಮೊದಲಿಗೆ ಶ್ರೀಪಾರ್ಶ್ವನಾಥ ಚಾರುಗುಪ್ಪೆ ದೇವಸ್ಥಾನ, ದಣಿವಾರಿಸಿಕೊಳ್ಳಲು ಅಲ್ಲಲ್ಲಿ ಕುಳಿತು, ಮೆಟ್ಟಿಲುಗಳನ್ನು ಹತ್ತಿ ಮೇಲೆ ಬಂದರೆ ಬೃಹತ್ ಬಂಡೆಯ ಮೇಲ್ಬಾಗಕ್ಕೆ ತಲುಪಬಹುದು. ಅಲ್ಲಿ ನಿಮ್ಮನ್ನು ಕಲ್ಲುಗಳಿಂದ ಕಟ್ಟಲ್ಪಟ್ಟ, ಬೃಹತ್ ಗೋಡೆಯೊಂದು ಎದರು ಗೊಳ್ಳುತ್ತದೆ. ಇದು ಮೊದಲನೇ ಪ್ರಾಕಾರದ (ಹೊರ ಕೋಟೆ] ಗೋಡೆ,

ಮುಂದುವರೆಯುವುದು……..

Shravana belagola

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ