ಎಣ್ಣೆ ಪ್ರಿಯರ ಆಸೆಗೆ ಸರ್ಕಾರದಿಂದ ತಣ್ಣೀರು!
ಎಣ್ಣೆ ಪ್ರಿಯರ ಆಸೆಗೆ ಸರ್ಕಾರದಿಂದ ತಣ್ಣೀರು, ಸದ್ಯಕ್ಕಂತೂ ಕಡಿಮೆ ಬೆಲೆಯ ಸಾರಾಯಿ ಸಿಗಲ್ಲ ಅಂದ್ರು ಸಚಿವರು
ಗ್ಯಾರಂಟಿ ಯೋಜನೆಗಳ ಹೊರೆ ತಗ್ಗಿಸಲು ಅಬಕಾರಿ ಸುಂಕ ಹೆಚ್ಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ಅಬಕಾರಿಯಿಂದ ಆದಾಯ ಹೆಚ್ಚಿಗೆ ಬರುವ ನಿರೀಕ್ಷೆ ಇಟ್ಟುಕೊಳ್ಳೋಣ. ಇನ್ನೂ ಬೆಲೆ ಏರಿಸಿಲ್ಲ. ಹೆಚ್ಚಿಸುವಾಗ ಹೇಳುತ್ತೇವೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಹೊರೆ ತಗ್ಗಿಸಲು ಅಬಕಾರಿ ಸುಂಕ ಹೆಚ್ಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ಅಬಕಾರಿಯಿಂದ ಆದಾಯ ಹೆಚ್ಚಿಗೆ ಬರುವ ನಿರೀಕ್ಷೆ ಇಟ್ಟುಕೊಳ್ಳೋಣ. ಇನ್ನೂ ಬೆಲೆ ಏರಿಸಿಲ್ಲ. ಹೆಚ್ಚಿಸುವಾಗ ಹೇಳುತ್ತೇವೆ. ಇಲಾಖೆಯ ಆಡಳಿತದಲ್ಲಿ ಬದಲಾವಣೆ ತರುತ್ತೇವೆ. ಲಿಕೇಜ್ ಕಂಟ್ರೋಲ್ ಮಾಡ್ತೇವೆ. ವಿಶೇಷವಾಗಿ ಡ್ರಗ್ಸ್, ಗಾಂಜಾ ಕಂಟ್ರೋಲ್ ಮಾಡುತ್ತೇವೆ ಎಂದರು.
ಯಾವುದೇ ಯೋಜನೆ ತಂದ್ರು ಹಣಕಾಸು ಹೊಂದಿಸಲು ಅಬಕಾರಿ ಕಡೆಗೆ ನೋಡ್ತಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ಜಿಎಸ್ ಟಿ ಬಂದ ಬಳಿಕ ಆದಾಯ ಸಂಗ್ರಹಕ್ಕೆ ಎರಡು, ಮೂರು ಇಲಾಖೆ ಬಿಟ್ಟರೆ ಬೇರೆ ಇಲ್ಲ. ಅದು ಅನಿವಾರ್ಯವಾಗಿ ನಿಮ್ಮ ಕಣ್ಣಿಗೆ ನಮ್ಮ ಖಾತೆಯೇ ಕಾಣುತ್ತೆ. ಅದು ಸಹಜವೂ ಹೌದು. ರಾಜಸ್ವ ಹೆಚ್ಚಿಗೆ ಮಾಡಲು ಲಿಕೇಜ್ ಕಂಟ್ರೋಲ್ ಮಾಡುತ್ತೇವೆ ಎಂದರು. ಎಲ್ಲ ಹೊರೆಯನ್ನು ಮದ್ಯಪ್ರಿಯರ ಮೇಲೆ ಹೊರೆಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ನೋ… ನೋ… ಹಂಗೆ ಆಗಲ್ಲ. ಮದ್ಯದ ಬೆಲೆ ಹೆಚ್ಚಿಸುವ ಬಗ್ಗೆ ಮದ್ಯ ಪ್ರಿಯರು ಬೇಸರ ಆಗ್ತಾರೆ ಅಂತ ನನಗಂತೂ ಯಾರೂ ಬಂದು ಹೇಳಿಲ್ಲ. ನಿಮಗೆ ಯಾರಾದ್ರೂ ಹೇಳಿದ್ರೆ ಆ ಬಗ್ಗೆ ನಾನು ಮಾತಾಡ್ತೇನೆ ಎಂದರು.
ಇನ್ನು, ಶಕ್ತಿ ಯೋಜನೆಯಿಂದ ಟಂಟಂ, ಆಟೋ ಚಾಲಕರಿಗೆ ಸಂಕಷ್ಟ ಉಂಟಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ಸಹಜವಾಗಿ ಹೊಸ ಅಭಿವೃದ್ದಿ ವಿಚಾರ ಬಂದಾಗ ಮತ್ತೊಂದು ಕಡೆಗೆ ತೊಂದರೆ ಆಗುತ್ತದೆ. ಅದು ಸರಿ ಮಾಡಲು ಏನು ಮಾಡಬೇಕು ಎಂದು ಸರ್ಕಾರ ಗಮನಿಸುತ್ತದೆ ಎಂದರು.
ನೆನೆಗುದಿಗೆ ಬಿದ್ದಿರುವ ಘೋಷಿತ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜ್ ವಿಚಾರದ ಕುರಿತು ಮಾತನಾಡಿ, ಚುನಾವಣೆ ಮುಗಿಯುತ್ತಿದ್ದಂತೆ ನಮ್ಮ ಶಾಸಕರು ಎಚ್ ವೈ ಮೇಟಿ, ಜೆ.ಟಿ.ಪಾಟೀಲ ಆ ಕಡೆಗೆ ಒತ್ತು ಕೊಟ್ಟಿದ್ದಾರೆ. ಸರ್ಕಾರ ಗಮನಿಸುತ್ತಿದೆ. ಇದೇ ಅವಧಿಯಲ್ಲಿ ಮೆಡಿಕಲ್ ಕಾಲೇಜ್ ಬರುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಅದರಲ್ಲಿ ತಪ್ಪೇನು ಇಲ್ಲ ಎಂದರು.ಎಂದು ಅಧಿಕೃತ ಮೂಲಗಳು ತಿಳಿಸಿವೆ.
RBIನಿಂದ ಶಾಲಾ ಮಕ್ಕಳಿಗೆ 20,000..ಬಹುಮಾನ ಗೆಲ್ಲಿ