• 18 ಅಕ್ಟೋಬರ್ 2024

ಜೀವನ-ಪಯಣ:ಶೇಖರ.ಎಂ. ದೇಲಂಪಾಡಿ

 ಜೀವನ-ಪಯಣ:ಶೇಖರ.ಎಂ. ದೇಲಂಪಾಡಿ
Digiqole Ad

ಜೀವನ-ಪಯಣ:ಶೇಖರ.ಎಂ. ದೇಲಂಪಾಡಿ

ಜೀವನವೆಂಬುದೊಂದು

ಸುಂದರ ಪಯಣ

ಹಾಯಿಸುವುದು

ಸುತ್ತಲು ನಯನ

ಆಕಸ್ಮಿಕವಾಗಿರುವುದು

ನಿನ್ನ ಜನನ

ನಿಶ್ಚಿತವಾಗಿರುವುದು

ನಿನ್ನ ಮರಣ.

 

ಅಡೆತಡೆಗಳನು ದಾಟಿ

ಮುಂದುವರಿಯಬೇಕು

ಕಲ್ಲುಮುಳ್ಳುಗಳ

ನೋವ ಸಹಿಸಿ ಬಾಳಬೇಕು

ಒಳ್ಳೆಯ ನಡತೆ

ಸರಳತೆಯೊಂದು ಸಾಕು

ನಿನ್ನದಾಗುವುದು

ನೆಮ್ಮದಿಯ ಬದುಕು.

 

ಅನುಭವಗಳ ಮಂಟಪವಾಗಿರಲಿ

ನಿನ್ನ ಈ ಪಯಣವು

ಮತ್ತೆ ಮತ್ತೆ ಬರೆಯಲಿ

ಜೀವನದ ಪುಟವು

ಎಲ್ಲರೊಳಗೊಂದಾಗಿ ಸಾಗಲಿ

ನಿನ್ನ ಈ ಪಯಣವು

ಸುಖ ಸಂತೋಷದಿಂದ

ಕೂಡಿರಲಿ ನಿನ್ನ ಜೀವನವು.

 

ರಚನೆ: ಶೇಖರ.ಎಂ. ದೇಲಂಪಾಡಿ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ