• 18 ಅಕ್ಟೋಬರ್ 2024

ಸಣ್ಣ ವಯಸ್ಸಿನಲ್ಲಿ ಕಾಣಿಸುವ ಬಿಳಿ ಕೂದಲಿನ ಸಮಸ್ಯೆಗೆ ಕಾರಣಗಳು ಹಾಗೂ ಮನೆಮದ್ದುಗಳು

 ಸಣ್ಣ ವಯಸ್ಸಿನಲ್ಲಿ ಕಾಣಿಸುವ ಬಿಳಿ ಕೂದಲಿನ ಸಮಸ್ಯೆಗೆ ಕಾರಣಗಳು ಹಾಗೂ ಮನೆಮದ್ದುಗಳು
Digiqole Ad

ಸಣ್ಣ ವಯಸ್ಸಿನಲ್ಲಿ ಕಾಣಿಸುವ ಬಿಳಿ ಕೂದಲಿನ ಸಮಸ್ಯೆಗೆ ಕಾರಣಗಳು ಹಾಗೂ ಮನೆಮದ್ದುಗಳು

 

ಬಿಳಿ ಕೂದಲಿನ ಸಮಸ್ಯೆ ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳಲು ಆರಂಭವಾಗುತ್ತದೆ .ಇಂದಿನ ದಿನಗಳಲ್ಲಿ 20ರ ಹಾಗೂ 25ರ ಹರೆಯದ ಮಕ್ಕಳಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ. ಆದರೆ ಎರಡು ವರ್ಷದ ಮಕ್ಕಳಲ್ಲೂ ಈ ಸಮಸ್ಯೆಯು ಕಾಣಿಸಿಕೊಳ್ಳುತ್ತಿದೆ . ಇದಕ್ಕೆ ಸಾಮಾನ್ಯ ಕಾರಣವೆಂದರೆ ಜೀವನಶೈಲಿಯಲ್ಲಿ ಆಗಿರುವಂತಹ ಬದಲಾವಣೆಗಳು ಕೆಲವೊಂದು ಪ್ರಮುಖ ಪೋಷಕಾಂಶಗಳ ಕೊರತೆ ಮತ್ತು ಸಮತೋಲಿತ ಆಹಾರ ಸೇವನೆ ಮಾಡದೆ ಇರುವುದು ಕೂಡ ಇದಕ್ಕೆ ಕಾರಣವಾಗಿದೆ. ಇದರಿಂದಾಗಿ ಮಕ್ಕಳಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವುದು. ತಜ್ಞರ ಪ್ರಕಾರ ಮಕ್ಕಳಲ್ಲಿ ಬಿಳಿ ಕೂದಲಿನ ಸಮಸ್ಯೆಯನ್ನು ಕೆಲವು ಮುನ್ನೆಚ್ಚರಿಕೆ ಮತ್ತು ಮನೆಮದ್ದಿನಿಂದ ನಿವಾರಣೆ ಮಾಡಬಹುದಾಗಿದೆ.

ಮಕ್ಕಳಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವಂತಹ ಸಮಸ್ಯೆಯು ಕಾಣಿಸುತ್ತಿದ್ದರೆ ನೀವು ಇದು ಯಾವುದೇ ರೀತಿಯ ವೈದ್ಯಕೀಯ ಸಮಸ್ಯೆಯಿಂದ ಬಂದಿರುವುದೇ ಎಂದು ಮೊದಲು ತಿಳಿದುಕೊಳ್ಳಬೇಕು. ಅಂತಹ ಸಮಸ್ಯೆಯು ಅಲ್ಲದೆ ಇದ್ದರೆ ಆಗ ನೀವು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಬಿಳಿ ಕೂದಲಿನ ಸಮಸ್ಯೆ ನಿವಾರಣೆ ಮಾಡಬಹುದು.ಕೂದಲು ಬಿಳಿಯಾಗಿರುವಂತಹ ಸಮಸ್ಯೆಯು ತೀವ್ರವಾಗಿದ್ದರೆ ಆಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಯಾವುದೇ ದೊಡ್ಡ ಸಮಸ್ಯೆ ಬರುವ ಮೊದಲು ಅದಕ್ಕೆ ನೀವು ಚಿಕಿತ್ಸೆ ಮಾಡಿಸಿಕೊಳ್ಳುವುದು ಒಳ್ಳೆಯದು.ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಹಜ ಅದು ಕೆಲವರಿಗೆ ತೊಂದರೆಯಾಗುತ್ತದೆ. ಈ ಸಮಸ್ಯೆಯನ್ನು ಮರೆಮಾಚಲು ಅನೇಕರು ಕೂದಲಿಗೆ ಬಣ್ಣ ಹಚ್ಚಿ, ಕೂದಲಿಗೆ ಮತ್ತಷ್ಟು ಹಾನಿ ಮಾಡುತ್ತಾರೆ.

ಮಕ್ಕಳ ತಲೆಗೂದಲು ಗಾಢ ಕಪ್ಪು ಮತ್ತು ಸೊಂಪಾಗಿರಬೇಕು. ಇದು ಆರೋಗ್ಯದ ಲಕ್ಷಣವಾಗಿದೆ. ಆದರೆ ನಡುನಡುವೆ ಅಲ್ಲಲ್ಲಿ ಬಿಳಿ ಕೂದಲುಗಳು ಕಾಣಿಸಿಕೊಂಡರೆ ಇದು ಕಾಳಜಿಯ ವಿಷಯವಾಗಿದ್ದು ಇದಕ್ಕೆ ಕಾರಣಗಳನ್ನು ಅರಿತಿರುವುದು ಪ್ರತಿ ಪೋಷಕರಿಗೆ ಅನಿವಾರ್ಯವಾಗುತ್ತದೆ. ವಯಸ್ಸಾದ ಬಳಿಕ ತಲೆಗೂದಲು ನೆರೆಯುವುದು ಸ್ವಾಭಾವಿಕ. ಆದರೆ ಮಕ್ಕಳ ತಲೆಗೂದಲು ನೆರೆಯಲು ಪ್ರಾರಂಭಿಸಿದರೆ? ಇದಕ್ಕೆ ಕಾರಣವೇನು? ಒಂದೆರಡು ಕೂದಲಿದ್ದರೆ ಪರವಾಗಿಲ್ಲ, ಆದರೆ ಇದರ ಸಂಖ್ಯೆ ಗಣನೀಯವಾಗಿ ಹೆಚ್ಚಿದರೆ? ಈಗ ಪೋಷಕರಿಗೆ ತಲೆಬಿಸಿಯಾಗುವುದು ತಪ್ಪಲಾರದು.ಅಕಾಲಿಕ ಕೂದಲ ನೆರೆಯುವಿಕೆ ಕಂಡುಬಂದಾಕ್ಷಣ ಮಗುವಿನ ಆರೋಗ್ಯದ ದೃಷ್ಟಿಯಿಂದ ಯಾವುದೇ ದುಷ್ಪರಿಣಾಮಗಳನ್ನು ಉಂಟುಮಾಡುವುದಿಲ್ಲ, ಆದರೆ ಕೆಲವು ಕೂದಲುಗಳು ಬಿಳಿಯಾಗುವುದು ಮಕ್ಕಳ ದೇಹದಲ್ಲಿನ ಇತರ ಕೆಲವು ಸಮಸ್ಯೆಗಳನ್ನು ಸೂಚಿಸುತ್ತದೆ. ಮುಖ್ಯವಾಗಿ ಇದು ನಿಮ್ಮ ಮಗುವಿನ ಮೇಲೆ ಮಾನಸಿಕ ಪರಿಣಾಮ ಬೀರುವುದೇ ಪ್ರಮುಖ ಕಾಳಜಿಗೆ ಕಾರಣವಾಗಿದೆ. ಆದ್ದರಿಂದ, ಎದುರಿಸಲು ಉತ್ತಮ ಮಾರ್ಗವೆಂದರೆ ಸಮಸ್ಯೆಯ ಮೂಲವನ್ನು ಅರಿಯುವುದು ಮತ್ತು ಇದನ್ನು ಆದಷ್ಟೂ ಬೇಗನೇ ಮೂಲದಿಂದ ನಿವಾರಿಸುವ ಕ್ರಮಗಳನ್ನು ಕೈಕೊಳ್ಳುವುದು.

 ಬಿಳಿ ಕೂದಲುಗಳು ಬೆಳೆಯಲು ಕಾರಣಗಳು

ವಿಟಮಿನ್ ಬಿ 12 ಪೋಷಕಾಂಶದ ಕೊರತೆ

ಮಕ್ಕಳ ದೇಹದಲ್ಲಿ ವಿಟಮಿನ್ ಬಿ 12 ಎಂಬ ಪೋಷಕಾಂಶ ಕೊರತೆಯೂ ಅಕಾಲಿಕ ಕೂದಲು ನೆರೆಯುವಿಕೆಗೆ ಕಾರಣವಾಗಬಹುದು. ಸಸ್ಯಾಹಾರಿ ಆಹಾರದಲ್ಲಿ ವಿಟಮಿನ್ ಬಿ 12 ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವುದಿಲ್ಲ, ಆದ್ದರಿಂದ ಸಸ್ಯಾಹಾರಿ ಆಹಾರವನ್ನು ಅನುಸರಿಸುವ ಮಕ್ಕಳು ಈ ಸ್ಥಿತಿಯನ್ನು ಪಡೆಯುವ ಸಾಧ್ಯತೆಯನ್ನು ಇತರರಿಗಿಂತಲೂ ಹೆಚ್ಚಾಗಿ ಹೊಂದಿರುತ್ತಾರೆ. ವೈದ್ಯರು ಕೆಲವು ಪರೀಕ್ಷೆಗಳ ಮೂಲಕ ಈ ಕೊರತೆಯನ್ನು ಖಚಿತಪಡಿಸಿ ಹೆಚ್ಚುವರಿ ಪೋಷಕಾಂಶಗಳ ಔಷಧಿಗಳ ಸೇವನೆಗೆ ಸಲಹೆ ಮಾಡುತ್ತಾರೆ.

 

ಜೆನೋಟಾಕ್ಸಿಕ್ ಒತ್ತಡ

ಇದು ಸಾಮಾನ್ಯವಲ್ಲದೇ ಇದ್ದರೂ, ಮಕ್ಕಳಲ್ಲಿಯೂ ಅಕಾಲಿಕ ಕೂದಲು ನೆರೆಯುವಿಕೆಗೆ ಜೆನೋಟಾಕ್ಸಿಕ್ ಒತ್ತಡವೂ ಕಾರಣವಾಗಬಹುದು. ಜೆನೋಟಾಕ್ಸಿಕ್ ಎಂದರೆ ಅನುವಂಶಿಕ ಗುಣಗಳನ್ನು ಬದಲಿಸಿಬಿಡುವ (geno – ಅನುವಂಶಿಕ, toxic ವಿಷಕಾರಿ) ಕೆಲವು ಪ್ರಬಲ ರಾಸಾಯನಿಕಗಳು ಇದಕ್ಕೆ ಕಾರಣವಾಗಿರಬಹುದು. ಬಹುತೇಕವಾಗಿ ಇದು ವಾತಾವರಣವನ್ನು ಅವಲಂಬಿಸಿರುತ್ತದೆ.

 

ಸಾಬೂನು ಮತ್ತು ಶ್ಯಾಂಪೂಗಳನ್ನು ಬಳಸುವುದು

ಕೂದಲಿನ ಉತ್ಪನ್ನಗಳ ಗುಣಮಟ್ಟವು ವರ್ಷಗಳ ಅವಧಿಯಲ್ಲಿ ಕಡಿಮೆಯಾಗುತ್ತಾ ಬಂದಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇಂದು ನಾವು ಬಳಸುವ ಕೂದಲ ರಕ್ಷಣೆಯ ಉತ್ಪನ್ನಗಳು ಅವರು ಹತ್ತು ಹದಿನೈದು ವರ್ಷಗಳ ಹಿಂದೆ ಇದ್ದಂತಿಲ್ಲ. ಇಂದು ಈ ಉತ್ಪನ್ನಗಳನ್ನು ಅತ್ಯಂತ ಆಕರ್ಷಕ ಮತ್ತು ದುಬಾರಿ ಜಾಹೀರಾತುಗಳ ಮೂಲಕ ಗ್ರಾಹಕರು ಕೊಳ್ಳುವಂತೆ ಪ್ರಚೋದಿಸಲಾಗುತ್ತಿದೆ. ಪರಿಣಾಮವಾಗಿ ಇಂದು ಮಕ್ಕಳು ಬಳಸುವ ಸಿಂಥೆಟಿಕ್ ಸಾಬೂನು ಮತ್ತು ಶ್ಯಾಂಪೂಗಳು ಅವರ ಕೂದಲನ್ನು ಒರಟಾಗಿಸಬಹುದು ಮತ್ತು ಕೂದಲನ್ನು ಅಕಾಲಿಕವಾಗಿ ನೆರೆಯುವಂತೆ ಮಾಡಲೂ ಕಾರಣವಾಗಿರಬಹುದು. ಪೋಷಕರಾಗಿ, ನೀವು ಈ ಬಗ್ಗೆ ಮೊದಲಿನಿಂದಲೂ ಕಾಳಜಿ ವಹಿಸಬೇಕು, ಏಕೆಂದರೆ ವಯಸ್ಕರ ಶಾಂಪೂ ಮಗುವಿನ ಕೂದಲನ್ನು ಹೆಚ್ಚು ಒರಟು ಮತ್ತು ಸಿಕ್ಕುಗೊಳಿಸುತ್ತದೆ. ನಿಮ್ಮ ಮಗುವಿಗೆ ನೀವು ಬೇಬಿ ಶಾಂಪೂ ಬಳಸಬೇಕು, ಏಕೆಂದರೆ ಅದರಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಸಾರಗಳಿವೆ. ನಿಮ್ಮ ಮಗುವಿಗೆ ತಲೆ ಸ್ನಾನ ಮಾಡಿಸಲು ನೀವು ಗಿಡಮೂಲಿಕೆಗಳ ಶ್ಯಾಂಪೂಗಳನ್ನು ಸಹ ಆರಿಸಿಕೊಳ್ಳಬಹುದು.

 

ಅನಾರೋಗ್ಯಕರ ಆಹಾರಗಳನ್ನು ಸೇವಿಸುವುದು

ಇಂದು ಎಲ್ಲರೂ ಸಿದ್ಧ ಆಹಾರಗಳಿಗೆ ಮನಸೋತಿದ್ದಾರೆ. ಒಂದು ಕರೆಯ ಮೂಲಕ ರುಚಿಕರ ಆಹಾರ ಮನೆ ಬಾಗಿಲಿಗೆ ಬರುವಂತಾದರೆ ಯಾರಿಗೆ ಬೇಡ! ಇವು ರುಚಿಕರವೇನೋ ಹೌದು, ಆದರೆ ಆರೋಗ್ಯಕರವೇ? ಈ ಪ್ರಶ್ನೆಗೆ ಉತ್ತರ ಹೇಳುವುದು ಸುಲಭವಲ್ಲ. ಏಕೆಂದರೆ ಅಹಾರವೂ ಈಗ ಉದ್ಯಮವಾಗಿರುವ ಕಾರಣ ಲಾಭವೇ ಪ್ರಮುಖ ಅಂಶವಾಗಿದ್ದು ಗ್ರಾಹಕರ ಆರೋಗ್ಯ ನಂತರದ ಸ್ಥಾನ ಪಡೆಯುತ್ತದೆ. ಪರಿಣಾಮವಾಗಿ ಈ ಆಹಾರಗಳು ನೋಡಲಿಕ್ಕೆ ಚೆನ್ನಾಗಿರಬೇಕು, ರುಚಿಯಲ್ಲಿ ಹಿಡಿಸುವಂತಿರಬೇಕು ಎಂಬ ಧೋರಣೆಯನ್ನು ಅನುಸರಿಸುತ್ತಿವೆ. ಆಹಾರಗಳು ಸುಂದರವಾಗಿ ಕಾಣುವಂತಹ ಚಿತ್ರಗಳ ಮೂಲಕ ಜಾಹೀರಾತು ನೀಡಲು ಇದೇ ಕಾರಣ. ಎಷ್ಟೋ ದೇಶಗಳಲ್ಲಿ ನಿಷೇಧಿಸಲ್ಪಟ್ಟಿರುವ ಮೋನೋಸೋಡಿಯಂ ಗ್ಲುಟಮೇಟ್ ಅನ್ನುಇಂದಿಗೂ ಭಾರತದಲ್ಲಿ ಬಳಸಲಾಗುತ್ತಿದೆ. ಇಂತಹ ಅಪಾಯಕಾರಿ ರಾಸಾಯನಿಕಗಳು ಮೆನ್ಕೆಸ್ ಹೇರ್ ಸಿಂಡ್ರೋಮ್ ಮತ್ತು ಕ್ವಾಶಿಯೋರ್ಕೋರ್ ( Menkes hair syndrome and Kwashiorkor -ಪ್ರೋಟೀನ್ ಅಪೌಷ್ಟಿಕತೆ) ಎಂಬ ಕಾಯಿಲೆಗಳ ಮೂಲಕ ಮಕ್ಕಳಲ್ಲಿ ಅಕಾಲಿಕ ಕೂದಲು ನೆರೆಯುವಿಕೆಗೆ ಕಾರಣವಾಗಬಹುದು.

 

 

ಥೈರಾಯ್ಡ್ಥೈರಾಯ್ಡ್ ಸಮಸ್ಯೆಗಳಾದ ಹೈಪರ್ ಥೈರಾಯ್ಡಿಸಮ್ ಅಥವಾ ಹೈಪೋಥೈರಾಯ್ಡಿಸಮ್ ನಿಂದ ಉಂಟಾಗುವ ಹಾರ್ಮೋನ್ ಬದಲಾವಣೆಗಳು ಅಕಾಲಿಕ ಬಿಳಿ ಕೂದಲಿಗೆ ಕಾರಣವಾಗಬಹುದು.ಹೈಪರ್ ಥೈರಾಯ್ಡಿಸಮ್ ಇರುವ ರೋಗಿಗಳ ಕೂದಲಶಾಫ್ಟ್ ಗಳು ಕುಗ್ಗಿರುವ ಟೆನ್ಸಿಲ್ ಸಾಮರ್ಥ್ಯವನ್ನು ತೋರಿಸುತ್ತವೆ.

ಮಕ್ಕಳಲ್ಲಿ ಬಿಳಿ ಕೂದಲು ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳು

ಮಕ್ಕಳಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವಂತಹ ಸಮಸ್ಯೆಯು ಕಾಣಿಸುತ್ತಿದ್ದರೆ ನೀವು ಇದು ಯಾವುದೇ ರೀತಿಯ ವೈದ್ಯಕೀಯ ಸಮಸ್ಯೆಯಿಂದ ಬಂದಿರುವುದೇ ಎಂದು ಮೊದಲು ತಿಳಿದುಕೊಳ್ಳಬೇಕು. ಅಂತಹ ಸಮಸ್ಯೆಯು ಅಲ್ಲದೆ ಇದ್ದರೆ ಆಗ ನೀವು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಬಿಳಿ ಕೂದಲಿನ ಸಮಸ್ಯೆ ನಿವಾರಣೆ ಮಾಡಬಹುದು.

ಕರಿಬೇವಿನ ಎಲೆಗಳು

ಚಿಕ್ಕ ಉರಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಕೆಲವು ಬೇವಿನ ಎಲೆಗಳನ್ನು ಬೇಯಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗತೊಡಗುತ್ತದೆ. ಈ ಎಣ್ಣೆಗೆ ಕೊಂಚ ಮೊಸರನ್ನು ಅಥವಾ ಮಜ್ಜಿಗೆಯನ್ನು ಸೇರಿಸಿಯೂ ಬಳಸಬಹುದು.

ನೆಲ್ಲಿಕಾಯಿ

 

ನೆಲ್ಲಿಕಾಯಿ ತುಂಡುಗಳನ್ನು ತೆಂಗಿನೆಣ್ಣೆಯಲ್ಲಿ ಕುದಿಸಿರಿ ಮತ್ತು ಇದನ್ನು ತಲೆಬುರುಡೆಗೆ ಬಳಸಿಕೊಳ್ಳಿ. ರಾತ್ರಿ ವೇಳೆ ನೆಲ್ಲಿಕಾಯಿ ತುಂಡುಗಳನ್ನು ನೀರಿನಲ್ಲಿ ನೆನೆಸಲು ಹಾಕಿಡಿ ಮತ್ತು ಇದನ್ನು ಬೆಳಗ್ಗೆ ನೀವು ಮಕ್ಕಳ ಕೂದಲು ತೊಳೆಯಲು ಬಳಸಿ

ನೆಲ್ಲಿಕಾಯಿ ಮತ್ತು ಬಾದಾಮಿ ಎಣ್ಣೆ

ನೆಲ್ಲಿಕಾಯಿ ಮತ್ತು ಬಾದಾಮಿ ಎಣ್ಣೆಯ ಮಿಶ್ರಣವನ್ನು ಬಳಸಿಕೊಂಡು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಡಿ ಮತ್ತು ಬೆಳಗ್ಗೆ ಎದ್ದ ಬಳಿಕ ತೊಳೆಯಿರಿ. ಮಕ್ಕಳಲ್ಲಿ ಬಿಳಿ ಕೂದಲಿನ ಸಮಸ್ಯೆಗೆ ಇದು ತುಂಬಾ ಪರಿಣಾಮ ಕಾರಿಯಾಗಿರುವುದು.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆಯಲ್ಲಿ ವಿಟಮಿನ್‍ಗಳು, ಒಮೆಗಾ-3 ಕೊಬ್ಬಿನ ಆಮ್ಲಗಳು ಇರುತ್ತವೆ. ಈ ಅಂಶಗಳು ಕೂದಲಿನ ಬೆಳವಣಿಗೆಗೆ ಸಹಕರಿಸುತ್ತವೆ.ಇವುಗಳು ಕೂದಲನ್ನು ಸದೃಢಗೊಳಿಸುತ್ತವೆ. ಕೂದಲಿನ ಬೆಳವಣಿಗೆಗೆ ನೆರವಾಗುವ ಅತ್ಯುತ್ತಮ ಮನೆಮದ್ದುಗಳಲ್ಲಿ ಇದು ಸಹ ಒಂದಾಗಿದೆ. ಅಲ್ಲದೆ ಕೂದಲಿನ ತುದಿಗಳು ಒಡೆಯಲು ಪ್ರಮುಖ ಕಾರಣ ಅಗತ್ಯ ಪ್ರಮಾಣದ ಎಣ್ಣೆ ಮತ್ತು ಪೋಷಕಾಂಶ ಇಲ್ಲದಿರುವುದಾಗಿದೆ. ನಿಮ್ಮ ಕೂದಲ ತುದಿಗಳನ್ನು ಮೊಟ್ಟೆ ಬೆರೆಸಿದ ಬಿಸಿ ಸಾಸಿವೆ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಇನ್ನು ಬಿಳಿ ಕೂದಲಿನ ಸಮಸ್ಯೆಗೆ ಎರಡರಿಂದ ಮೂರು ಟೇಬಲ್ ಚಮಚದಷ್ಟು ಸಾಸಿವೆ ಎಣ್ಣೆಗೆ ಸ್ವಲ್ಪ ಮದರಂಗಿ ಎಲೆಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಎಲೆಗಳು ಪೂರ್ಣವಾಗಿ ಕರಗುವವರೆಗೆ ಕುದಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಪ್ರತಿದಿನ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ