• 18 ಅಕ್ಟೋಬರ್ 2024

IPL ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಮಿಚೆಲ್ ಸ್ಟಾರ್ಕ್

 IPL ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ  ಮಿಚೆಲ್ ಸ್ಟಾರ್ಕ್
Digiqole Ad

IPL ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಮಿಚೆಲ್ ಸ್ಟಾರ್ಕ್

IPL ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಈ ಹಿಂದಿನ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ. ₹2 ಕೋಟಿ ಮೂಲ ಬೆಲೆಯಿಂದ ಆರಂಭವಾದ ಹರಾಜು ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿತ್ತು. ಕೊನೆಯ ಕ್ಷಣದಲ್ಲಿ ಅವರನ್ನು KKR ₹24.75 ಕೋಟಿ ಗೆ ಖರೀದಿಸಿತು. ಇದು ಐಪಿಎಲ್ ಹರಾಜು ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ. ಗರಿಷ್ಠ ಮೊತ್ತಕ್ಕೆ ದಾಖಲಾದ ಆಟಗಾರರ ಪೈಕಿ ಇದೀಗ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಮಿಚೆಲ್ ಸ್ಟಾರ್ಕ್ 8 ವರ್ಷಗಳ ಬಳಿಕ ಐಪಿಎಲ್ ಟೂರ್ನಿಗೆ ಮರಳಿದ್ದಾರೆ. 2015ರಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಡಿದ್ದ ಮಿಚೆಲ್ ಸ್ಟಾರ್ಕ್ ಬಳಿಕ ಐಪಿಎಲ್ ಟೂರ್ನಿಯಿಂದ ದೂರ ಉಳಿದಿದ್ದರು. ಇದೀಗ 8 ವರ್ಷದ ಬಳಿಕ ಮತ್ತೆ ಐಪಿಎಲ್ ಟೂರ್ನಿಗೆ ಮರಳಿದ್ದಾರೆ .

ಐಪಿಎಲ್‌ ಇತಿಹಾಸದ 10 ದುಬಾರಿ ಆಟಗಾರರು:

1.ಮಿಚೆಲ್ ಸ್ಟಾರ್ಕ್: 24.75 ಕೋಟಿ ರೂಪಾಯಿ

2. ಪ್ಯಾಟ್ ಕಮಿನ್ಸ್‌: 20.5 ಕೋಟಿ – SRH 2024

3. ಸ್ಯಾಮ್ ಕರ್ರನ್: 18.50 ಕೋಟಿ – PBKS- 2023

4. ಕ್ಯಾಮರೋನ್ ಗ್ರೀನ್: 17.50 ಕೋಟಿ MI-2023

5. ಬೆನ್ ಸ್ಟೋಕ್ಸ್‌: 16.25 ಕೋಟಿ – CSK -2023

6. ಕ್ರಿಸ್ ಮೋರಿಸ್: 16.25 ಕೋಟಿ – RR -2021

7. ನಿಕೋಲಸ್ ಪೂರನ್: 16 ಕೋಟಿ – LSG – 2023

8. ಯುವರಾಜ್ ಸಿಂಗ್: 16 ಕೋಟಿ -DD- 2015

9. ಪ್ಯಾಟ್ ಕಮಿನ್ಸ್‌: 15.50 ಕೋಟಿ – KKR-2020

10. ಇಶಾನ್ ಕಿಶನ್: 15.25 ಕೋಟಿ – MI- 2022

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ