• 26 ಜುಲೈ 2024

ಬಾಲಕರ ಕತ್ತು ಸೀಳಿ ರಕ್ತ ಕುಡಿದ ಕಟುಕರು; ಉತ್ತರಪ್ರದೇಶದಲ್ಲಿ ನಡೆಯಿತು ಈ ಅಮಾನುಷ ಘಟನೆ.

 ಬಾಲಕರ ಕತ್ತು ಸೀಳಿ ರಕ್ತ ಕುಡಿದ ಕಟುಕರು; ಉತ್ತರಪ್ರದೇಶದಲ್ಲಿ ನಡೆಯಿತು ಈ ಅಮಾನುಷ ಘಟನೆ.
Digiqole Ad

ಬಾಲಕರ ಕತ್ತು ಸೀಳಿ ರಕ್ತ ಕುಡಿದ ಕಟುಕರು; ಉತ್ತರಪ್ರದೇಶದಲ್ಲಿ ನಡೆಯಿತು ಈ ಅಮಾನುಷ ಘಟನೆ.

ಲಕ್ಕೋ: ಅತ್ಯಂತ ಅಮಾನುಷ ಹಾಗೂ ಆಘಾತಕಾರಿ ಕೃತ್ಯಕ್ಕೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಮೂವರು ಯುವಕರು ಸೇರಿ ಇಬ್ಬರು ಬಾಲಕರ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಸ್ಥಳೀಯರ ಹೇಳಿಕೆ ಪ್ರಕಾರ ಕೊಲೆ ಆರೋಪಿಗಳಲ್ಲಿ ಒಬ್ಬ ಬಾಲಕರ ರಕ್ತ ಕುಡಿದಿದ್ದಾನೆ ಎಂದಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಹುಡುಗಿ ಜೊತೆ ಮಾತನಾಡಿದಕ್ಕೆ ಬಸ್‌ ಚಾಲಕನ ಮೇಲೆ ಹಲ್ಲೆ

ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಈ ಕೃತ್ಯ ನಡೆದಿದೆ. ಮೊಹಮ್ಮದ್ ಸಾಜಿದ್ ಹಾಗೂ ಆತನ ಸಹೋದರ ಮೊಹಮ್ಮದ್ ಜಾವೇದ್, ಮತ್ತು ಇನ್ನೋರ್ವ ಸ್ಥಳೀಯ ಯುವಕ ಸೇರಿ ಕೋಣೆಯೊಂದರಲ್ಲಿ ಮೂವರು ಬಾಲಕರನ್ನು ಕೂಡಿ ಹಾಕಿ ಎಳೆದಾಡಿದ್ದಾರೆ.

ನಂತರ ಬೇಡ್‌ನಿಂದ ಇಬ್ಬರು ಬಾಲಕರ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಈ ವೇಳೆ ಇನ್ನೋರ್ವ ಬಾಲಕ ಈ ಭೀಬತ್ಸ ದೃಶ್ಯ ಕಂಡು ಅಲ್ಲಿಂದ ಹೆದರಿ ತಪ್ಪಿಸಿಕೊಂಡಿದ್ದಾನೆ. ಬಾಲಕರ ಕಿರುಚಾಟ ಕೇಳಿ ಸ್ಥಳೀಯರು ಸೇರಿ ಗಾಯಗೊಂಡಿದ್ದ ಇನ್ನೋರ್ವ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದ್ದಾರೆ. ಇನ್ನು ಆರೋಪಿ ಪೊಲೀಸರ ಮೇಲೆ ಹಲ್ಲೆಗೈದು ತಪ್ಪಿಸಿಕೊಳ್ಳಲು ಯತ್ನಿಸಿದ್ದ, ಇದರಿಂದ ಆರೋಪಿ ಮೊಹಮ್ಮದ್ ಸಾಜಿದ್‌ ಪೊಲೀಸರ ಎನ್ಕೌಂಟರ್ ಗೆ ಬಲಿಯಾಗಿದ್ದಾನೆ.

ಈ ಸುದ್ದಿಯನ್ನು ಓದಿದ್ದೀರಾ.?ಅರುಣಾಚಲ ಪ್ರದೇಶ, ಮಹಾರಾಷ್ಟ್ರದಲ್ಲಿ 2 ಬಾರಿ ಅಲುಗಾಡಿದ ಭೂಮಿ.!

ಬದೌನ್ ನಗರದ ನಿವಾಸಿ ವಿನೋದ್ ಅವರ ಮೂವರು ಮಕ್ಕಳಲ್ಲಿ ಇಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಘಟನೆಯಿಂದ ಎಚ್ಚೆತ್ತ ಪೊಲೀಸರು ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತ್ ನಿಯೋಜಿಸಿದ್ದಾರೆ. ಉದ್ರಿಕ್ತ ಜನ ಆರೋಪಿಗಳಾದ ಸಾಜಿದ್ ಮತ್ತು ಜಾವೇದ್‌ ನಡೆಸುತ್ತಿದ್ದ ಸಲೂನ್‌ ಅಂಗಡಿಯನ್ನು ಧ್ವಂಸಮಾಡಿದ್ದಾರೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ