• 26 ಜುಲೈ 2024

ಲೋಕಸಭಾ ಚುನಾವಣೆ : ಹದಿನೈದು ವರ್ಷಗಳಿಂದ ಕರ್ನಾಟಕದಿಂದ ಒಬ್ಬರೇ ಒಬ್ಬ ಮುಸ್ಲಿಂ ಸಂಸದರು ಆಯ್ಕೆಯಾಗಿಲ್ಲ!

 ಲೋಕಸಭಾ ಚುನಾವಣೆ : ಹದಿನೈದು ವರ್ಷಗಳಿಂದ ಕರ್ನಾಟಕದಿಂದ ಒಬ್ಬರೇ ಒಬ್ಬ ಮುಸ್ಲಿಂ ಸಂಸದರು ಆಯ್ಕೆಯಾಗಿಲ್ಲ!
Digiqole Ad

ಲೋಕಸಭಾ ಚುನಾವಣೆ : ಹದಿನೈದು ವರ್ಷಗಳಿಂದ ಕರ್ನಾಟಕದಿಂದ ಒಬ್ಬರೇ ಒಬ್ಬ ಮುಸ್ಲಿಂ ಸಂಸದರು ಆಯ್ಕೆಯಾಗಿಲ್ಲ!

ಶೇ.12ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕದಲ್ಲಿ ಕಳೆದ 15 ವರ್ಷಗಳಿಂದ ಯಾವುದೇ ಒಬ್ಬ ಮುಸ್ಲಿಂ ಸಂಸದರು ಆಯ್ಕೆಯಾಗಿಲ್ಲ. 2004ರಲ್ಲಿ ಕಲಬುರಗಿಯಿಂದ ಇಕ್ಬಾಲ್‌ ಅಹ್ಮದ್‌ ಸರಡಗಿ ಗೆದ್ದಿದ್ದೆ ಕೊನೆ. ಅದಾದ ಬಳಿಕ ಯಾವ ಮುಸ್ಲಿಂ ಸಂಸದರು ರಾಜ್ಯದಿಂದ ಆಯ್ಕೆಯಾಗಿಲ್ಲ. ಅದಲ್ಲದೇ ಮೂರು ಪಕ್ಷಗಳು ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಟಿಕೆಟ್‌ ಅನ್ನು ನೀಡಿಲ್ಲ.

ಈ ಸುದ್ದಿ ಓದಿದ್ದೀರಾ?: ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆದ ನವದುರ್ಗ ಬಸ್ಸಿನ ನಿರ್ವಾಹಕ

ಈ ವರ್ಷ ಕೂಡ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಇದ್ದು, ಕಾಂಗ್ರೆಸ್‌ನಿಂದ ಬೆಂಗಳೂರು ಸೆಂಟ್ರಲ್‌ನಲ್ಲಿ ಮನ್ಸೂರ್‌ ಅಲಿ ಖಾನ್‌ ಕಣಕ್ಕಿಳಿದಿದ್ದಾರೆ. ಮುಸ್ಲಿಂ ಅಭ್ಯರ್ಥಿಗಳ ಪ್ರಾತಿನಿಧ್ಯ ಕಡಿಮೆ ಇರುವುದಕ್ಕೆ ಮೂರು ಪ್ರಮುಖ ಕಾರಣಗಳಿವೆ ಎಂದು ರಾಜಕೀಯ ತಜ್ಞ ಮುಜಾಫ್ ಫರ್ ಅಸ್ಸಾದಿ ಹೇಳಿದ್ದಾರೆ. ಲೋಕಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಮುಸ್ಲಿಂ ಮತ ಬ್ಯಾಂಕ್‌ಗಳ ಕೊರತೆ, ಮುಸ್ಲಿಂ ಸಮುದಾಯ ಮೀರಿ ನಾಯಕರು ಬೆಳೆಯದಿರುವುದು ಹಾಗೂ ಮತದಾರರ ಧ್ರುವೀಕರಣ ಮುಸ್ಲಿಂ ಪ್ರಾತಿನಿಧ್ಯವನ್ನು ಕಡಿಮೆ ಮಾಡಿದೆ.

ಈ ಸಲ ಕಾಂಗ್ರೆಸ್‌ನಿಂದ ಮುಸ್ಲಿಂ ಮುಖಂಡರು ಒಂದಕ್ಕಿಂತ ಹೆಚ್ಚು ಟಿಕೆಟ್‌ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಕಾಂಗ್ರೆಸ್‌ ಒಂದು ಕ್ಷೇತ್ರದಲ್ಲಿ ಮಾತ್ರ ಟಿಕೆಟ್‌ ನೀಡಿದೆ. ಎನ್‌ಡಿಎದಿಂದ ಯಾವುದೇ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ಅನ್ನು ನೀಡಿಲ್ಲ.

ಈ ಸುದ್ದಿ ಓದಿದ್ದೀರಾ?: ದ್ವೀಪರಾಷ್ಟ್ರದ ಕೂಗಳತೆ ದೂರದಲ್ಲೇ ಭಾರತದ ನೌಕಾನೆಲೆ ಕಾರ್ಯಾರಂಭ.ಚೀನಾಗೇ ತಲೆನೋವು?

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ