• 27 ಜುಲೈ 2024

ವಯನಾಡಿನಲ್ಲಿ ಬಹಿರಂಗವಾಗಿ ಪ್ರತ್ಯಕ್ಷವಾದ ನಕ್ಸಲರ ತಂಡ:ಚುನಾವಣೆ ಬಹಿಷ್ಕಾರಕ್ಕೆ ಸಾರ್ವಜನಿಕರಿಗೆ ಕರೆ.!

 ವಯನಾಡಿನಲ್ಲಿ ಬಹಿರಂಗವಾಗಿ ಪ್ರತ್ಯಕ್ಷವಾದ ನಕ್ಸಲರ ತಂಡ:ಚುನಾವಣೆ ಬಹಿಷ್ಕಾರಕ್ಕೆ ಸಾರ್ವಜನಿಕರಿಗೆ ಕರೆ.!
Digiqole Ad

ವಯನಾಡಿನಲ್ಲಿ ಬಹಿರಂಗವಾಗಿ ಪ್ರತ್ಯಕ್ಷವಾದ ನಕ್ಸಲರ ತಂಡ:ಚುನಾವಣೆ ಬಹಿಷ್ಕಾರಕ್ಕೆ ಸಾರ್ವಜನಿಕರಿಗೆ ಕರೆ.!

ಕೇರಳ ಏ.25: ವಯನಾಡು ಜಿಲ್ಲೆಯ ಕಂಬಮಲೆ ಅರಣ್ಯ ಹಾಗೂ ಮಕ್ಕಿಮಲೆ ಅರಣ್ಯದಲ್ಲಿ ನಕ್ಸಲರಿದ್ದಾರೆ ಅನ್ನೋ ಅನುಮಾನ ಬಲವಾಗಿದ್ದು, ಕೇರಳದ ನಕ್ಸಲ್ ನಿಗ್ರಹ ತಂಡ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ನಕ್ಸಲರ ಸುಳಿವು ಪತ್ತೆಯಾಗದ ಕಾರಣ ಕೂಂಬಿಂಗ್ ಕಾರ್ಯಾಚರಣೆಯನ್ನು ನಂತರದಲ್ಲಿ ಸ್ಥಗಿತಗೊಳಿಸಿದ್ದರು. ಆದರೆ ಲೋಕಸಭಾ ಚುನಾವಣೆ ವೇಳೆ ಮತ್ತೆ ನಕ್ಸಲರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ಈ ಸುದ್ದಿಯನ್ನು ಓದಿದ್ದೀರಾ.?₹100ರೂ ಹಳೆಯ ನೋಟು ಹಿಂಪಡೆಯಲು ಆರ್‌ಬಿಐ ಮಹತ್ವದ ನಿರ್ಧಾರ

ಏ.24ರ ಬೆಳಗ್ಗೆ ಆರು ಗಂಟೆ ಸುಮಾರಿಗೆ ನಾಲ್ವರ ತಂಡ ತಲಪುಳ ಕಂಬಮಲದಲ್ಲಿ ಮಾವೋವಾದಿಗಳು ಆಗಮಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿದರು. ಅವರು ಸುಮಾರು 20 ನಿಮಿಷಗಳ ಕಾಲ ಈ ಪ್ರದೇಶದಲ್ಲಿದ್ದರು ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ. ಅಷ್ಟೇಅಲ್ಲದೆ ಗ್ರಾಮಸ್ಥರ ಜೊತೆ ಮಾತನಾಡಿ, ಸರ್ಕಾರವು ಕಳೆದ ನಲುವತ್ತು ವರ್ಷದಿಂದ ಕಂಬಮಲೆ ಅರಣ್ಯ ತಪ್ಪಲಿನ ಜನರ ಸಮಸ್ಯೆಯನ್ನು ಹಾಗೂ ಇಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರ ಕಷ್ಟ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಹೀಗಾಗಿ ಎಲ್ಲರೂ ಚುನಾವಣೆ ಬಹಿಷ್ಕಾರ ಮಾಡಿ ಎಂದು ಸಾರ್ವಜನಿಕವಾಗಿ ಕರೆ ನೀಡಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಕರ್ನಾಟಕದಲ್ಲಿ ಎರಡು ದಿನ ಸಾರ್ವತ್ರಿಕ ರಜೆ

ಸುಮಾರು 20 ನಿಮಿಷಗಳ ಕಾಲ ಮಾತನಾಡುತ್ತಾ ಘೋಷಣೆಗಳನ್ನು ಕೂಗಿದರು. ಬಂದ ನಾಲ್ಕು ಜನರಲ್ಲಿ ಇಬ್ಬರ ಕೈಯಲ್ಲಿ ಆಯುಧಗಳಿದ್ದವು ಎಂದು ತಿಳಿಸಿದ್ದಾರೆ. ಇನ್ನು ಸ್ಥಳೀಯರು ನೀಡಿದ ಮಾಹಿತಿಯಂತೆ ಈ ತಂಡದಲ್ಲಿ ಕೇರಳ ರಾಜ್ಯಕ್ಕೆ ಬೇಕಾಗಿರುವ ಬಹಳಷ್ಟು ವರ್ಷಗಳಿಂದ ತಲೆ ಮರೆಸಿಕೊಂಡಿರುವ ನಕ್ಸಲರಿದ್ದಾರೆ ಎನ್ನುವಂತಹ ಮಾಹಿತಿಯನ್ನು ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿನ ಕಂಬಮಲೆ ಎಂಬ ಪ್ರದೇಶದಲ್ಲಿ ಟೀ ಎಸ್ಟೇಟ್ ಇದ್ದು, ಇಲ್ಲಿನ ಕೂಲಿ ಕಾರ್ಮಿಕರ ಜೊತೆ ನಕ್ಸಲರು ಮಾತುಕತೆ ನಡಿಸಿದ ವಿಡಿಯೋ ತುಣುಕು ಪೊಲೀಸರಿಗೆ ಲಭ್ಯವಾಗಿದೆ ಎಂದು ಹೇಳಲಾಗಿದೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ