• 18 ಅಕ್ಟೋಬರ್ 2024

ಇಯರ್ ಫೋನ್ ಬಳಸಿದಾಗ ಮೊಬೈಲ್ ಸ್ಫೋಟ. ಯುವತಿಯ ದುರಂತ ಸಾವು.

 ಇಯರ್ ಫೋನ್ ಬಳಸಿದಾಗ ಮೊಬೈಲ್ ಸ್ಫೋಟ. ಯುವತಿಯ ದುರಂತ ಸಾವು.
Digiqole Ad

ಇಯರ್ ಫೋನ್ ಬಳಸಿದಾಗ ಮೊಬೈಲ್ ಸ್ಫೋಟ. ಯುವತಿಯ ದುರಂತ ಸಾವು.

ಕಾನ್ಸುರಾ ಏ.27: ಇಯ‌ರ್ ಫೋನ್ ಹೆಚ್ಚು ಬಳಸುವವರೇ ಹಾಗದರೆ ಎಚ್ಚರ, ಇಯರ್ ಫೋನ್ ಹಾಕಿಕೊಂಡು ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ನೂರದಲ್ಲಿ ಸಂಭವಿಸಿದೆ. ಕಾನ್ಪುರದಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಮಹಿಳೆಯ ಮೊಬೈಲ್ ಇದ್ದಕ್ಕಿದ್ದಂತೆ ಸ್ಫೋಟವಾಗಿದೆ. ಸ್ಫೋಟ ಸಂಭವಿಸಿದ ಕೂಡಲೇ ಮಹಿಳೆ ಸ್ಕೂಟಿಯ ನಿಯಂತ್ರಣವನ್ನು ಕಳೆದುಕೊಂಡರು.

ಈ ಸುದ್ದಿಯನ್ನು ಓದಿದ್ದೀರಾ.?ಎಸ್ಎಸ್ಎಲ್ ಸಿ ಸಮಾಜ ವಿಜ್ಞಾನ ಪರೀಕ್ಷೆ ನಕಲು ಮಾಡುತ್ತಿದ್ದ ವಿದ್ಯಾರ್ಥಿಗಳು ಡಿಬಾರ್

ಸ್ಕೂಟರ್ ರಸ್ತೆಯ ಮಧ್ಯದಲ್ಲಿ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಫರೂಕಾಬಾದ್‌ ಜಿಲ್ಲೆಯ ನಹ್ನೆಯಾ ಗ್ರಾಮದ ನಿವಾಸಿ ಯೋಗೇಂದ್ರ ಅವರ 28 ವರ್ಷದ ಪತ್ನಿ ಪೂಜಾ ಬುಧವಾರ ಬೆಳಿಗ್ಗೆ 10 ಗಂಟೆಗೆ ಸ್ಕೂಟಿಯಲ್ಲಿ ಕಾನ್ಸುರಕ್ಕೆ ತೆರಳುತ್ತಿದ್ದರು. ಅವರು ಕಾನ್ಪುರ ಸೆಂಟ್ರಲ್ ನಿಲ್ದಾಣದಿಂದ ಮುಂಬೈಗೆ ರೈಲು ಹಿಡಿಯಬೇಕಿತ್ತು. ಕಾನ್ಸುರ- ಅಲಿಗಢ ಹೆದ್ದಾರಿಯ ಚೌಬೆಪುರ ಪೊಲೀಸ್ ಠಾಣೆ ಪ್ರದೇಶದ ಮನ್ಸು‌ರ್ ಗ್ರಾಮದ ಬಳಿಯ ಪೆಟ್ರೋಲ್ ಪಂಪ್ ಮುಂದೆ ಮಧ್ಯಾಹ್ನ 2 ಗಂಟೆಗೆ ಅವರ ಮೊಬೈಲ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದೆ. ಸ್ಫೋಟ ಸಂಭವಿಸಿದ ತಕ್ಷಣ, ಅವರ ಹೈಸ್ಪೀಡ್ ಸ್ಕೂಟಿ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ವಿದೇಶದಲ್ಲಿ ಭಾರತದ 527 ವಸ್ತುಗಳಲ್ಲಿ ಕ್ಯಾನ್ಸ‌ರ್ ಕಾರಕ ರಾಸಾಯನಿಕ ಪತ್ತೆ : ಇಯು ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಮೊಬೈಲ್ನಲ್ಲಿ ಉಂಟಾದ ಸ್ಫೋಟದಿಂದಾಗಿ ಅಪಘಾತ ಸಂಭವಿಸಿದ್ದು, ಮಹಿಳೆ ಕಿವಿಯಲ್ಲಿ ಇಯರ್ ಬಡ್ ಗಳನ್ನು ಇಟ್ಟುಕೊಂಡು ಸ್ಕೂಟಿ ಸವಾರಿ ಮಾಡುತ್ತಿದ್ದಳು ಎನ್ನಲಾಗಿದೆ. ಅವಳು ಕೆಳಗೆ ಬಿದ್ದಾಗ, ಅವಳ ಕಿವಿಯಿಂದ ಏರ್ ಬಡ್ ಗಳು ಛಿದ್ರಗೊಂಡವು. ಹೆಲ್ಕೆಟ್ ಇಲ್ಲದ ಕಾರಣ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ