• 18 ಅಕ್ಟೋಬರ್ 2024

“ಪ್ರಾರ್ಥನೆ” ತಾಳ್ಮೆಯ ಬಹುದೊಡ್ಡ ಕೊಡುಗೆ.

 “ಪ್ರಾರ್ಥನೆ” ತಾಳ್ಮೆಯ ಬಹುದೊಡ್ಡ ಕೊಡುಗೆ.
Digiqole Ad

“ಪ್ರಾರ್ಥನೆ” ತಾಳ್ಮೆಯ ಬಹುದೊಡ್ಡ ಕೊಡುಗೆ.

ಚಿಕ್ಕಂದಿನಲ್ಲಿ ಶಾಲೆಗಳಲ್ಲಿ ಹತ್ತು ಗಂಟೆಗೆ ಸರಿಯಾಗಿ ಕೇಳಿಸುತ್ತಿದ್ದದ್ದು.. ನೀಲಿ ಬಿಳಿ ಉಡುಪು ಧರಿಸಿ, ಎರಡು ಜಡೆಯ ಕಟ್ಟಿ, ಕೈ ಮುಗಿದು ”ವಂದೇ ಮಾತರಂ” ಎಂದು ಹಾಡುತ್ತಿದ್ದರು. ನಾವು ಮೌನವಾಗಿ ನಿಂತು ಕೇಳುತ್ತಿದ್ದೆವು. ಆಗ ನಮ್ಮ ಟೀಚರ್ ಹೇಳಿಕೊಟ್ಟರು “ಪ್ರಾರ್ಥನೆ” ಎಂದು. ಆಗ ಇದರ ಮಹತ್ವ ಏನೂ ಅರಿಯದ ನಾವು ಒಂದು ನಿಮಿಷ ಕೇಳುವ ಸಹನೆಯನ್ನು ತೋರಿಸುತ್ತಿದ್ದೆವು. ಈಗ ಪ್ರಾರ್ಥನೆ ಒಂದು ಸಹಜ ಪ್ರಕ್ರಿಯೆಯಾಗಿ ಬದಲಾಗಿದೆ. ಪ್ರಾರ್ಥನೆ ಎಂದರೆ ಸ್ಮರಣೆ. ಪ್ರತಿ ಒಂದು ಸಂದರ್ಭದಲ್ಲೂ ನಾನು ದೇವರನ್ನು ಸ್ಮರಿಸುತ್ತಿರುತ್ತೇನೆ.. ನಮ್ಮ ಬಗ್ಗೆ ನಂಬಿಕೆ ಇಲ್ಲದೆ ಏನೂ ಅಲ್ಲ.. ಯಾಕೋ ನಮಗೆ ಇನ್ನೂ ಹೆಚ್ಚು ಆತ್ಮ ವಿಶ್ವಾಸಕ್ಕಾಗಿ ದೇವರನ್ನು ಜೊತೆಗೆ ಕರೆಯುತ್ತಿರುತ್ತೇವೆ. ಇದು ನಮ್ಮ ಮನಸಿಗೂ ನೆಮ್ಮದಿ ಕೊಡುವುದು ಅಂತೂ ನಿಜ. ಪ್ರಾರ್ಥನೆ ಬಗ್ಗೆ ಹೇಳಿದಾಗ ಈ ಒಂದು ಸಂದರ್ಭ ಯಾವಾಗಲೂ ನೆನಪಿಗೆ ಬರುತ್ತದೆ. ಸಂಜೆ ನಮ್ಮ ಮನೆಯಲ್ಲಿ ದೀಪ ಉರಿಸುವುದು ಪದ್ಧತಿ ಇದೆ. ಅಪ್ಪ ಆಸ್ಪತ್ರೆಯಲ್ಲಿ ಇದ್ದಾಗ ಅಮ್ಮ, ತಮ್ಮ ಇಬ್ಬರೂ ಅಲ್ಲಿ ಉಳಿಯಬೇಕಾಯಿತು. ನಾನು ಕಾಲೇಜು ಬಿಟ್ಟು ಮನೆಗೆ ಹೋಗುವಾಗ ಕತ್ತಲಾಗುತ್ತಿತ್ತು. ಅಣ್ಣನ ಮಗಳು ಅಭಿ ನನಗಾಗಿ ಸ್ನಾನ ಮಾಡಿ ಕಾಯುತ್ತಾ ಇದ್ದಳು. ನಾನು ಬಂದ ಒಡನೆಯೇ ನನ್ನ ಜೊತೆಗೆ ಬಂದು ಬಾಗಿಲು ತೆಗೆದು ದೇವರ ಕೋಣೆಯನ್ನು ಸ್ವತಃ ಅವಳೇ ಗುಡಿಸುತ್ತಿದ್ದಳು. ದೀಪಕ್ಕೆ ಎಣ್ಣೆ ಹೊಯ್ದು ನನ್ನನ್ನು ಕರೆಯುತ್ತಿದ್ದಳು. ಬೆಂಕಿ ಪೊಟ್ಟಣ ಒರೆಸಿ ಹೊತ್ತಿಸಲು ಅವಳಿಗೆ ಹೆದರಿಕೆ. ಹಾಗೆ ನಾನು ಹೊತ್ತಿಸಿ ಕೊಟ್ಟು ಅವಳು ದೀಪ ಹಚ್ಚುವಾಗ, ” ಚಾಮಿ ಕಾಪಾಡು” ಎಂದು ಕೈ ಮುಗಿದಳು. ನಾನು ಅವಳಲ್ಲಿ ಯಾಕೆ ಹೀಗೆ ಹೇಳುವುದು ಎಂದು ಕೇಳಿದೆ. ಆಗ ಅವಳು “ಚಾಮಿಗೆ ಕೈ ಮುಗಿದರೆ ಅಜ್ಜನನ್ನು ಬೇಗ ಉಷಾರು ಮಾಡುತ್ತಾರೆ” ಎಂದಳು.ಮತ್ತೆ ಹೇಳಿದಳು, ” ಅಪ್ಪ ಹೇಳಿದ್ದಾರೆ ನಮಗೆ ಊಟ ಕೊಡುತ್ತಾನೆ, ಬೀಳುವಾಗ ಕಾಪಾಡುತ್ತಾನೆ” ಎಂದು. ಇನ್ನೊಂದು ವಿಷಯ ಮೆಲ್ಲಗೆ ಹೇಳಿದಳು, “ನಾನು ಯಾವತ್ತೂ ದೀಪ ಇಟ್ಟು ಭಕ್ತಿಯಿಂದ ಕೈ ಮುಗಿದರೆ ಚಾಮಿ ನನಗೆ ವಿದ್ಯಾಭ್ಯಾಸ ಕೊಟ್ಟು ಕ್ಲಾಸಲ್ಲಿ ಮೊದಲನೆಯದಾಗಿ ಕಲಿಸುವಂತೆ ಮಾಡುತ್ತಾರಂತೆ” ನನಗೆ ಅವಳ ಮನಸ್ಸಿನ ಮುಗ್ಧತೆ ಕಂಡು ಆಶ್ಚರ್ಯ ಆಯಿತು. ಮಗುವಿನ ಮನಸ್ಸಿನಲ್ಲಿ ಅವಳ ಹೆತ್ತವರು ಮೂಡಿಸಿದ ತಾಳ್ಮೆಯ ಬಹುದೊಡ್ಡ ಕೊಡುಗೆ. ದೇವರಲ್ಲಿ ಪ್ರಾರ್ಥಿಸಿದ ತಕ್ಷಣ ವರ ಕೊಡುತ್ತಾನೆ ಅಂತ ಅಲ್ಲ. ನಮ್ಮ ಮನಸ್ಸಿನ ದೃಢ ನಿರ್ಧಾರವನ್ನು ಶ್ರದ್ದೆ ಹಾಗೂ ನಿಷ್ಠೆ, ತಾಳ್ಮೆಯಿಂದ ಇರಿಸಿ ಮುನ್ನಡೆದರೆ ಅದರ ಪ್ರತಿಫಲ ದೊರೆಯುತ್ತದೆ. ಪ್ರಾರ್ಥನೆ ಜೀವನದ ಅತ್ಯಂತಕ್ರಿಯಾಶೀಲ ಗುಣ. ಬದುಕಲ್ಲಿ ಪ್ರಾರ್ಥನೆ ನಮ್ಮನ್ನು ಗೆಲ್ಲಿಸುವುದೇ ಹೊರತು ಸೋಲಿಸುವುದಿಲ್ಲ. ಒಳ್ಳೆಯಕ್ಕಾಗಿ ಪ್ರಾರ್ಥಿಸೋಣ..

  ✍️ ಆಶಾ.ಬಿ ಪಾಂಡಿ

Digiqole Ad

ಈ ಸುದ್ದಿಗಳನ್ನೂ ಓದಿ