• 19 ಸೆಪ್ಟೆಂಬರ್ 2024

ಕುಮಟಾ: ಅಕ್ರಮ ಸಾಗಾಟ: ನಾಲ್ವರ ಬಂಧನ, 27 ಎಮ್ಮೆಗಳ ರಕ್ಷಣೆ.

 ಕುಮಟಾ: ಅಕ್ರಮ ಸಾಗಾಟ: ನಾಲ್ವರ ಬಂಧನ, 27 ಎಮ್ಮೆಗಳ ರಕ್ಷಣೆ.
Digiqole Ad

ಕುಮಟಾ: ಅಕ್ರಮ ಸಾಗಾಟ: ನಾಲ್ವರ ಬಂಧನ, 27 ಎಮ್ಮೆಗಳ ರಕ್ಷಣೆ.

ಕುಮಟಾ: ಇಂದು ಬೆಳಗ್ಗಿನ ಜಾವ ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 27 ಎಮ್ಮೆಗಳನ್ನು ಕುಮಟಾ ಪೋಲಿಸರು ರಕ್ಷಣೆ ಮಾಡಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಮ್ಮೆಗಳಿಗೆ ಮೇವು, ನೀರು ನೀಡದೆ ಹಿಂಸೆ ನೀಡಿ ಸಾಗಿಸುತ್ತಿದ್ದ ಆರೋಪದಲ್ಲಿ ಮೈಸೂರಿನ ಅಯೂಬ್ ಅಹಮ್ಮದ್ ರಶೀದ್(35),ಕಾಸರಗೋಡಿನವರಾದ ಅಬೂಬಕ್ಕರ್ ಮೊಹಮ್ಮದ್(53), ಅಬ್ದುಲ್ ರೆಹಮಾನ್ (60) ಮತ್ತು ಹಾಸನ ಜಿಲ್ಲೆಯ ಹೊಳೆನರಸೀಪುರದ ಅಜಗರ್ ಹುಸೈನ್ (32) ಎಂಬವರನ್ನು ಕುಮಟಾ ಪೋಲಿಸರು ಬಂಧಿಸಿದ್ದಾರೆ. ಆರೋಪಿಗಳು ಮಹಾರಾಷ್ಟ್ರದ ಕೊಲ್ಹಾಪುರದಿಂದ ಕೇರಳದ ಪಾಲಕ್ಕಾಡ್ ಎಂಬಲ್ಲಿಗೆ ಎಮ್ಮೆಗಳನ್ನು ವಧಿಸುವ ಉದ್ದೇಶಕ್ಕೆ ಸಾಗಿಸುತ್ತಿದ್ದರು. ಶಂಕೆಯ ಮೇಲೆ ವಾಹನ ತಪಾಸಣೆ ನಡೆಸಿದಾಗ ಎಮ್ಮೆಗಳನ್ನು ಇಕ್ಕಟ್ಟಾದ ಜಾಗದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಗಮನಕ್ಕೆ ಬಂತು’ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

 

 

Digiqole Ad

ಈ ಸುದ್ದಿಗಳನ್ನೂ ಓದಿ