• 19 ಸೆಪ್ಟೆಂಬರ್ 2024

ಎನ್‌ಪಿಎಸ್- ವಾತ್ಸಲ್ಯ ಯೋಜನೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಚಾಲನೆ.

 ಎನ್‌ಪಿಎಸ್- ವಾತ್ಸಲ್ಯ ಯೋಜನೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಚಾಲನೆ.
Digiqole Ad

ಎನ್‌ಪಿಎಸ್- ವಾತ್ಸಲ್ಯ ಯೋಜನೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಚಾಲನೆ.

ನವದೆಹಲಿ: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಎನ್‌ಪಿಎಸ್- ವಾತ್ಸಲ್ಯ ಯೋಜನೆಗೆ ನವದೆಹಲಿಯಲ್ಲಿ ನಾಳೆ ಚಾಲನೆ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ‘ಈ ಹೊಸ ಯೋಜನೆಯು ಅಪ್ರಾಪ್ತ ವಯಸ್ಕರಿಗೆ  ಮತ್ತು ಪೋಷಕರ ಕೊಡುಗೆಯಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಅವರು ನಿರ್ದಿಷ್ಟ ವಯಸ್ಸನ್ನು ತಲುಪಿದ ನಂತರ ಯೋಜನೆಯನ್ನು ಅವರ ಇಚ್ಛೆಯಂತೆ ಸಾಮಾನ್ಯ ಎನ್‌ಪಿಎಸ್ ಖಾತೆಯಾಗಿ ಪರಿವರ್ತಿಸಬಹುದು’ ಎಂದು ನಿರ್ಮಲಾ ಸೀತಾರಾಮನ್ ಜುಲೈನಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು. ಎನ್‌ಪಿಎಸ್- ವಾತ್ಸಲ್ಯ ಯೋಜನೆಯು ನಿರ್ದಿಷ್ಟವಾಗಿ ಕಿರಿಯರಿಗೆ ಅನುಗುಣವಾಗಿರುತ್ತದೆ. ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ಖಾತೆಗಳನ್ನು ತೆರೆಯಬಹುದು ಮತ್ತು ಅವರ ನಿವೃತ್ತಿ ಹೊಳಿತಾಯಕ್ಕೆ ಕೊಡುಗೆ ನೀಡಬಹುದು,ಇದು ಆರ್ಥಿಕ ಬಲವನ್ನು ಕೊಡುತ್ತದೆ. ಅಪ್ರಾಪ್ತ ವಯಸ್ಕರಿಗೆ 18 ವರ್ಷ ತುಂಬಿದ ನಂತರ ಪೋಷಕರು ಖಾತೆಯನ್ನು ಸಾಮಾನ್ಯ ಎನ್‌ಪಿಎಸ್ ಖಾತೆಗೆ ಪರಿವರ್ತಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

 

Digiqole Ad

ಈ ಸುದ್ದಿಗಳನ್ನೂ ಓದಿ