• 18 ಅಕ್ಟೋಬರ್ 2024

ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು!

 ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು!
Digiqole Ad

ಸಚಿತಾ ರೈ ವಿರುದ್ಧ ಮತ್ತೊಂದು ದೂರು

ಕಾಸರ ಗೋಡು ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಉದ್ಯೋಗ ಭರವಸೆ ನೀಡಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಬಾಹು ಉಪ್ಪಿನಂಗಡಿಗೂ ವ್ಯಾಪ್ತಿಸಿದ್ದು, ಉದ್ಯೋಗ ಬಯಸಿದ ತನ್ನ ಗೆಳತಿಯಿಂದಲೇ 13,11,600 ರೂ ಪಡೆದು ವಂಚಿಸಿದ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ
ಸಚಿತಾ ರೈ ವಿರುದ್ದ ರಕ್ಷಿತಾ ಎಂಬವರು ಪೊಲೀಸರಿಗೆ ಲಿಖೀತ ದೂರು ನೀಡಿದ್ದು, ಕೇರಳದ ನೀರಾ ವರಿ ಇಲಾಖೆ ಅಥವಾ ಎಸ್‌ಬಿಐ ಬ್ಯಾಂಕಿನಲ್ಲಿ ಉದ್ಯೋಗ ಒದಗಿಸುವ ಅವಕಾಶವಿದೆ ಎಂದು ನಂಬಿಸಿ ಒಟ್ಟು 13,11,600 ರೂಪಾಯಿ ಪಡೆಯಲಾಗಿದೆ ಎಂದೂ, ಸದ್ರಿ ಹಣದ ಪೈಕಿ 8,66,868ನ್ನು ಬ್ಯಾಂಕ್‌ ಖಾತೆ ಮೂಲಕ ವರ್ಗಾಯಿಸಲಾಗಿದ್ದರೆ, ಉಳಿಕೆ ಮೊತ್ತವನ್ನು ಗೂಗಲ್‌ ಪೇ ಮೂಲಕ ಪಾವತಿಸಿರುತ್ತೇನೆಂದು ದೂರಿನಲ್ಲಿ ತಿಳಿಸಿದ್ದಾರೆ.
ತನ್ನ ಕಾಲೇಜು ದಿನಗಳಲ್ಲಿ ಪುತ್ತೂರಿನ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಸಚಿತಾ ರೈ ಪ್ರಸಕ್ತ ವಿವಾಹಿತರಾಗಿ ಕಾಸರಗೋಡಿನ ಬಾಡೂರಿನಲ್ಲಿ ಶಿಕ್ಷಕಿಯಾಗಿದ್ದು, ಅಲ್ಲಿನ ಆಡಳಿತ ಪಕ್ಷದ ಪ್ರಭಾವಿ ವ್ಯಕ್ತಿಯೋರ್ವನನ್ನು ವಿವಾಹಿತಳಾಗಿ ಸರಕಾರಿ ಉದ್ಯೋಗ ಒದಗಿಸಿಕೊಡಲು ತಾನು ಸಮರ್ಥಳೆಂದು ಬಿಂಬಿಸಿ ಹಾಗೂ ನಂಬಿಸಿ ತನಗೆ ಸರಕಾರಿ ಇಲಾಖೆಯಲ್ಲಿ ಉದ್ಯೋಗ ಒದಗಿಸುವ ಭರವಸೆ ನೀಡಿ ಒಂದಷ್ಟು ಖರ್ಚು ತಗಲುತ್ತದೆ ಎಂದು ಮೊದಲನೇ ಕಂತು ಪಡೆದು, ಬಳಿಕ ವಿವಿಧ ನೆಪಗಳನ್ನು ಮುಂದಿರಿಸಿ ಒಟ್ಟು 13 ಲಕ್ಷಕ್ಕೂ ಮಿಕ್ಕಿದ ಹಣವನ್ನು ಪಡೆದಿರುತ್ತಾಳೆಂದು ತಿಳಿಸಿರುತ್ತಾರೆ.
ನಿವೃತ್ತಿ ಜೀವನದ ನೆಮ್ಮದಿ ಕಸಿಯಿತು
ರಕ್ಷಿತಾರ ತಂದೆ ನಿಗಮವೊಂದರ ಉದ್ಯೋಗಿಯಾಗಿದ್ದು , ಇತ್ತೀಚೆಗೆ ನಿವೃತಿಯಾಗಿರುತ್ತಾರೆ. ನಿವೃತ್ತಿ ವೇಳೆ ದೊರಕಿದ ಹಣದಲ್ಲಿ ಮಗಳ ಭವಿಷ್ಯ ಉಜ್ವಲವಾಗಲಿ ಎಂದು ಮೊದಲ ಕಂತು ನೀಡಿದ್ದರು. ಬಳಿಕ ನಂಬಿಕೆ ಮೂಡಿಸುವಂತೆ ಮತ್ತೆ ಮತ್ತೆ ಹಣ ಕೇಳಿದಾಗ , ಮೊದಲು ಕೊಟ್ಟ ಹಣದ ಸುರಕ್ಷೆ ನೆಲೆಯಲ್ಲಿ ಮತ್ತೆ ಮತ್ತೆ ಹಣವನ್ನು ಪಾವತಿಸುತ್ತಾ ಹೋದ ಅವರು ಈಗ ವಂಚನಾ ಜಾಲ ಬಹಿರಂಗಗೊಂಡ ಬಳಿಕ ಆಘಾತಕ್ಕೆ ಒಳಗಾಗಿದ್ದು, ಆರೋಗ್ಯದಲ್ಲಿ ಅಸ್ವಸ್ಥಗೊಂಡಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ