• 17 ಅಕ್ಟೋಬರ್ 2024

ಕಡಬ : ಬಿಳಿನೆಲೆ ವಲಯದ ಕೊಣಾಜೆ ಒಕ್ಕೂಟ ತ್ರೈಮಾಸಿಕ ಸಭೆ..

 ಕಡಬ : ಬಿಳಿನೆಲೆ ವಲಯದ ಕೊಣಾಜೆ ಒಕ್ಕೂಟ ತ್ರೈಮಾಸಿಕ ಸಭೆ..
Digiqole Ad

ಕಡಬ : ಬಿಳಿನೆಲೆ ವಲಯದ ಕೊಣಾಜೆ ಒಕ್ಕೂಟ ತ್ರೈಮಾಸಿಕ ಸಭೆ..

ಸಂಘದಲ್ಲಿ ಹೆಚ್ಚು ಆರ್ಥಿಕ ವ್ಯವಹಾರ ಮಾಡಿ ಹೆಚ್ಚು ಲಾಭಾಂಶ ಪಡೆಯಲು ಸಂಘಕ್ಕೆ ಸಿ ಸಿ ಖಾತೆ ಸಹಕಾರಿ: ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಕೊಣಾಜೆ ಒಕ್ಕೂಟದ ತ್ರೈಮಾಸಿಕ ಸಭೆಯು ದುರ್ಗಾಂಬಿಕಾ ಭಜನಾಮಂದಿರ ದಲ್ಲಿ ನಡೆಯಿತು.
ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ ಬಿಳಿನೆಲೆ ವಲಯದ ಹನ್ನೆರಡು ಒಕ್ಕೂಟಗಳ ಪೈಕಿ ಕೊಣಾಜೆ ಒಕ್ಕೂಟವು ಶಿಸ್ತುಬದ್ದ ಸಭೆಯನ್ನು ನಡೆಸುವುದರ ಪರಿಣಾಮವಾಗಿ ಸಂಘಗಳ ಗುಣಮಟ್ಟದಲ್ಲಿ ಹಾಗೂ ಆರ್ಥಿಕ ವ್ಯವಹಾರದಲ್ಲಿ ಗುಣಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ.
ಪ್ರತೀ ಸಂಘ ಸಣ್ಣ ಬ್ಯಾಂಕ್ ಇದ್ದಂತೆ…ಸಂಘದ ಸದಸ್ಯರ ಅವಶ್ಯಕತೆಗೆ ಹಾಗೂ ಸಂಘದ ವಯಸ್ಸಿಗೆ ಅನುಗುಣವಾಗಿ ಐದರಿಂದ – ಇಪ್ಪತ್ತು ಲಕ್ಷದವರೆಗೆ ಸಾಲದ ವ್ಯವಹಾರ ಮಾಡಲು 13.5% ಕಡಿತ ಬಡ್ಡಿದರದಲ್ಲಿ ರಾಷ್ಟ್ರೀಕೃತ ಬ್ಯಾಂಕ್ (ಎಸ್ ಬಿ ಐ) ಅವಕಾಶ ಕಲ್ಪಿಸಿದೆ. ಸಾಲದ ವ್ಯವಹಾರ ಮಾಡಿದ ಸದಸ್ಯ ಅಥವಾ ವಿನಿಯೋಗದಾರ ಮರಣ ಹೊಂದಿದ್ದಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡಲು ಪ್ರಗತಿ ರಕ್ಷಾ ವಿಮಾ ಸೌಲಭ್ಯವೂ ಸಂಘಕ್ಕಿದೆ.
ಸಂಘದ ಉಳಿತಾಯದೊಂದಿಗೆ ಕುಟುಂಬದ ಭದ್ರತೆಯನ್ನು ಮಾಡಲು ವಿಮಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಮೈಕ್ರೋಬಚಾತ್ ಹಾಗೂ ಭೀಮಾಜ್ಯೋತಿ ವಿಮೆಯನ್ನೂ ಸಂಘದಲ್ಲಿ ಸಾಲ ಪಡೆದು ಮಾಡಿಕೊಳ್ಳಲು ಅವಕಾಶವಿರುತ್ತದೆ.
ಸಂಘದ ಖಾತೆಯು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸಾಲದ ಖಾತೆಯಾಗಿದ್ದು ಸಂಘದ ವಾರದ ಉಳಿತಾಯವೂ ಸಾಲದ ಖಾತೆಯಲ್ಲಿ ಜಮೆಯಾಗುವುದರಿಂದ ಸಾಲಕ್ಕೆ ಸದಸ್ಯರು ಸಂಘಕ್ಕೆ ಕಟ್ಟುವ ಬಡ್ಡಿಯು ಉಳಿತಾಯಕ್ಕೂ ಅನ್ವಯವಾಗಲಿದ್ದು ಅಧಿಕ ಲಾಭವನ್ನು ಸಿ ಸಿ ಖಾತೆಯಿಂದ ಪಡೆಯಲು ಸದಸ್ಯರುಗಳಿಗೆ ಸಾಧ್ಯವಾಗುತ್ತದೆ..ನವಂಬರ್ ತಿಂಗಳಲ್ಲಿ ಕಳೆದ ಮೂರು ವರ್ಷದಿಂದ ಉತ್ತಮ ಆರ್ಥಿಕ ವ್ಯವಹಾರ ಮಾಡಿರುವ ಸಂಘಗಳಿಗೆ ಲಾಭಾಂಶ ವಿತರಣೆ ಮಾಡುವ ಪ್ರಕಿಯೂ ನಡೆಯಲಿದೆ.
ರಾಷ್ಟ್ರೀಕೃತ (ಎಸ್ ಬಿ ಐ) ಬ್ಯಾಂಕ್ ನಲ್ಲಿ ಸಂಘದ ಪ್ರತಿ ಸದಸ್ಯರ ಕಸ್ಟಮರ್ ಐಡಿ ತೆರೆಯುವುದರಿಂದ ಸದಸ್ಯರ ಗುಣಮಟ್ಟದ ವ್ಯವಹಾರಕ್ಕೆ ಸಿಬಿಲ್ ಮೌಲ್ಯ ಹೆಚ್ಚಾಗಿ ವೈಯಕ್ತಿಕ ಸಾಲದ ವ್ಯವಹಾರಕ್ಕೂ ಅನುಕೂಲವಾಗಬೇಕೆನ್ನುವ ಉದ್ದೇಶದಿಂದ ಎಸ್ ಬಿ ಐ ಬ್ಯಾಂಕ್ ನ ಸೀಫ್ ಪಾರಂ ಭರ್ತಿಗೊಳಿಸಿ ಸದಸ್ಯರ ಕಸ್ಟಮರ್ ಐಡಿ ತೆರೆಯುವ ಪ್ರಕಿಯ ನಡೆಯುತ್ತಿರುತ್ತದೆ.
2025ನೇ ಸಾಲಿನಲ್ಲಿ ಧರ್ಮಸ್ಥಳ ಗ್ರಾಮಾಭಿವಧ್ಧಿ ಯೋಜನೆಯ ಬೇರೆ ಬೇರೆ ಜಿಲ್ಲೆಗಳ ಸಂಘದ ಸದಸ್ಯರುಗಳು ಮಾಡಿರುವ ಸಾಧನೆಯ ಯಶೋಗಾಥೆ ಯನ್ನು ಬಿತ್ತರಿಸುವ ನಿರಂತರ ಪ್ರಗತಿ ಮಾಸ ಪತ್ರಿಕೆಯ ಚಂದಾ ನೊಂದಾವಣೆಯೂ ಪ್ರಾರಂಭಗೊಂಡಿದ್ದು ಮನೆಗೊಂದು ಪತ್ರಿಕೆ ಪ್ರತೀ ತಿಂಗಳು ಬರುವಂತೆ ರೂ170 ನೀಡಿ ಚಂದಾದಾರರಾಗಲು ವಿಶೇಷ ಅವಕಾಶದ ಬಗ್ಗೆ ಹಾಗೂ ಸಂಘದ ಸದಸ್ಯರು ತಮ್ಮ ಮಕ್ಕಳ ವೃತ್ತಿ ಪರ ಶಿಕ್ಷಣ ಪಡೆಯುವಲ್ಲಿ ಸುಜ್ಞಾನ ನಿಧಿ ಶಿಷ್ಯ ವೇತನ ಪಡೆಯಲು ಅರ್ಜಿ ಹಾಕುವ ಬಗ್ಗೆಯೂ ಮಾಹಿತಿ ನೀಡಿದರು.
ತ್ರೈಮಾಸಿಕ ಸಭೆಯ ಅಧ್ಯಕ್ಷತೆಯನ್ನು ಡೀಕಯ್ಶ ಗೌಡ ಹಾಕೊಟೆಕಾನ ವಹಿಸಿದ್ದರು.
ವೇದಿಕೆಯಲ್ಲಿ ಸೇವಾಪ್ರತಿನಿಧಿ ಬೇಬಿ, ಫಧಾದಿಕಾರಿಗಳಾದ ಕುಸುಮಾವತಿ ದೊಡ್ಡಮನೆ, ಜಯಪ್ರಸಾದ್ ಕಲ್ಲೂರು ಉಪಸ್ಥಿತರಿದ್ದರು.
ಕೇಶವ ಕಲ್ಲೂರು ಸ್ವಾಗತಿಸಿ ಕುಸುಮಾವತಿ ಎಸ್ ಕೆ ಧನ್ಶವಾದ ನೀಡಿದರು.
ಒಕ್ಕೂಟದ ಕಾರ್ಯದರ್ಶಿ ವೆಂಕಟ್ರಮಣ ಗೌಡ ಅಲ್ನ ಕಾರ್ಯಕ್ರಮ ನಿರೂಪಿಸಿದರು.
ತ್ರೈಮಾಸಿಕ ಸಭೆಯಲ್ಲಿ 216ಸದಸ್ಯರುಗಳು ಪಾಲ್ಗೊಂಡಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ