• 18 ಅಕ್ಟೋಬರ್ 2024

ಆಶ್ರಯ

 ಆಶ್ರಯ
Digiqole Ad

ಆಶ್ರಯ , ಸುಗಂಧಿ.. ಶ್ರೀಮಂತ ವರ್ಗದ ಹೆಂಗಸು.. ಇರುವ ಒಬ್ಬ ಮುದ್ದಿನ ಮಗನಿಗೆ ಬೇಕಾಗಿ ಹಣವನ್ನು ನೀರಿನಂತ್ತೆ ಖರ್ಚು ಮಾಡುವವಳು… ಅವಳ ಉದ್ದೇಶ ತನ್ನ ಮಗ ಯಾರಿಗಿಂತ್ತಲು ಕಡಿಮೆಯಾಗಬಾರದು.. ಯಾರ ಮುಂದೇನು ಕೈ ಚಾಚಿ ನಿಲ್ಲ ಬಾರದು.. ಹತ್ತು ಮಂದಿ ಅವನ ಗುಣ ನೋಡಿ ಮೆಚ್ಚಿಕೊಳ್ಳುವ ತರ ಇರಬೇಕೆಂದು.. ಮಗನನ್ನು ಹೆಚ್ಚು ಹೆಚ್ಚು ಖರ್ಚು ಮಾಡಿ ದೊಡ್ಡ ಹೆಸರು ಪಡೆದ ಶಾಲೆಗಲ್ಲಿ ಓದಿಸುತ್ತಿದ್ದಳು.. ಮಗ ಶಾಲೆ ಕಾಲೇಜು ವಿದ್ಯಾಭ್ಯಾಸ ಮುಗಿಸಿ. ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸಿದಳು.. ಹೀಗೆ ಮನೆಯಲ್ಲಿ ಒಬ್ಬಳೇ ಇರುವ ಕಾರಣ ಅವಳ ಬಾಲ್ಯದ ಗೆಳತಿ ಗಿರಿಜಾಳನ್ನು ಮನೆ ಕೆಲಸಕ್ಕೆ ನೇಮಿಸಿಕೊಂಡಳು.. ಗಿರಿಜಾ ಬಡತನದಿಂದ ಬೆಳೆದವಳು.. ಹಿಂದೆ ಸುಂಗಧಿ ಮತ್ತು ಗಿರೀಜಾ ಒಂದೇ ಶಾಲೆಯಲ್ಲಿ. ಸಹಪಾಠಿಗಳಾಗಿ ಒಟ್ಟಿಗೆ ಕಳಿತವರು.. ಗಿರೀಜಾಳಿಗೆ ಐದನೆ ತರಗತಿಗವರೆಗೆ ಓದಲು ಸಾಧ್ಯವಾಯಿತು..ಅವಳ ಮನೆಯಲ್ಲಿ ಬಡತನ ಇದ್ದ ಕಾರಣ ಮನೆಯವರು ಅವಳ ಓದನ್ನು ಅರ್ಧಕ್ಕೆ ನಿಲ್ಲಿಸಿದರು.. ಶಾಲೆ ಬಿಟ್ಟ ಗಿರೀಜಾ ತನ್ನ ತಾಯಿಯ ಜೋತೆ. ಊರ ಮನೆ ಮನೆಯ ಕಸ ಮುಸುರೆ ತೋಳೆಯುವ ಕೆಲಸಕ್ಕೆ ಹೋಗುತಿದ್ದಳು… ಸುಗಂಧಿಯ ಮನೆಯಲ್ಲೂ ತಾಯಿಯೊಡನೆ ಸೇರಿ ಕೆಲಸ ಮಾಡುತಿದ್ದಳು…. ಸುಗಂಧಿ ಗಿರೀಜಾಳನ್ನು ಎಷ್ಟೋ ಸಲ ಗೇಲಿ ಮಾಡಿದ್ದು ಉಂಟು.. ನಿನ್ನ ಜೀವನ ಈ ಕಸ ಮುಸರೆಯಲ್ಲೇ ಆಗೋಯ್ತಲ್ಲೆ ಗಿರೀಜಾ.. ಅವಮಾನವಾದರು ನುಂಗಿ ಕೊಂಡು.. ವಿಧ್ಯೆ ನಮ್ಮಂತ ಬಡವರ ಹಣೆಯಲ್ಲಿ ಇಷ್ಟೇ ಬರೆದಿರಬೇಕು.. ಅದಕ್ಕಿಂತ ಹೆಚ್ಚು ಆಸೆ ಪಡುವವಳು ನಾನಾಲ್ಲ.. ಎಂದು ಗಿರೀಜಾ ಸುಗಂಧಿಗೆ ಉತ್ತರ ಕೊಡುತ್ತಿದ್ದಳು… ಹೀಗೆ ದಿನ ಕಳೆದು ವರ್ಷಗಳಾಗಿ ಇಬ್ಬರಿಗೂ ಮದುವೆಯಾಗಿ. ಅದೇ ಊರಿನಲ್ಲಿ ಇದ್ದರು…

ಗಿರೀಜಳಿಗು ಒಬ್ಬನೆ ಮಗ.. ಅವಳಿಗೂ ನನ್ನಂತ್ತೆಯೆ ಮಗ ಆಗಬಾರದು. ಒಳ್ಳೆ ವಿಧ್ಯಾಭ್ಯಾಸ ಪಡೆದು ಒಳ್ಳೆಯ ಕೆಲಕ್ಕೆ ಸೇರಬೇಕೆಂದು ಆಸೆ… ಆದರೆ ಅವಳ ಆಸೆಗೆ ತಣ್ಣೀರು ಎರಚಿತು. ಪತಿಯ ಅಕಾಲಿಕ ಮರಣ.. ಆಸರೆಯಾಗಿದ್ದ ಪತಿಯನ್ನು ಕಳೆದು ಕೊಂಡ ಗಿರೀಜಾ ಮಗನ ಕಲಿಕೆಯನ್ನು ಎಂಟನೇ ಕ್ಲಾಸಿಗೆ ನಿಲ್ಲಿಸುವಂತ್ತಾಯಿತು… ನಂತ್ತರ ಮಗನು ತಾಯಿಗೆ ಸಹಾಯವಾಗಲು ಹೋಟೆಲಿನಲ್ಲಿ ಕೆಲಸಕ್ಕೆ ಸೇರಿದ..

ಸುಗಂಧಿಯ ಮನೆಯಲ್ಲಿ ಕೆಲಸವಾಡುವಾಗ ಗಿರೀಜಳ ಮುಂದೆ ತನ್ನ ಮಗನ ಬಗ್ಗೆ ವಿಪರಿತ ಗುಣಗಾನ ಮಾಡುತ್ತಿದ್ದಳು ಸುಗಂಧಿ.. ನನ್ನ ಮಗನನ್ನು ಈಗ ದೊಡ್ಡ ಕಂಪೆನಿಯವರೆ ಅವನ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಿ ಕಲಿಸುತ್ತಿದ್ದಾರೆ.. ಮುಂದಿನ ವರ್ಷ ಅವರ ಕಂಪೆಯಲ್ಲೇ ಕೆಲಸವನ್ನೂ ಕೊಡಿಸ್ತಾರಂತ್ತೆ… ನೋಡು ನಾನು ಕಲಿಸಿದ್ದಕ್ಕೆ ಸಾರ್ಥಕವಾಯಿತು.. ನಿನ್ನ ಮಗ ಏನು ಮಾಡ್ತಿದ್ದಾನೆ ಈಗ ಎಂದಾಗ..

ನನ್ನ ಮಗ ಈಗ ನಾಲ್ಕು ಜನರನ್ನು ಸೇರಿಸಿ ಕೊಂಡು ಕೂಲಿ ಕೆಲಸಕ್ಕೆ ಹೋಗ್ತಿದ್ದಾನೆ.. ಅಂದಳು ಗಿರೀಜ..

ಅಯ್ಯೋ ಅಷ್ಟೇನಾ.. ನೋಡು ನನ್ನ ಮಗನ ಕೈ ಕೆಳಗೆ ಸಾವಿರ ಜನರನ್ನು ದುಡಿಸುವ ಸಾಮಾರ್ಥ್ಯ ಹೊಂದಿದ್ದಾನೆ… ಅಂತೂ ಇಂತೂ ಸುಂಗಧಿಯ ಮಗನಿಗೆ ಅಮೇರಿಕಾದಲ್ಲಿ ದೊಡ್ಡದಾದ ಉದ್ಯೋಗ ಸಿಕ್ಕಿತು.. ಅವನ ಲೆವೆಲ್ಲಿಗೆ ತಕ್ಕನಾದ ಒಂದು ಶ್ರೀಮಂತರ ಹುಡುಗಿಯನ್ನು ನೋಡಿ ಮದುವೆಯನ್ನು ಮಾಡಿಸಿದಳು ಸುಗಂಧಿ.. ಸೊಸೆಗು ಅಮೇರಿಕದಲ್ಲೇ ಕೆಲಸ ಫಿಕ್ಸ್ ಆಯಿತು. .. ಮಗ ಸೊಸೆ ಅಮೇರಿಕದಲ್ಲಿ.. ಸುಗಂಧಿಗೆ ತಾನು ಹಿಡಿದ ಸಾಧನೆಯನ್ನು ಸಾಧಿಸಿ ಬಿಟ್ಟೆ ಎಂದು ಏನೋ ಕುಶಿ.. ಹೀಗೆ ಇರಬೇಕಾದರೆ ಅಮೇರಿಕದಲ್ಲಿ ಮಗ ಏನೋ ಹಣದ ವ್ಯವಹಾರದಲ್ಲಿ ಕಿತಾಪತಿ ಮಾಡಿ ಸಿಕ್ಕಿಬಿದ್ದ.. ತನ್ನ ಮಗನನ್ನು ಬಚಾವು ಮಾಡಲು ತನ್ನಲ್ಲಿ ಇದ್ದ ಆಸ್ತಿ ಪಾಸ್ತಿ ಒಡವೆ ಎಲ್ಲವನ್ನೂ ಮಾರಿ ಮಗನಿಗೆ ಹಣ ಕಳುಹಿಸಿ ಸಹಾಯ ಮಾಡಿದಳು.. ಕಡೇಗೆ ತಾನಿದ್ದ ಮನೆಯೊಂದು ಮಾತ್ರ ಸುಗಂಧಿಯಲ್ಲಿ ಉಳಿಯಿತು.. ಮಗನಿದ್ದ ಕಂಪೆನಿಯಿಂದ ಕೆಲಸದಿಂದ ತೆಗೆದು ಹಾಕಿದರಿಂದ ಮಗ ಕೆಲಸವಿಲ್ಲದೆ. ಹೆಂಡತಿಯ ದುಡಿಮೆಯಲ್ಲೇ ಕಳೆಯಬೇಕಾಯಿತು.. ಕಡೇಗೆ ಹೆಂಡತಿಯೊಡನೆ ಹೇಳಿದ.. ಎಂತ್ತೂ ಅಮ್ಮ ಒಬ್ರೆ ಊರಲ್ಲಿ ಇದ್ದಾರೆ..ಅವರಿಗೆ ಈಗ ವಯಸ್ಸೂ ಆಗ್ತಾ ಬಂತು.. ಊರಿನ ಮನೆ ಮಾರಿ ಬಿಟ್ಟು ತಾಯಿಯನ್ನು ಇಲ್ಲಿಗೆ ಕರ್ಕೊಂಡು ಬಂದ್ರೆ ಹೇಗೆ ..ಎಂದು ಕೇಳಿದಾಗ ಹೆಂಡತಿಯ ಮುಖ ಕೆಂಪಾಯಿತು.. ನೀವೆ ಕೆಲಸವಿಲ್ಲದೆ ಇಲ್ಲಿ ಬಿದ್ದುಕೊಂಡಿರೋದು.. ಇನ್ನೂ ನಿಮ್ಮ ತಾಯಿಯನ್ನು ಕರೆತಂದ್ರೆ ಅಷ್ಟೇ.. ನಾನಿಲ್ಲಿರೊಲ್ಲ..ಎಂದು ಕಟುವಾಗಿ ಹೇಳಿಬಿಟ್ಟಳು..

ಮಗ..ಅಲ್ಲಾ ಇವ್ಳೆ.. ಅಲ್ಲಿ ತಾಯಿಯನ್ನು ಯಾರು ಕೊಳ್ತಾರೆ ನಾವದ್ರೆ ಇಲ್ಲಿ ಇದ್ದೇವಲ್ಲ.. ಅಷ್ಟು ದೊಡ್ಡ ಮನೆಯಲ್ಲಿ ಅವರೊಬ್ಬರೆ ಹೇಗೆ ಇರ್ತಾರೊ ಏನೋ.. ಅಂದಾಗ ನಿಮಗೆ ಅಷ್ಟೂ ನಿಮ್ಮ ತಾಯಿಯಲ್ಲಿ ಮುತುವರ್ಜಿ ಇದ್ದರೆ ಅವರನ್ನು ಅಲ್ಲಿರುವ ಆಶ್ರಮಕ್ಕೆ ಸೇರಿಸಿ. ಅಲ್ಲಿ ನಿಮ್ಮ ತಾಯಿಯಂತ್ತವರೇ ಜಾಸ್ತಿ ಇದ್ದಾರೆ.. ತಿಂಗಳು ತಿಂಗಳು ಹಣ ಆಶ್ರಮಕ್ಕೆ ಕೊಟ್ರೆ ನಮಗಿಂತ ಜಾಸ್ತಿ ಕಾಳಾಜಿ ವಹಿಸಿ ನೋಡಿ ಕೊಳ್ತಾರೆ. ಎಂದು ಅಂದ್ಲು.. ತಾಯಿಯನ್ನು ಆಶ್ರಮಕ್ಕೆ ಯಾಕೆ ಸೇರಿಸೋದು.. ನಾವೇ ನಮ್ಮ ಮನೆಯಲ್ಲಿ ಇರೋಣ ಆಗದ ಎಂದಾಗ.. ನೀವು ಬೇಕಾದರೆ ಹೋಗಿ ಇರಿ.. ನಾನಂತೂ ಬರಲ್ಲ ..ಬರಲ್ಲ ಎಂದಾಗ ದಿಕ್ಕು ತೋಚದ ಮಗ..ಏನಾದರು ಒಂದು ಪರಿಹಾರ ಹುಡುಕಲು ಊರಿಗೆ ಹೊರಟ…

ಹಲವು ವರ್ಷಗಳ ನಂತರ ಬಂದ ಮಗನನ್ನು ನೋಡಿ ಸುಂಗಧಿಗೆ ಎಲ್ಲಿಲ್ಲದ ಸಂತೋಷ… ಸೊಸೆಯನ್ನು ಬಿಟ್ಟು ಬಂದಿದ್ದಕ್ಕೆ ಬೈದಳು.. ಮಗ ಅಲ್ಲಿಯ ವಿಷಯವನೆಲ್ಲ ಹೇಳಿದ .. ಹೆಂಡತಿ ನನ್ನನು ಕೆಲವಿಲ್ಲದವ ಎಂದು ಹಂಗಿಸುವುದನ್ನು ಹೇಳಿದ… ಮಗನನ್ನು ಯಾರು ಹಂಗಿಸಬಾರದು ಯಾರ ಮುಂದೆಯೂ ಕೈ ಚಾಚ ಬಾರದು ಎಂದು ಇಷ್ಟೆಲ ಮಾಡಿ ಕೊನೆಗೆ ಈ ಪರಿಸ್ಥಿತಿ ಅದೂ ಅವನ ಹೆಂಡತಿಯಿಂದ ಎಂದು ತಿಳಿದು ತುಂಬಾನೇ ಸಂಕಟ ಪಟ್ಟಳು.. ಇಲ್ಲಾ ನನ್ನ ಮಗ ಹೀಗಾಗಬಾರದು ಎಂದು ಏನಾದಾರು ಮಾಡಿ ಮಗನನ್ನು ಸರಿಸಮಾನವಾಗಿ ನಿಲ್ಲಿಸಬೇಕೆಂದು ತೀರ್ಮಾಸಿ.. ಮನೆಯನ್ನು ಅಡವು ಇಡುವ ಅಂದಾಜಿಗೆ ಬಂದಳು.. ಈ ಯೋಜನೆಯನ್ನು ಮಗನಲ್ಲಿ ಹೇಳಿದಾಗ. ಒಪ್ಪಿಗೆ ಇಲ್ಲದವನಂತ್ತೆ ನಟಿಸಿದನು..ಹಾಗೂ ಹೀಗೂ ಮಾಡಿ ಹಣ ಹೊಂದಿಸಿ ಪುನಃ ಮಗನನ್ನು ಅಮೇರಿಕಾಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದಳು ಸುಗಂಧಿ… ಮಗ ಅಡವಿಟ್ಟ ಮನೆಯನ್ನು ಬಿಡಿಸಿ ಕೊಡುವನೆಂಬ ನಂಬಿಕೆ ಅವಳಲ್ಲಿತ್ತು.. ಅದಕ್ಕೆ ತದ್ವಿರುದ್ಧವಾಗಿ ಮಗ ನಡೆದು ಬಿಟ್ಟ…! ಭ್ಯಾಂಕಿನ ಸಾಲ ಕಟ್ಟಲಾಗದೆ ಭ್ಯಾಂಕಿನವರು ಮನೆಯನ್ನು ಜಪ್ತಿ ಮಾಡಿದರು.. ಮಗ ಅಮೇರಿಕದಿಂದ ವೀಡಿಯೋ ಕಾಲ್ ಮಾಡಿ ಅಮ್ಮನಿಗೆ ಹೇಳಿದ.. ಅಮ್ಮಾ. ಸ್ವಾರಿ.. ಇನ್ನೂ ಸಧ್ಯಕ್ಕೆ ಊರಿಗೆ ಬರಲು ಆಗುವುದಿಲ್ಲ.. ಅಲ್ಲಿ ನನ್ನ ಗೆಳೆಯನಿದ್ದಾನೆ.. ಅವನಲ್ಲಿ ಎಲ್ಲಾ ವಿಷಯ ಹೇಳಿದ್ದೇನೆ.. ಅವನು ನಿಮಗೆ ಇರಲು ವ್ಯವಸ್ಥೆ ಮಾಡುತ್ತಾನೆ.. ಈಗ ನಿಮ್ಮನ್ನು ಅವನಲ್ಲಿಗೆ ಕರ್ಕೊಂಡು ಹೋಗಲು ಕಾರಲ್ಲಿ ಬರ್ತಾನೆ.. ನೀವು ರಡಿ ಆಗಿರಿ.. ಎರಡು ವರ್ಷ ಕಳೆದು ನಿಮ್ಮನು ನೋಡಲು ಖಂಡಿತ ಬರ್ತೇನೆಯಮ್ಮ.. ಮತ್ತೆ ನಿಮ್ಮನು ಇಲ್ಲಿಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಕಾಲ್ ಕಟ್ ಮಾಡಿದ.. ಈಗ ಸ್ವಲ್ಪ ಕಷ್ಟವಾದರೇನು.. ನನ್ನನು ಮಗ ಅಮೇರಿಕಕ್ಕೆ ಕರೆದು ಕೊಂಡು ಹೋಗ್ತಾನಲ್ಲ ಅಷ್ಟೇ ಸಾಕು ನನಗೆ ಎನ್ನುತ ತನ್ನ ಲಗೇಜ್ ರಡಿ ಮಾಡತೊಡಗಿದಳು ಸುಗಂಧಿ… ಗೇಟಿನ ಹತ್ತಿರ ಕಾರಿನ ಹಾರ್ನ್ ಕೇಳಿಸಿತು.. ಸುಗಂಧಿ ತನ್ನ. ಎಲ್ಲಾ ಲಗೇಜ್ ರಡಿ ಮಾಡಿ ಹೋಗಿ ಗೇಟು ತೆಗೆದಳು.. ಮನೆಯಲ್ಲಿ ಇದ್ದದನೆಲ್ಲ ಸಾಲಕ್ಕಾಗಿ ಮಾರಿ ಆಗಿತ್ತು.. ಈಗ ಉಳಿದಿರುವುದು ಬರೇ ಬಟ್ಟೆ ಬರೆಗಳು ಮಾತ್ರ.. ಕಾರಿನಿಂದ ಇಳಿದವನೊಬ್ಬ. ಸುಗಂಧಿ ರಡಿ ಮಾಡಿಟ್ಟ ಬ್ಯಾಗುನೆಲ್ಲ ಕಾರಿನ ಡಿಕ್ಕಿಯಲ್ಲಿ ಹಾಕಿ .. ಕಾರು ಸ್ಟಾರ್ಟ್ ಮಾಡಿದ.. ಸುಂಗಧಿ ಕಾರಿನಲ್ಲಿ ಹೋಗಿ ಕುಳಿತು ಕಿಟಕಿಯಿಂದ ತನ್ನ ಮನೆಯನ್ನು ನೋಡಿ.. ದುಃಖ ತಡೆಯಲಾರದೆ ಅತ್ತು ಬಿಟ್ಟಳು.. ಡ್ರೈವರ್ ಅವಳನ್ನು ಸಮಾಧಾನಿಸಿ ಕಾರು ಗೇಟು ದಾಟಿ ಮುಂದಕ್ಕೆ ಚಲಿಸಿತು.. ಕಾರಿನಲ್ಲಿ ಅತ್ತು ಅತ್ತು ಸುಸ್ತಾದ ಸುಗಂಧಿಗೆ ಕಾರು ಯಾವುದೊ ಒಂದು ಕಟ್ಟದ ಎದುರು ನಿಂತ್ತಾಗಲೆ ವಾಸ್ತವಕ್ಕೆ ಬಂದಳು.. ಮೇಡಂ ಇಳಿಯಿರಿ ಎಂದು ಯಾರೋ ಬಂದು ಕಾರಿನ ಬಾಗಿಲು ತೆಗೆದಾಗ ಇಳಿದು ಎದುರಿಗಿರುವ ಕಟ್ಟಡದ ಬೋರ್ಡು ನೋಡಿ ಆಶ್ಚರ್ಯವಾಯಿತು… ಅದು ವೃದ್ದರ ಅನಾಥಾಶ್ರಮ…

ಅಲ್ಲೇ ತನ್ನ ಅವಸ್ಥೆಯನ್ನು ನೆನೆದು ಪ್ರಜ್ಞೆ ತಪ್ಪಿ ಕುಸಿದು ಬಿದ್ದಳು.. ಬೀಳುವಾಗ ಅಲ್ಲಿದ್ದವರು ಅವಳನ್ನು ಹಿಡಿದು ಕೊಂಡರು .. ಅಲ್ಲೇ ಅಂಗಡಿಗೆ ತರಕಾರಿಗೆಂದು ಬಂದಿದ್ದ ಗಿರೀಜಳ ಕಣ್ಣಿಗೆ ಸುಂಗಧಿ ಬೀಳುವುದು ಕಂಡಿತು.. ಯಾರಿರ ಬಹುದು ಎಂದು ನೋಡಲು ಬಂದರೆ.. ಅವಳಿಗೆ ನಂಬಲು ಸಾಧ್ಯವಿಲ್ಲ.. ಅವಳಿಗೆ ಕೆಲಸ ಕೊಟ್ಟವಳು ಅನ್ನ ಕೊಟ್ಟವಳು ಇಂದು ಆಶ್ರಮದೆದುರು..ಛೇ.. ಎಂತ್ತ ಅವಸ್ಥೆ ಇದು .. ಕೂಡಲೇ ತನ್ನ ಮಗನನ್ನು ಕರೆದಳು ಮಗ ತನ್ನ ಕೆಲಸವನ್ನು ನಿಲ್ಲಿಸಿ ಅಮ್ಮ ಕರೆದಲ್ಲಿಗೆ ಬಂದ.. ಕೊನೆಗೆ ಗಿರಿಜಳು ಅವಳ ಮಗನು ಆಶ್ರಮದರವ ಹತ್ತಿರ ಮಾತಾಡಿ . ಇವರು ನಮ್ಮ ಆಪ್ತರು ಎಂದು ಹೇಳಿ . ಅದೇ ಕಾರಿನಲ್ಲಿ ಆಸ್ಪತ್ರೆಗೆ ಸುಗಂಧಿಯನ್ನು ಸೇರಿಸಿದರು.. ಸಂಜೆಯ ಹೊತ್ತಿಗೆ ಸುಗಂಧಿಗೆ ಪ್ರಜ್ಞೆ ಬರತೊಡಗಿತು.. ನಿಧಾನವಾಗಿ ಕಣ್ಣು ತೆರೆದು ನೋಡಿದಳು.. ತಾನು ಯಾವುದೋ ಆಸ್ಪತ್ರೆಯಲ್ಲಿ ಇದ್ದೇನೆ ಎಂದು ತಿಳಿಯಿತು.. ಮಲಗಿದ್ದಲ್ಲಿಂದ ಎದ್ದು ಕುಳಿತು ಕೊಳ್ಳಲು ನೋಡಿದಾಗ ಯಾರೋ. ತನ್ನನ್ನು ಹಿಡಿದು ಕೊಂಡು.. ಅಮ್ಮಾ.. ನಿಧಾನ.. ಎಂದು ಹೇಳಿ ಹಿಂದಿನಿಂದ ಆಸರೆಯಾದರು.. ತನ್ನನ್ನು ಹಿಡಿದು ಕೂರಿಸಿ ಅಮ್ಮಾ .. ಎಂದು ಕರೆದ ಧ್ವನಿಯತ್ತ ತಿರುಗಿ ನೋಡಿದಳು.. ಅಲ್ಲಿ ನಗುತ್ತಾ ಗಿರಿಜಳ ಮಗ ನಿಂತಿದ್ದ.. ಆಗ ಗಿರಿಜಳೂ ಅಲ್ಲಿಗೆ ಬಂದಳು.. ಸುಗಂಧಿ ಏನೂ ಹೇಳಲಾಗದೆ ಅತ್ತು ಬಿಟ್ಟಳು..ಗಿರೀಜ ಅವಳನ್ನು ಸಮಾಧಾನಿಸಿ. ವಿಷಯವನ್ನು ಹೇಳಿದಳು.. ಗಿರೀಜಳ ಮಗ ಹೇಳಿದ .. ಅಮ್ಮಾ.. ನೀವು ನಿಮ್ಮ ಮಗನಿಗೆ ಮಾತ್ರ ಅಮ್ಮನಲ್ಲ ನನಗೂ ಅಮ್ಮನೇ.. ನನ್ನ ಅಮ್ಮನಿಗೆ ನಿಮ್ಮ ಮನೆಯಲ್ಲಿ ಎಷ್ಟೋ ವರ್ಷಗಳ ಕಾಲ ಕೆಲಸ ಕೊಟ್ಟಿದ್ದೀರಿ.. ನಿಮ್ಮಲ್ಲಿ ದುಡಿದ ಹಣದಿಂದ ನನ್ನನು ಸಾಕಲು ನನ್ನ ಅಮ್ಮನಿಗೆ ಸಾಧ್ಯವಾಯಿತು..

ಆದರಿಂದ ಇನ್ನು ಮುಂದೆ ನನಗೆ ಇಬ್ಬರು ಅಮ್ಮಂದಿರು.. ನಿಮ್ಮನ್ನು ಯಾವುದೇ ಕಾರಣಕ್ಕೂ ಆಶ್ರಮದಲ್ಲಿ ಇರಲು ಬಿಡುವುದಿಲ್ಲ.. ನೀವು ಒಪ್ಪಿದರೆ ನನ್ನ ಮನೆಯನ್ನು ನಿಮ್ಮ ಮನೆಯೆಂದೇ ತಿಳಿದು ಕೊಳ್ಳಿ.. ದಯವಿಟ್ಟು ನೀವು ನಮ್ಮ ಮನೆಗೆ ಬರಬೇಕಮ್ಮ ಎಂದಾಗ.. ಏನು ಹೇಳಲಾಗದೆ ಗಿರೀಜಳ ಮುಖ ನೋಡಿದಳು.. ಅಂದು ನಾನು ಏನೆಲ್ಲ ಹಂಗಿಸಿದರು ಅದನ್ನು ಯಾವುದನ್ನು ಮನಸ್ಸಿನಲ್ಲಿರಿಸದೆ ಮುಗುಳ್ನಗುತ್ತ ನಿಂತ್ತಿದ ಗಿರೀಜಳ ಮುಂದೆ ತಾನು ಅವಳಿಗಿಂತಳೂ ಚಿಕ್ಕವಳಾದೆ ಎಂದೆನಿಸಿತು.. ಆಸ್ಪತ್ರೆಯಿಂದ ಗಿರೀಜಳ ಮನೆಗೆ ರಿಕ್ಷಾದಲ್ಲಿ ಬರುವಾಗ ಸುಗಂಧಿಗೆ ಒಂದು ಮಾತ್ರ ಸತ್ಯ ಅರಿಯಿತು.. ಬುದ್ಧಿ ಸರಿಲ್ಲದಿದ್ದರೆ‌ ಎಷ್ಟು ವಿಧ್ಯೆ ಕಲಿತರೂ ಕಲಿಸಿದರೂ.. ಫಲವಿಲ್ಲವೆಂದು….

 

 

M Rama ishwaramangala

M RAMA ISHWARAMANGALA

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ