ಆಧಾರ್‌ಗೆ ಪ್ಯಾನ್ ಲಿಂಕ್ ಮಾಡಲು ನಾಳೆ ಕಡೆಯ ದಿನ:ಲಿಂಕ್ ಮಾಡುವುದು ಹೇಗೆ
ಆಧಾರ್‌ಗೆ ಪ್ಯಾನ್ ಲಿಂಕ್ ಮಾಡಲು ನಾಳೆ ಕಡೆಯ ದಿನ:ಲಿಂಕ್ ಮಾಡುವುದು ಹೇಗೆ
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಗೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಆದಾಯ ತೆರಿಗೆ ಇಲಾಖೆ ಕಳೆದ ಮೂರು ತಿಂಗಳುಗಳಲ್ಲಿ ಹಲವು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಜೂನ್ 30ಕ್ಕೆ ಕೊನೆಯ ದಿನಾಂಕ ಎಂದು ಘೋಷಿಸಿತ್ತು. ಇದೀಗ ಆ ದಿನ ಬಂದಿದ್ದು, ನಾಳೆ ಒಳಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ.
ಆದಾಯ ತೆರಿಗೆ ನಿಯಮದ ಪ್ರಕಾರ ಪಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಹಿಂದೆ ಹಲವು ಬಾರಿ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯು ಅವಕಾಶ ನೀಡಿತ್ತು. ಹಲವು ಡೆಡ್‌ಲೈನ್ ನೀಡಿತ್ತು. ಆ ಡೆಡ್‌ಲೈನ್‌ಗಳೆಲ್ಲವೂ ಮುಗಿದ ಬಳಿಕ 1000 ರೂಪಾಯಿ ದಂಡ ಪಾವತಿಯೊಂದಿಗೆ ಪಾನ್ ಆಧಾರ್ ಲಿಂಕ್ ಮಾಡಲು ಕೊನೆಯ ಅವಕಾಶ ನೀಡಿತ್ತು. ಈ ರೀತಿ ದಂಡ ಪಾವತಿಯೊಂದಿಗೆ ಆಧಾರ್ ಪಾನ್ ಲಿಂಕ್ ಮಾಡಲು ನಾಳೆ ಅಂದರೆ ಜೂನ್ 30 ಕೊನೆಯ ದಿನವಾಗಿದೆ. ನೀವು ಇನ್ನೂ ಆಧಾರ್ ಪಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ನಾಳೆಯೊಳಗೆ 1000 ರೂಪಾಯಿ ದಂಡದೊಂದಿಗೆ ಲಿಂಕ್ ಮಾಡಿ.
“ಪಾನ್ ಕಾರ್ಡ್ ಹೊಂದಿರುವವರೇ ಗಮನಿಸಿ, ಪಾನ್ ಆಧಾರ್ ಲಿಂಕ್ ಮಾಡಿ! ಆದಾಯ ತೆರಿಗೆ ಕಾಯಿದೆ 1961ರ ಪ್ರಕಾರ ಪಾನ್ ಕಾರ್ಡ್ ಹೊಂದಿರುವ ಎಲ್ಲರೂ ಕಡ್ಡಾಯವಾಗಿ ಆಧಾರ್-ಪಾನ್ ಲಿಂಕ್ ಮಾಡಬೇಕು. ಪಾನ್ ಮತ್ತು ಆಧಾರ್ ಕಾರ್ಡ್ ಅನ್ನು 30.06.2023 ದಿನಾಂಕದ ಮೊದಲು ಲಿಂಕ್ ಮಾಡಿ. ದಯವಿಟ್ಟು ಇಂದೇ ನಿಮ್ಮ ಪಾನ್ ಮತ್ತು ಆಧಾರ್ ಲಿಂಕ್ ಮಾಡಿ” ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಪಾನ್-ಆಧಾರ್ ಲಿಂಕ್ ಮಾಡದೆ ಇದ್ದರೆ ಏನಾಗುತ್ತದೆ?
- ನಿಮ್ಮ ಪಾನ್ ಕಾರ್ಡ್ ಅನೂರ್ಜಿತ ಅಥವಾ ಕಾರ್ಯನಿರ್ವಹಿಸುವುದಿಲ್ಲ.
- ನೀವು ಪಡೆಯಬೇಕಿರುವ ತೆರಿಗೆ ರಿಫಂಡ್ ಮತ್ತು ಬಡ್ಡಿಗಳು ದೊರಕುವುದಿಲ್ಲ.
- ದೊಡ್ಡ ಮೊತ್ತದ ಟಿಡಿಎಸ್ ಕಡಿತವಾಗುತ್ತದೆ.
*ದೊಡ್ಡ ಮೊತ್ತದ ಟಿಸಿಎಸ್ ಕಡಿತವಾಗುತ್ತದೆ.
ಪ್ಯಾನ್ ಕಾರ್ಡ್ ನಿಷ್ಕ್ರಿಯವಾದ್ರೆ ಆಗುವ ಸಮಸ್ಯೆಗಳಿವು:
ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಿದಾಗ, ನಿಮ್ಮ ಹಲವು ಪ್ರಮುಖ ಕೆಲಸಗಳು ನಿಲ್ಲುತ್ತವೆ. ಮ್ಯೂಚುವಲ್ ಫಂಡ್‌ಗಳು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಇದರ ಹೊರತಾಗಿ, ನೀವು ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ 50 ಸಾವಿರ ರೂ.ಗಿಂತ ಹೆಚ್ಚಿನ ನಗದು ಹಿಂಪಡೆಯಲು ಬ್ಯಾಂಕ್‌ನಲ್ಲಿ ಪ್ಯಾನ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಒಂದೇ ಬಾರಿಗೆ ಅಷ್ಟು ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ನೀವು ತೆರಿಗೆ ಪ್ರಯೋಜನ, ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಸಾಲದಂತಹ ಸೌಲಭ್ಯಗಳಿಂದ ವಂಚಿತರಾಗಬಹುದು.
ಪಾನ್- ಆಧಾರ್ ಲಿಂಕ್ ಮಾಡುವುದು ಹೇಗೆ?
ಮೊದಲು www.incometax.gov.in/iec/foportal ವೆಬ್‌ಸೈಟ್‌ಗೆ ಹೋಗಿ ಲಾಗಿನ್ ಅಗಿ
ಡ್ಯಾಷ್‌ಬೋರ್ಡ್‌ನ ಪ್ರೊಫೈಲ್ ವಿಭಾಗದಲ್ಲಿ ಲಿಂಕ್ ಆಧಾರ್ ಟು ಪಾನ್ ಎಂಬ ಆಯ್ಕೆ ದೊರಕುತ್ತದೆ. ಅದನ್ನು ಕ್ಲಿಕ್ ಮಾಡಿ
ನಿಮ್ಮ ಪಾನ್ ಮತ್ತು ಆಧಾರ್ ಸಂಖ್ಯೆ ನಮೂದಿಸಿ
ಪಾನ್ ಸಂಖ್ಯೆ ನಮೂದಿಸಿ. ಪಾನ್ ಕಾರ್ಡ್ ಸಂಖ್ಯೆ ಖಚಿತಪಡಿಸಿ. ಮೊಬೈಲ್‌ಗೆ ಒಟಿಪಿ ಬರುತ್ತದೆ.
ಒಟಿಪಿ ವೇರಿಫಿಕೇಷನ್ ಮಾಡಿ, ಇ-ಪಾವತಿ ಟ್ಯಾಕ್ಸ್ ಪುಟಕ್ಕೆ ರಿಡೈರೆಕ್ಟ್ ಆಗುತ್ತದೆ.
– ಪ್ರೊಸಿಡ್ ಕ್ಲಿಕ್ ಮಾಡಿ.
– ಎವೈ ಅನ್ನು 2024-25 ಎಂದು ಸೆಲೆಕ್ಟ್ ಮಾಡಿ. ನಿಗದಿತ ಮೊತ್ತ ಪಾವತಿಸಿ.
ಗಮನಿಸಿ, ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ನಾಳೆ ಕೊನೆಯ ದಿನವಾಗಿದೆ. ಹಾಗಂತ, ನಾಳೆಯವರೆಗೆ ಕಾಯಬೇಡಿ. ಪಾನ್- ಆಧಾರ್ ಕಾರ್ಡ್ ಲಿಂಕ್ ಮಾಡುವ ವೆಬ್‌ಸೈಟ್‌ಗೆ ಅತ್ಯಧಿಕ ಸಂಖ್ಯೆಯ ಜನರು ಭೇಟಿ ನೀಡುವುದರಿಂದ ಸರ್ವರ್ ಸ್ಲೋ ಅಥವಾ ಡೌನ್ ಇರಬಹುದು. ಹೀಗಾಗಿ, ಈಗಲೇ ಲಿಂಕ್ ಮಾಡಲು ಮುಂದಾಗಿ.