• 18 ಅಕ್ಟೋಬರ್ 2024

ನೇಪಾಳದಲ್ಲಿ ಪ್ರಬಲ ಭೂಕಂಪ: 120ಕ್ಕೂ ಹೆಚ್ಚು ಸಾವು

 ನೇಪಾಳದಲ್ಲಿ ಪ್ರಬಲ ಭೂಕಂಪ: 120ಕ್ಕೂ ಹೆಚ್ಚು ಸಾವು
Digiqole Ad

ನೇಪಾಳದಲ್ಲಿ ಪ್ರಬಲ ಭೂಕಂಪ: 120ಕ್ಕೂ ಹೆಚ್ಚು ಸಾವು

ನೇಪಾಳದಲ್ಲಿ ಪ್ರಬಲ ಭೂಕಂಪನ ದಿಂದ 120ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪನದಲ್ಲಿ 6.4ತೀವ್ರತೆ ದಾಖಲೆ ಆಗಿದ್ದು, ಸಾವಿನ ಸಂಖ್ಯೆ ಬಹುತೇಕ 129ಕ್ಕೆ ಏರಿಕೆ ಆಗಿದೆ. ಸುಮಾರು 500 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ದೆಹಲಿಯ ಏನ್ ಸಿ ಆರ್ ಪ್ರದೇಶ, ಬಿಹಾರ, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶ ಸೇರಿದಂತೆ ಉತ್ತರ ಪ್ರದೇಶದಲ್ಲೂ ಭೀಕರ ಕಂಪನವಾಗಿದೆ ಎಂದು ವರದಿ ಆಗಿದೆ. ಶುಕ್ರವಾರ ರಾತ್ರಿ ನೇಪಾಳದ ಜಾಜರ್ಕೋಟ್‌ ಜಿಲ್ಲೆಯ ಲಮಿಡಾಂಡ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು ಜನರು ಕೂಡಲೇ ಭಯದಿಂದ ಮನೆ ಹೊರಗಡೆ ಓಡಿ ಬಂದಿದ್ದಾರೆ. ಆದರೆ ಭೂಕಂಪಕ್ಕೆ ಮನೆ, ಕಟ್ಟಡಗಳು ಕುಸಿದಿದ್ದು ಜಾಜರ್ಕೋಟ್‌ನಲ್ಲಿ 34, ಪಶ್ಚಿಮದ ರುಕುಮ್‌ ಜಿಲ್ಲೆಯಲ್ಲಿ 36 ಜನರು ಸಾವನ್ನಪ್ಪಿದ್ದು ಭೂಕಂಪಕ್ಕೆ ಒಟ್ಟು 120 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ನೇಪಾಳದ ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದ್ದು ಜಾಜರ್‌ಕೋಟ್ ಜಿಲ್ಲೆಯಲ್ಲಿ ಕಂಪನದ ಕೇಂದ್ರಬಿಂದು ಕಂಡುಬಂದಿದೆ. ಜಾಜಾರ್ಕೋಟ್ ನಲ್ಲಿ ಮಕ್ಕಳು ಸೇರಿದಂತೆ ಅಲ್ಲಿನ ಡೆಪ್ಯೂಟಿ ಮೇಯರ್ ಕೂಡ ಮೃತ ಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ