• 18 ಅಕ್ಟೋಬರ್ 2024

ರಾತ್ರಿ 10 ಗಂಟೆ ನಂತರ ಪಟಾಕಿ ನಿಷೇಧ

 ರಾತ್ರಿ 10 ಗಂಟೆ ನಂತರ ಪಟಾಕಿ ನಿಷೇಧ
Digiqole Ad

ರಾತ್ರಿ 10ಗಂಟೆ ನಂತರ ಪಟಾಕಿ ನಿಷೇಧ

ದೀಪಾವಳಿ ಬಂತೆಂದರೆ ಸಾಕು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಂಭ್ರಮವೋ ಸಂಭ್ರಮ. ಹೊಸ ಬಟ್ಟೆ, ವಿಧ ವಿಧವಾದ ಖಾದ್ಯಗಳನ್ನು ಸವಿಯುವ ಈ ಹಬ್ಬ ಮನೆ ಮನೆಯಲ್ಲಿ ಉಲ್ಲಾಸ ಮೂಡಿಸುವ ವಿಶೇಷ ಹಬ್ಬ. ಇನ್ನು ಮನೆ ಮನೆಯ ಅಂಗಳದಲ್ಲಿ ದೀಪಗಳದೇ ಉತ್ಸವ. ಇನ್ನು ಮಕ್ಕಳು ಮಕ್ಕಳು, ಯುವಕ ಯುವತಿಯರಂತು ಪಟಾಕಿಯೊಂದಿಗೆ ಮೋಜು ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಆದರೆ ಇದೀಗ ಸರ್ವೋಚ್ಛ ನ್ಯಾಯಾಲಯ ಪಟಾಕಿ ಪ್ರಿಯರಿಗೆ ಶಾಕ್ ನೀಡಿದೆ. ಇಡೀ ರಾತ್ರಿ ಪಟಾಕಿ ಒಡೆದು ದೀಪಾವಳಿ ಸಂಭ್ರಮಿಸುವಂತಿಲ್ಲ. ಬದಲಾಗಿ ಹಬ್ಬದ ಆಚರಣೆಗೆ ಮಾರ್ಗ ಸೂಚಿ ನೀಡಲಾಗಿದೆ. ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ರಾತ್ರಿ 10ಗಂಟೆಯ ನಂತರ ಯಾವುದೇ ಪಟಾಕಿಗಳ ಸ್ಫೋಟಿಸುವಂತಿಲ್ಲ, ಅದರಲ್ಲೂ ಹೆಚ್ಚಿನ ಶಬ್ಧಕೊಡುವಂತಹ ಪಟಾಕಿಗಳನ್ನು ಒಡೆಯುವಂತಿಲ್ಲ ಎಂದು ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಪಟಾಕಿ ಒಡೆಯುವ ಸಂದರ್ಭದಲ್ಲಿ ಜಗರೂಕತೆ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೇ ಪ್ರತಿ ವರ್ಷವೂ ಕೆಲವೆಡೆ ಪಟಾಕಿ ಅವಘಡ ಸಂಭವಿಸುತ್ತಿದ್ದು, ಪಟಾಕಿಯಿಂದ ಮಕ್ಕಳನ್ನು ಆದಷ್ಟು ಮುಂಜಾಗ್ರತೆ ವಹಿಸಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ