• 19 ಸೆಪ್ಟೆಂಬರ್ 2024

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ತುಳು ಶಿಕ್ಷಕರ ಗೌರವಧನ ಬಿಡುಗಡೆ.

 ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ತುಳು ಶಿಕ್ಷಕರ ಗೌರವಧನ ಬಿಡುಗಡೆ.
Digiqole Ad

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ತುಳು ಶಿಕ್ಷಕರ ಗೌರವಧನ ಬಿಡುಗಡೆ.

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ತುಳು ಪಠ್ಯವನ್ನು ಬೋಧಿಸುತ್ತಿರುವ ತುಳು ಶಿಕ್ಷಕರ 2023 ನೇ ಸಾಲಿನ ಗೌರವಧನ,10 ಲಕ್ಷ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ – ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಅವರು ತಿಳಿಸಿದ್ದಾರೆ. ತುಳು ಶಿಕ್ಷಕರ ಗೌರವಧನ ಬಿಡುಗಡೆಗೆ ಅನುಮೋದನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಮತ್ತು ಇಲಾಖೆಯ ನಿರ್ದೇಶಕಿ ಡಾ. ಧರಣಿದೇವಿ ಅವರಿಗೆ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. 2010 ರಲ್ಲಿ ತುಳು ಪಠ್ಯ ಐಚ್ಛಿಕ ವಿಷಯವಾಗಿ ಸೇರ್ಪಡೆಗೊಂಡಿತ್ತು. ಇದೀಗ ಪ್ರಸ್ತುತ ರಾಜ್ಯ ಪಠ್ಯಕ್ರಮದ ಅನ್ವಯ ನಡೆಯುವ 33 ಶಾಲೆಗಳಲ್ಲಿ ತುಳು ಪಠ್ಯ ಬೋಧಿಸಲಾಗುತ್ತಿದೆ.

ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ