• 28 ಜನವರಿ 2025

ಯೋಗಾಸನದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ನಿರಂತರ ಯೋಗ ಕೇಂದ್ರ ಸುಳ್ಯ ಮತ್ತು ಪುತ್ತೂರು ತಾಲೂಕಿನ ವಿದ್ಯಾರ್ಥಿಗಳು

 ಯೋಗಾಸನದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ನಿರಂತರ ಯೋಗ ಕೇಂದ್ರ ಸುಳ್ಯ ಮತ್ತು ಪುತ್ತೂರು ತಾಲೂಕಿನ ವಿದ್ಯಾರ್ಥಿಗಳು
Digiqole Ad

ಯೋಗಾಸನದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ನಿರಂತರ ಯೋಗ ಕೇಂದ್ರ ಸುಳ್ಯ ಮತ್ತು ಪುತ್ತೂರು ತಾಲೂಕಿನ ವಿದ್ಯಾರ್ಥಿಗಳು

ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್ (ರಿ. ) ಶಿವಮೊಗ್ಗ.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಸಹಯೋಗದೊಂದಿಗೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ 07ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯು ಡಿ. ವಿ. ಎಸ್ ರಂಗಮಂದಿರ ಶಿವಮೊಗ್ಗ ದಲ್ಲಿ ನಡೆಯಿತು.ಇದರಲ್ಲಿ ಭಾಗವಹಿಸಿದ
ನಿರಂತರ ಯೋಗ ಕೇಂದ್ರ ಪೆರ್ಲಂಪಾಡಿಯ ವಿದ್ಯಾರ್ಥಿ 6 ರಿಂದ 8 ವರ್ಷದ ಬಾಲಕರ ವಿಭಾಗದಲ್ಲಿ ಸುಹರ್ಥ್. ಪಿ ಬೆಳ್ಳಿ ಪದಕ.
11 ರಿಂದ 13 ವರ್ಷದ ಬಾಲಕಿಯರ ವಿಭಾಗದಲ್ಲಿ ತನ್ವಿ ಅಂಚನ್ 5 ನೇ ಸ್ಥಾನ.
ನಿರಂತರ ಯೋಗ ಕೇಂದ್ರ ಏನೇಕಲ್ಲಿ ನ ವಿದ್ಯಾರ್ಥಿನಿ 6 ರಿಂದ 8 ವರ್ಷದ ಬಾಲಕಿಯರ ವಿಭಾಗದಲ್ಲಿ ಸುಬಿಕ್ಷ ಬಾಲಾಡಿ ಕಂಚಿನ ಪದಕ.
11 ರಿಂದ 13 ವರ್ಷದ ಬಾಲಕಿಯರ ವಿಭಾಗದಲ್ಲಿ ಸುಖಿತಾ ಬಾಲಾಡಿ ಬೆಳ್ಳಿ ಪದಕ. 8 ರಿಂದ 10 ವರ್ಷದ ಬಾಲಕಿಯರ ವಿಭಾಗದಲ್ಲಿ ಅಕ್ಷಯ ಬಾಬ್ಲುಬೆಟ್ಟು 06 ನೇ ಸ್ಥಾನಗಳಿಸಿ ಡಿಸೆಂಬರ್ ತಿಂಗಳಲ್ಲಿ ಥೈಲ್ಯಾಂಡ್ ನಡೆಯಲಿರುವ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ನಿರಂತರ ಯೋಗ ಕೇಂದ್ರ ನಿಂತಿಕಲ್ಲು ಇಲ್ಲಿಯ ವಿದ್ಯಾರ್ಥಿ 8 ರಿಂದ 10 ವರ್ಷದ ಬಾಲಕರ ವಿಭಾಗದಲ್ಲಿ ಶ್ರೀನಿತ್ ರೈ ಚಿನ್ನದ ಪದಕ. ಚಾರ್ವಿಕ್. ಆರ್. ಕೆ. ಬೆಳ್ಳಿ ಪದಕ. 11 ರಿಂದ 13 ವರ್ಷದ ಬಾಲಕಿಯರ ವಿಭಾಗದಲ್ಲಿ ಛಾಯಾ ನಾವೂರು 06 ನೇ ಸ್ಥಾನ.
ನಿರಂತರ ಯೋಗ ಕೇಂದ್ರ ಪಂಜ ಇಲ್ಲಿ ವಿದ್ಯಾರ್ಥಿ 8 ರಿಂದ 10 ವರ್ಷದ ಬಾಲಕಿಯರ ವಿಭಾಗದಲ್ಲಿ ಅನ್ವಿತಾ ಶೆಟ್ಟಿ ಚಿನ್ನದ ಪದಕ.
11 ರಿಂದ 13 ವರ್ಷದ ಬಾಲಕರ ವಿಭಾಗದಲ್ಲಿ ಪೂರ್ವಿತ್. ಐ. ಸಿ. 5ನೇ ಸ್ಥಾನ.
ಇವರು ನಿರಂತರ ಯೋಗ ಕೇಂದ್ರ ದಕ್ಷಿಣ ಕನ್ನಡ ಜಿಲ್ಲೆಯ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ